ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಬಾಲಿವುಡ್‌ ವಿರುದ್ಧ ಕೇಳಿ ಬರುತ್ತಿರುವ ಡ್ರಗ್ಸ್ ಆರೋಪದ ಬಗ್ಗೆ ಮಾತನಾಡಿದ್ದರು. ಬಾಲಿವುಡ್‌ನಲ್ಲಿದ್ದುಕೊಂಡು ಡ್ರಗ್ಸ್ ಆರೋಪ ಮಾಡೋದು ಉಂಡ ತಟ್ಟೆಗೆ ತೂತು ಮಾಡಿದಂತೆ ಎಂದು ಸಂಸದೆ ಝೀರೋ ಹವರ್‌ನಲ್ಲಿ ಹೇಳಿದ್ದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ಅವರು ಇದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜಯಾ ಹೇಳಿಕೆ ಹಾಸ್ಯಾಸ್ಪದ. ಇಂಡಸ್ಟ್ರಿಯಲ್ಲಿ ಯಾರದರೂ ದುಡಿದು ತಿಂದರೆ ಇಂಡಸ್ಟ್ರಿ ವಿರುದ್ಧ ಏನೂ ಮಾತಾಡಬಾರದು ಎಂದೇನಿಲ್ಲ ಎಂದು ಉತ್ತರಿಸಿದ್ದಾರೆ.

 

ಇಂಡಸ್ಟ್ರಿಯಲ್ಲೇ ದುಡಿದು ಗಳಿಸಿ, ಎಲ್ಲವನ್ನೂ ಇಲ್ಲಿಯೇ ಮಾಡಿದ್ದರೆ ಅದರರ್ಥ ಇಂಡಸ್ಟ್ರಿ ವಿರುದ್ಧ ಏನೂ ಮಾತನಾಡಬಾರದೆಂದಲ್ಲ. ಎಲ್ಲರಿಗೂ ಇಲ್ಲಿ ಕೆಲಸ ಮಾಡು ಹಕ್ಕಿದೆ. ಯಾರೂ ಇಂಡಸ್ಟ್ರಿಯ ಮಾಲೀಕರಲ್ಲ, ಇಂಡಸ್ಟ್ರಿ ಯಾರಪ್ಪನ ಆಸ್ತಿಯೂ ಅಲ್ಲ, ಇಂಡಸ್ಟ್ರಿ ಬಹಳ ಹಿಂದಿನಿಂದಲೇ ನಡೆದುಬಂದಿದೆ. ಇತ್ತೀಚಿನ ದಿನಗಳಲ್ಲಿ ನೆಪೊಟಿಸಂ, ಗ್ರೂಪಿಸಂ ಹೆಚ್ಚಾಗಿದೆ ಎಂದಿದ್ದಾರೆ.

ಬಿಜೆಪಿ ಸಂಸದ ರವಿ ಕಿಶನ್ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, ಡ್ರಗ್ಸ್ ಬಗ್ಗೆ ತನಿಖೆ ನಡೆಸೋದರ ಬಗ್ಗೆ ಸಮಾಧಾನಪಡದವರು ಇದು ನಡೆಯುತ್ತದೆ ಎಂದು ಹೇಳಿಕೆ ಕೊಡ್ತಾರೆ. ಇನ್ನು ಕೆಲವರು ತಿಂದ ತಟ್ಟೆಯಲ್ಲಿ ತೂತು ಮಾಡಿದಂತೆ ಅಂತಾರೆ, ಇದು ನಿಜಕ್ಕೂ ಹಾಸ್ಯಾಸ್ಪದ ಎಂದಿದ್ದಾರೆ.