ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಭಾರೀ ವೈರಲ್‌ ಆಗಿದೆ. ಈ ಕಾರಣಕ್ಕೆ ನಟಿ ಶ್ರುತಿ ಹಾಸನ್ ಹಾಗೂ ಶಂತನು ಹಜಾರಿಕಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

ಬಹುಭಾಷಾ ನಟಿ ಶ್ರುತಿ ಹಾಸನ್ (Shruti Haasan) ಮತ್ತು ಅವರ ಬಾಯ್‌ಫ್ರೆಂಡ್‌ ಶಂತನು ಹಜಾರಿಕಾ (Santanu Hazarika) ಈ ಇಬ್ಬರೂ ಆಗಾಗ ಒಟ್ಟಿಗೆ ಇರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ (Orhan Awatramani) ಇತ್ತೀಚೆಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ಅದೀಗ ಭಾರೀ ವೈರಲ್ ಆಗುತ್ತಿದೆ. 

ಹಾಗಿದ್ದರೆ ಒರ್ಹಾನ್​ ಅವತ್ರಮಣಿ ಮಾಡಿರುವ ಅವಾಂತರವೇನು? ಹೌದು, ಅವರೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಒರಿ ಒಂದು ಪ್ರಶ್ನೋತ್ತರ ನಡೆಸಿದರು. ಅದರಲ್ಲಿ ʻಶ್ರುತಿ ಹಾಸನ್​ ಗಂಡನ ಜತೆ ನನಗೆ ಸ್ನೇಹ ಇದೆ' ಎಂದು ಹೇಳಿಬಿಟ್ಟರು. ಅಲ್ಲಿಂದ ಶುರುವಾಯ್ತು ನೋಡಿ, ನೆಟ್ಟಿಗರ ಭಾರೀ ಚರ್ಚೆ! ಈಗ ಅದು 'ಶ್ರುತಿ ಹಾಸನ್ ಗುಟ್ಟಾಗಿ ಮದುವೆ ಆಗಿದ್ದಾರೆ' ಎಂಬಲ್ಲಿಗೆ ಬಂದು ನಿಂತಿದೆ. ಮುಂದೆಲ್ಲಿಗೆ ಹೋಗುವುದೋ ಎಂಬುದನ್ನು ಕಾದು ನೋಡಬೇಕು. 

ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್‌ ಬಿಚ್ಚಿಟ್ಟ ನೆಟ್ಟಿಗರು!

ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಭಾರೀ ವೈರಲ್‌ ಆಗಿದೆ. ಈ ಕಾರಣಕ್ಕೆ ನಟಿ ಶ್ರುತಿ ಹಾಸನ್ ಹಾಗೂ ಶಂತನು ಹಜಾರಿಕಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಶ್ರುತಿ ಹಾಸನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ನಾನು ಮದುವೆಯಾಗಿಲ್ಲ. ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿ ಹಂಚಿಕೊಳ್ಳುವ ನಾನು ಈ ಸಂಗತಿಯನ್ನು ಯಾಕೆ ಮುಚ್ಚಿಡಲಿ ಹೇಳಿ? ಗೊತ್ತಿಲ್ಲದೇ ಇರುವವರು ದಯವಿಟ್ಟು ಸುಮ್ಮನೆ ಇರಿ' ಎಂದು ಬರೆದುಕೊಂಡಿದ್ದಾರೆ. ಶಂತನು ಹಜಾರಿಕಾ 'ನಾವು ಮದುವೆಯಾಗಿಲ್ಲ. ಈ ರೀತಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ' ಎಂದು ಬರೆದುಕೊಂಡಿದ್ದಾರೆ.

ಬ್ರಿಟಿಷ್ ಮೂಲವನ್ನು ಒಪ್ಪಿಕೊಂಡ್ರಾ ಆಲಿಯಾ ಭಟ್; ಮಹೇಶ್ ಭಟ್ ಮಗಳ ಕಥೆ ವಿಚಿತ್ರವಾಗಿದೆ ಅಂದ್ಕೊಂಡ್ರಲ್ವಾ!

ಅಂದಹಾಗೆ, ನಟಿ ಶ್ರುತಿ ಹಾಸನ್ ಮುಂಬೈನಲ್ಲಿ ತನ್ನ ಗೆಳೆಯ ಶಂತನು ಹಜಾರಿಕಾ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. ಇಬ್ಬರೂ ಒಬ್ಬರೊಗೊಬ್ಬರು ಅನ್ಯೋನ್ಯವಾಗಿದ್ದಾರೆ. ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದರು. ಅದರಲ್ಲಿ 'ಶ್ರುತಿ ಹಾಸನ್​ ಗಂಡನ ಜತೆ ನನಗೆ ಸ್ನೇಹ ಇದೆ' ಎಂದು ಹೇಳಿದರು. ಅಲ್ಲಿಂದ ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಈಗ ಅದಕ್ಕೊಂದು ಇತಿಶ್ರೀ ಹಾಡಿದಂತೆ ಆಗಿದೆ ಎನ್ನಬಹುದು. 

ಕತ್ರಿನಾ ಜತೆ ಲಂಡನ್‌ನಲ್ಲಿ ಸುಮಧುರ ಕ್ಷಣಗಳನ್ನು ಕಳೆದಿದ್ದೇನೆ, ಆಕೆ ವಿಶಾಲ ಹೃದಯಿ; ನಟ ಶಾರುಖ್ ಖಾನ್