ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನೆಪೊಟಿಸಂ ವಿಚಾರದಲ್ಲಿ ಹೈಲೈಟ್ ಆದ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಮುಂಬೈ ಬಂಗಲೆ, ಶಿವಸೇನೆ ಜೊತೆಗಿನ ಗುದ್ದಾಟ, ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಹೈಲೈಟ್ ಆಗುತ್ತಿದ್ದಾರೆ.

ನಟಿ ಜಯಾಬಚ್ಚನ್ ಹಾಗು ಊರ್ಮಿಳಾ ಮಾಂಟೋಡ್ಕರ್ ವಿರುದ್ಧವೂ ಕಂಗನಾ ಹೇಳಿಕೆ ನೀಡಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಸಿಬಿಐ ಬೇಕೆಂದು ಆಗ್ರಹಿಸಿದ್ದ ನಟಿ ಕೃತಿ ಸೆನೋನ್ ಈಗ ಪ್ರಸ್ತುತ ಸ್ಥಿತಿಯ ಬಗ್ಗೆ ಮಾರ್ಮಿಕವಾಗಿ ಪೋಸ್ಟ್ ಹಾಕಿದ್ದಾರೆ.

ಜಯಾ ಬಚ್ಚನ್‌ಗೆ ತಿರುಗೇಟು: ನೀವು ನಮಗೆ ಅನ್ನ ಕೊಟ್ಟಿಲ್ಲ, ಇಂಡಸ್ಟ್ರಿ ಯಾರಪ್ಪನ ಆಸ್ತಿಯೂ ಅಲ್ಲ ಎಂದ 'ಶಕ್ತಿಮಾನ್'

ಅವರು ನಿಮಗಾಗಿ ಹೋರಾಡುತ್ತಾರೆ. ನಂತರ ಅವರವರೊಳಗೇ ಕಚ್ಚಾಡುತ್ತಾರೆ, ಮತ್ತು ಇದಿನ್ನು ನಿಮ್ಮ ಬಗೆಗಿನ ಹೋರಾಟವಲ್ಲ. ಇದು ಅವರ ಬಗೆಗೆ, ಯಾವತ್ತೂ ಅವರಿಗಾಗಿಯೇ ಹೋರಾಡಿದರೇನೋ ಎಂದು ಬರೆದಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.

 
 
 
 
 
 
 
 
 
 
 
 
 
 
 

A post shared by Kriti (@kritisanon) on Sep 17, 2020 at 7:14am PDT

ನಟ ವರುಣ್ ಧವನ್, ಆಲಿಯಾ ಭಟ್, ಅರ್ಜುನ್ ಕಪೂರ್, ಪ್ರೀತಿ ಝಿಂಟಾ ಕೃತಿ ಪೋಸ್ಟ್ ಲೈಕ್ ಮಾಡಿದ್ದಾರೆ. ಕಂಗನಾ ಸೆಲೆಬ್ರಿಟಿಗಳ ಜೊತೆ ಜಗಳ ಮಾಡೋದಲ್ಲದೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜೊತೆಗೂ ವಾಕ್ಸಮರ ನಡೆಸುತ್ತಿದ್ದಾರೆ. ಶಿವಸೇನೆ ಮೇಲೆಯೂ ನಟಿ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.