ಕುಂಭಮೇಳದ ವೈರಲ್ ಹುಡುಗಿ ಮೋನಾಲಿಸಾ ನಟಿಸಬೇಕಿದ್ದ "ದಿ ಡೈರಿ ಆಫ್ ಮಣಿಪುರ" ಸಿನಿಮಾ ವಿವಾದಕ್ಕೆ ಸಿಲುಕಿದೆ. ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಅವರು ಐವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 10 ಕೋಟಿ ರೂ. ಬಜೆಟ್‌ನ ಈ ಚಿತ್ರಕ್ಕೆ ಮೋನಾಲಿಸಾಗೆ ಹಣ ನೀಡಲಾಗಿದೆ ಎನ್ನಲಾಗಿದ್ದು, ಶೂಟಿಂಗ್ ಆರಂಭಕ್ಕೂ ಮುನ್ನವೇ ವಿವಾದ ಸೃಷ್ಟಿಯಾಗಿದೆ. ಮೋನಾಲಿಸಾ ಸಿನಿಮಾ ಮಾಡುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕುಂಭ ಮೇಳ (Kumbh Mela )ದ ವೈರಲ್ ಗರ್ಲ್ ಮೋನಾಲಿಸಾ (Viral Girl Monalisa) ನಟಿಸ್ಬೇಕಿದ್ದ ಸಿನಿಮಾ, ಶೂಟಿಂಗ್ ಮುನ್ನವೇ ವಿವಾದಕ್ಕೆ ಸಿಲುಕಿದೆ. ಮೋನಾಲಿಸಾ, ದಿ ಡೈರಿ ಆಫ್ ಮಣಿಪುರ (The Diary of Manipur) ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆದ್ರೆ ದಿ ಡೈರಿ ಆಫ್ ಮಣಿಪುರಿ ಆರಂಭದಲ್ಲಿಯೇ ವಿವಾದಗಳಿಂದ ಸುತ್ತುವರೆದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ (Director Sanoj Mishra) ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳ ನಂತ್ರ ಮಿಶ್ರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸನೋಜ್ ಮಿಶ್ರಾ, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಮಂದಿ, ಮಾನಹಾನಿ ಮಾಡಿದ್ದಾರೆಂದು ಮಿಶ್ರಾ ಆರೋಪಿಸಿದ್ದಾರೆ. 10 ಕೋಟಿ ಬಜೆಟ್‌ನ ಈ ಚಿತ್ರಕ್ಕಾಗಿ ಮೊನಾಲಿಸಾಗೆ ಈಗಾಗಲೇ ಮಿಶ್ರಾ ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಆದ್ರೆ ಮಿಶ್ರಾ ಹಣ ನೀಡಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ. ಇದಲ್ಲದೆ ಸನೋಜ್ ಮಿಶ್ರಾ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈಗ ಮಿಶ್ರಾ, ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್‌ನಲ್ಲಿ ವಾಸಿಂ ರಿಜ್ವಿ (ಜಿತೇಂದ್ರ ನಾರಾಯಣ್ ತ್ಯಾಗಿ), ರವಿ ಸುಧಾ ಚೌಧರಿ, ಮಹಿ ಆನಂದ್, ಮರುತ್ ಸಿಂಗ್ ಮತ್ತು ಯೂಟ್ಯೂಬ್ ಚಾನೆಲ್‌ನ ಮಾಲೀಕ ಅಭಿಷೇಕ್ ಉಪಾಧ್ಯಾಯ ಹೆಸರಿದೆ. ಈ ಐವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ. ಮೋನಾಲಿಸಾ ಜೊತೆ ಸಿನಿಮಾ ಮಾಡೋದು ಅವರಿಗೆ ಇಷ್ಟವಿಲ್ಲ ಎಂದು ಮಿಶ್ರಾ ಆರೋಪ ಮಾಡಿದ್ದಾರೆ.
ಹರಿದಾಡುತ್ತಿದೆ ಕುಂಭಮೇಳ ಸುಂದರಿ ಮೊನಾಲಿಸಾ ಡೀಪ್‌ಫೇಕ್ ವೀಡಿಯೋ
ಮಿಶ್ರಾ ಈವರೆಗೆ ಯಾವುದೇ ಸಿನಿಮಾ ಮಾಡಿಲ್ಲ, ಅವರ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಅವರು ಮುಗ್ದ ಹುಡುಗಿ ಮೋನಾಲಿಸಾರನ್ನು ನಂಬಿಸ್ತಿದ್ದಾರೆಂದು ರಿಜ್ವಿ ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಮಿಶ್ರಾ ಪ್ರತಿಕ್ರಿಯೆ ನೀಡಿದ್ದರು. ಮಿಶ್ರಾ ಆರೋಪ ಸುಳ್ಳು ಎಂದಿದ್ದರು. ಅಲ್ಲಿಗೆ ವಿಷ್ಯ ಶಾಂತವಾಯ್ತು ಅಂದ್ಕೊಂಡವರಿಗೆ ಈಗ ಶಾಕ್ ಆಗಿದೆ. ಮಿಶ್ರಾ ಪ್ರಕರಣವನ್ನು ಕಾನೂನು ಕೈಗೆ ನೀಡಿದ್ದಾರೆ. 10 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಮೋನಾಲಿಸಾಗೆ ಟ್ರೈನಿಂಗ್ ನೀಡ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗ್ತಿದೆ. ಮೋನಾಲಿಸಾಗೆ ಮಿಶ್ರಾ ಹಣ ನೀಡಿರೋದಾಗಿ ಹೇಳಿದ್ದಾರೆ. ಆದ್ರೆ ಆರಂಭದಲ್ಲೇ ವಿವಾದ ಶುರುವಾಗಿರುವ ಕಾರಣ, ಮೋನಾಲಿಸಾ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಮೊನಾಲಿಸಾಗೆ ವಜ್ರದ ಹಾರ! 'ಬಲಿ ಕಾ ಬಕ್ರಾ' ಆಗ್ತಿದ್ದಾಳಾ ಕುಂಭಮೇಳದ ಸುಂದರಿ? ಅಭಿಮಾನಿಗಳಲ್ಲಿ ಆತಂಕ...
ಮಹಾಕುಂಭ ಮೇಳದಲ್ಲಿ ರಾತ್ರೋರಾತ್ರಿ ವೈರಲ್ ಆದ ಹುಡುಗಿ ಮೋನಾಲಿಸಾ. ತಮ್ಮ ಸುಂದರ ಕಣ್ಣುಗಳಿಂದ ಎಲ್ಲರ ಗಮನ ಸೆಳೆದಿದ್ದ ಮೋನಾಲಿಸಾಗೆ ಈ ಪ್ರಸಿದ್ಧಿಯೇ ಮುಳುವಾಯ್ತು. ಮೋನಾಲಿಸಾ ಹಿಂದೆ ಜನರ ದಂಡೇ ಬಂದ ಕಾರಣ ಅವರು ಕುಂಭಮೇಳ ಬಿಟ್ಟು ಮನೆಗೆ ಬಂದಿದ್ದರು. ಮಾಲೆ ಮಾರಾಟ ಮಾಡ್ತಿದ್ದ ಹುಡುಗಿ ಮಿಶ್ರಾರಿಂದ ಬಾಲಿವುಡ್ ಪ್ರವೇಶ ಮಾಡುವಂತಾಗಿದೆ. ಮೋನಾಲಿಸಾ ಮನೆಗೆ ಭೇಟಿ ನೀಡಿ, ಸಿನಿಮಾದಲ್ಲಿ ನಟಿಸುವಂತೆ ಮಿಶ್ರಾ ಆಫರ್ ನೀಡಿದ್ದರು. ಅದಕ್ಕೆ ಮೋನಾಲಿಸಾ ಒಪ್ಪಿಗೆ ನೀಡಿದ್ದರು. ನಂತ್ರ ಮೋನಾಲಿಸಾಗೆ ಆಕ್ಟಿಂಗ್ ತರಬೇತಿ ನೀಡಲಾಗ್ತಿದೆ. ಮಿಶ್ರಾ, ಮೋನಾಲಿಸಾಗೆ ಅಕ್ಷರಾಭ್ಯಾಸ ಮಾಡ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಸಿನಿಮಾ ಜೊತೆ ರೀಲ್ಸ್, ವಿಡಿಯೋ ಅಂತ ಮೋನಾಲಿಸಾ ಬ್ಯುಸಿಯಿದ್ದಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ಮೋನಾಲಿಸಾರನ್ನು ಸಿನಿಮಾದಲ್ಲಿ ನೋಡುವ ಆಸೆಯನ್ನು ಫ್ಯಾನ್ಸ್ ವ್ಯಕ್ತಪಡಿಸಿದ್ದಾರೆ.