ಬಾಂದ್ರಾದಲ್ಲಿರುವ ಲಾರಾ ಮನೆ ಸೀಲ್‌ಡೌನ್ ಮಾಡಿದ ಬಿಎಮ್‌ಸಿ. ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಅಭಿಮಾನಿಗಳು ಆರೈಕೆ.
ಮುಂಬೈ: ಬಾಲಿವುಡ್ ನಟಿ ಲಾರಾ ದತ್ತಾ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಲಾರಾ ಅವರ ಬಾಂದ್ರಾ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ ಹಾಗೂ ಮೈಕ್ರೋ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಬಿಎಂಸಿ ಅಧಿಕಾರಿಗಳು ಲಾರಾ ದತ್ತಾ ಮನೆಯ ಮುಂದೆ ಬೋರ್ಡ್ ಹಾಕಿದ್ದು, ಈ ಮನೆಯ ನಿವಾಸಿಗಳು ಕೋವಿಡ್ ಪಾಸಿಟಿವ್‌ಗೆ ತುತ್ತಾಗಿದ್ದು, ಈ ಪ್ರದೇಶವನ್ನು ಮೈಕ್ರೋ ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ನಿಯಮಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಎಂಬ ಬೋರ್ಡ್ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೋಂಕು ತಗುಲಿರುವುದರ ಬಗ್ಗೆ ನಟಿ ಯಾವುದೇ ಹೇಳಿಕೆ ನೀಡಿಲ್ಲ ಆದರೆ ಪಿಂಕ್‌ವಿಲ್ಲಾ ನೀಡಿರುವ ಮಾಹಿತಿ ಪ್ರಕಾರ ಲಾರಾ ಅವರಿಗೆ ಮಾತ್ರ ಕೊರೋನಾ ಪಾಸಿಟಿವ್ ಆಗಿದೆ.
ಕೊರೋನಾ ಸೋಂಕು ದೃಢವಾದ ನಂತರ ಮಕ್ಕಳ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಆಗ ಮತ್ತು ಈಗ. 4 ವರ್ಷದಿಂದ ಈಗ 10 ವರ್ಷಗಳು.ಈ ಇಬ್ಬರು ಸ್ಪೈಡರ್ ಮ್ಯಾನ್‌ಗಳು ಸದಾ ರಾಕಿಂಗ್.' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಲಾರಾ ಪುತ್ರಿ celina jaitly's ಅವಳಿ ಮಕ್ಕಳ ಜೊತೆ ಪೋಸ್ ಕೊಟ್ಟಿದ್ದಾರೆ ಕಾಂಟ್ರವರ್ಸಿ ಕ್ರಿಯೇಟ್ ಆಗಬಾರದು ಎಂದು ಇದು ಹಳೆ ಫೋಟೋಗಳು ಎಂದಿದ್ದಾರೆ.
![]()
ಅಕ್ಷಯ್ ಕುಮಾರ್, ವಾಣಿ ಕಪೂರ್ ಮತ್ತು ಹುಮಾ ಖುರೇಷಿ ಜೊತೆ ಬೆಲ್ ಬಾಟಮ್‌ನಲ್ಲಿ ನಟಿಸಿದ ನಂತರ ಯಾವ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ ಆದರೆ ಡಿಜಿಟಲ್ ಎರಾದಲ್ಲಿ ಇರಲೇ ಬೇಕು ಎಂದು Hiccups and Hookups, hundred ಮತ್ತು ಕೌನ್ ಬನೇಗಿ ಶಿಖರವತಿ ನಟಿಸುತ್ತಿದ್ದಾರೆ.
'ನನ್ನ ಪುತ್ರಿ ಸಾಯಿರಾಗೆ ಈಗ 10 ವರ್ಷ. ತಾಯಿತನ ನನ್ನನ್ನು ತುಂಬಾನೇ ಬದಲಾಯಿಸಿದೆ. ಆಕೆ ಹುಟ್ಟಿದ 6 ತಿಂಗಳಿಗೆ ತಾತ ಅಜ್ಜಿ ಜೊತೆ ಬಿಟ್ಟು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದೆ. ಸಿನಿಮಾ ಕಥೆ ಹೇಳಿದಾಗ ಅದ್ಭುತ ಅನಿಸಿತ್ತು ಸಿನಿಮಾ ಮಾಡಲೇ ಬೇಕೆಂದು ನಾನು ಒಪ್ಪಿಕೊಂಡೆ ಆದರೆ ಆ ಸಮಯದಲ್ಲಿ ನಾನು ಇನ್ನೂ ಎದೆಹಾಲು ಕೊಡುತ್ತಿದ್ದೆ. ಚಿತ್ರೀಕರಣ ಮಾಡಿ ಬ್ರೇಕ್ ತೆಗೆದುಕೊಂಡು ಹೋಗಿ ಫೀಡ್ ಮಾಡಿ ಬರುತ್ತಿದ್ದೆ. ಪ್ರಯಾಣ ಮಾಡಲು ಆಗದಿದ್ದರೆ ಆಕೆಯನ್ನು ಸಿನಿಮಾ ಸೆಟ್‌ಗೆ ಕರೆಸಿಕೊಳ್ಳುತ್ತಿದ್ದೆ. ನನಗೆ ಪರ್ಸನಲ್ ಟೈಂ ಬೇಕು ಎಂದು ಮಗಳನ್ನು ಬಿಟ್ಟು ಹೋಗಿದ್ದು ಅಂದ್ರೆ ನಮ್ಮ ಗರ್ಲ್ಸ್ ಟ್ರಿಪ್. ನಾನು ಇಲ್ಲದಾಗ ಆಕೆ ಗಲಾಟೆ ಮಾಡಿದರೆ ಏನು ಮಾಡಬೇಕು ಎಂದು ದೊಡ್ಡ ಲಿಸ್ಟ್ ಕೊಟ್ಟು ಹೋಗಿದ್ದೆ' ಎಂದು ಕಳೆದ ವಾರ ಲಾರಾ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Lara Dutta: ಕೋಟಿ ಸಂಪಾದಿಸೋ ನಟಿಗೆ ಮೊಬೈಲ್ ಕವರ್ ತೆಗಿಯೋಕೆ ದುಡ್ಡಿಲ್ವಾ?
'ತಾಯಿ ಆದ ಮೇಲೆ ನನ್ನನ್ನು ನಾನು ಹೆಚ್ಚು ಪ್ರೀತಿಸುವುದಕ್ಕೆ ಶುರು ಮಾಡಿರುವೆ. ನನ್ನ ಮಗಳಿಂದ ನಾನು ದೂರ ಪ್ರಯಾಣ ಮಾಡಿ ಚಿತ್ರೀಕರಣ ಮಾಡಬೇಕು ಹೀಗಾಗಿ ಯಾವ ಪಾತ್ರ ನ್ಯಾಯ ಕೊಡುತ್ತದೆ ಎಂದು ಚಿಂತಿಸಿ ಆಯ್ಕೆ ಮಾಡಿಕೊಳ್ಳುವೆ. ಪತಿ ಮಹೇಶ್ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಅವರು ಕೂಡ ಮಗಳ ಜೊತೆ ಸಮಯ ಕಳೆಯಬೇಕು ಎಂದು ಒತ್ತಾಯ ಮಾಡುವೆ. ಪೋಷಕರಾಗಿ ನಾವಿಬ್ಬರೂ ಪೇರೆಂಟಿಂಗ್ ಲೈಫ್‌ನ ನಿಭಾಯಿಸುತ್ತೀವಿ. ಮಗಳು ಹುಟ್ಟಿದ್ದಾಗ ಮಹೇಶ್ ತುಂಬಾನೇ ಪ್ರಯಾಣ ಮಾಡುತ್ತಿದ್ದರು. ಮಗಳು ಹುಟ್ಟಿದ 10 ದಿನಗಳ ನಂತರ ಮಹೇಶ್ ಮನೆಗೆ ಬಂದರು. ಆವರು ಮನೆ ಪ್ರವೇಶಿಸುತ್ತಿದ್ದಂತೆ ಮಗಳು ಎಲ್ಲಿ ಎಂದು ಕೇಳಿದರು ಆಗ ನಾನು ಅವರ ಕೈಗೆ ಹಾಲಿನ ಬಾಟಲ್ ಕೊಟ್ಟು ಮಗಳ ಜೊತೆ ಬಿಟ್ಟೆ. ಸಮಯ ಬಂದಾಗ ಇಬ್ಬರೂ ಡೈಪರ್ ಬದಲಾಯಿಸಬೇಕು ಎಂದು ಹೇಳಿದ್ದೆ. ಅದೆಲ್ಲಾ ಅದ್ಭುತ ಜರ್ನಿ. ಮದರ್‌ವುಡ್ ಎಂಜಾಯ್ ಮಾಡಿರುವೆ' ಎಂದು ಲಾರಾ ಹೇಳಿದ್ದರು.
