ಮಾಡೆಲಿಂಗ್​ ದಿನದ ಆರಂಭದಲ್ಲಿ ತಾವು ಅಳುತ್ತಾ ಮನೆಗೆ ಬಂದಿದ್ದ ದಿನಗಳನ್ನು ನಟಿ ಕೃತಿ ಸನೋನ್​ ನೆನಪಿಸಿಕೊಂಡಿದ್ದಾರೆ.  ಏನದು?  

ನಟಿ ಕೃತಿ ಸನೋನ್​ (Kriti Sanon) ಅವರು ಸದ್ಯ ಬಾಲಿವುಡ್​ನಲ್ಲಿ ಸಕತ್​ ಬಿಜಿಯಾಗಿದ್ದಾರೆ. ಸದ್ಯ ಅವರು 600 ಕೋಟಿ ರೂ. ಬಜೆಟ್‌ನ ದೊಡ್ಡ ಸಿನಿಮಾ 'ಆದಿಪುರುಷ್'ನಲ್ಲಿ ನಟ ಪ್ರಭಾಸ್ ಜತೆಗೆ ಕಾಣಿಸಿಕೊಂಡಿದ್ದಾರೆ. ಜೂನ್ 16ರಂದು ವಿಶ್ವಾದ್ಯಂತ 3ಡಿ ಅವತರಣಿಕೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾದ ಟ್ರೈಲರ್ ಇದೇ 9ರಂದು ಬಿಡುಗಡೆಯಾಗಿದೆ. 3 ನಿಮಿಷ 19 ಸೆಕೆಂಡ್​ನ ಟ್ರೇಲರ್ ಗಮನ ಸೆಳೆದಿದೆ. ಈಗಾಗಲೇ ರಾಮಾಯಣ ಆಧರಿಸಿ ಹಲವು ಧಾರಾವಾಹಿ ಹಾಗೂ ಸಿನಿಮಾಗಳು ಬಂದು ಹೋಗಿವೆ. ಆದಾಗ್ಯೂ ಓಂ ರಾವತ್ ಇದೇ ಕಥೆ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಮನಾಗಿ ಪ್ರಭಾಸ್ (Prabhas) ಕಾಣಿಸಿಕೊಂಡಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನೋನ್ ಬಣ್ಣ ಹಚ್ಚಿದ್ದಾರೆ. ಟ್ರೇಲರ್ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಕೃತಿ 'ಆದಿಪುರುಷ' ಚಿತ್ರದಲ್ಲಿ ಜಾನಕಿ ಪಾತ್ರ ನಿರ್ವಹಿಸುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆಯನ್ನು ತೀವ್ರವಾಗಿ ಹೊಗಳುತ್ತಿದ್ದಾರೆ. 

ಈಗ ಸುದ್ದಿಯಲ್ಲಿರುವ ಕೃತಿಯ ಹಿಂದಿನ ಜೀವನದ ಗುಟ್ಟೊಂದು ಬಯಲಾಗಿದೆ. ಅದೇನೆಂದರೆ, ಕೃತಿ ಬಾಲಿವುಡ್​ಗೆ ಎಂಟ್ರಿ ಕೊಡುವ ಮೊದಲು ಮಾಡೆಲಿಂಗ್​ ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡವರು. ಕೃತಿ ಮೊದಲು ಬಣ್ಣ ಹಚ್ಚಿದ್ದು ತೆಲುಗು ಸಿನಿಮಾ 'ನೇನೊಕ್ಕಡಿನೇ' ಮೂಲಕ. ಅದರಲ್ಲಿ ಮಹೇಶ್ ಬಾಬು ಹೀರೋ. ಅದಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು ಕೃತಿ. ಹೊಸದಾಗಿ ಮಾಡೆಲಿಂಗ್​ ಕ್ಷೇತ್ರಕ್ಕೆ ಬಂದಾಗ ತಮಗಾಗಿದ್ದ ಕಹಿ ಅನುಭವವನ್ನು ಅವರು ಈಗ ಶೇರ್​ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಫೋಟೋಶೂಟ್ (Photoshoot) ಮಾಡಿಸುವಾಗ ಕಣ್ಣೀರು ಹಾಕಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮಾಡೆಲಿಂಗ್​ ಆರಂಭಿಸಿದಾಗ ಮೊದಲು ಬಾರಿ ಫೋಟೋಶೂಟ್​ ಮಾಡಿಸಿದ ದಿನ ಅವರು ಕಣ್ಣೀರು ಹಾಕಿದ್ದೆ, ಅಳುತ್ತಾ ಮನೆಗೆ ಬಂದಿದ್ದೆ ಎಂದು ಹೇಳಿದ್ದಾರೆ.

Adipurush: ಸೀಟ್​ ಸಿಗದೇ ನೆಲದ ಮೇಲೆ ಟ್ರೈಲರ್​ ನೋಡಿದ ಕೃತಿ ಸನೋನ್​!

'ನನ್ನ ಮೊದಲ ಫೋಟೋಶೂಟ್ ಮಾಡುವಾಗ ನಾನು ತುಂಬ ನರ್ವಸ್ ಆಗಿದ್ದೆ. ನನಗೆ ಇನ್ನೂ ಚೆನ್ನಾಗಿ ಅದು ನೆನಪಿದೆ. ನಾನು ಅಳುತ್ತಲೇ ಮನೆಗೆ ಬಂದೆ. ಯಾಕೆಂದರೆ, ಅಂದು ನಾನು ಚೆನ್ನಾಗಿ ಮಾಡಿರಲಿಲ್ಲ. ಎಲ್ಲ ಕೆಲಸವನ್ನೂ ಪರ್ಫೆಕ್ಟ್​ ಆಗಿ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಆ ದಿನ ಫೋಟೋಶೂಟ್​ ನಾನು ಅಂದುಕೊಂಡ ರೀತಿ ಬರಲಿಲ್ಲ. ಇದಕ್ಕಾಗಿ ಬೇಸರ ಆಗಿತ್ತು. ಫೋಟೋಶೂಟ್​ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕುತ್ತ ಮನೆಗೆ ಬಂದೆ ಎಂದಿರುವ ಕೃತಿ, ನಂತರ ತಮ್ಮ ತಪ್ಪುಗಳಿಂದಲೇ ಪಾಠ ಕಲಿತೆ ಎಂದಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು. ಆದರೆ ಕಾಲಾನಂತರದಲ್ಲಿ ನನ್ನೊಳಗೆ ನಾನು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ. ನಮ್ಮ ಯಶಸ್ಸಿಗಿಂತ ನಮ್ಮ ವೈಫಲ್ಯಗಳಿಂದ ನಾವು ಹೆಚ್ಚು ಕಲಿಯಬಹುದು ಎಂಬುದನ್ನು ನಾನು ನಂಬುತ್ತೇನೆ. ನನ್ನ ತಪ್ಪುಗಳಿಂದ ಕಲಿಯುವುದು ಮತ್ತು ಮುಂದುವರಿಯುವುದು ನನ್ನ ಮಂತ್ರವಾಗಿದೆ' ಎನ್ನುತ್ತಾರೆ ನಟಿ ಕೃತಿ ಸನೋನ್.

ಅಂದಹಾಗೆ ಕೃತಿ ಅವರ ತಾಯಿ ಪ್ರೊಫೆಸರ್​ ಆದವರು. ಈ ಬಗ್ಗೆ ಹೇಳಿಕೊಂಡಿರುವ ಕೃತಿ, 'ನನ್ನ ತಾಯಿ ಪ್ರೊಫೆಸರ್ ಆಗಿದ್ದರು. ನಮ್ಮ ಕುಟುಂಬದಲ್ಲಿ ಮೊದಲ ಉದ್ಯೋಗಸ್ಥ ಮಹಿಳೆ ಅವರೇ ಆಗಿದ್ದರು. ನಮ್ಮಮ್ಮ ಗರ್ಭಿಣಿ ಆಗಿದ್ದಾಗಲೇ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದರು' ಎಂದಿದ್ದಾರೆ.

ಸನ್ನಿ ಡಿಯೋಲ್​ ಪುತ್ರನ ಡೇಟಿಂಗ್ ಫೋಟೋ ನೋಡಿ ಪ್ಯಾಂಟ್​ ಹರಿದು ಬಿಡಮ್ಮಾ ಎಂದ ನೆಟ್ಟಿಗರು!

 ಆದಿಪುರುಷ್ ಚಿತ್ರದ ಜೊತೆಗೆ, ಟಬು ಮತ್ತು ಕರೀನಾ ಕಪೂರ್ ಖಾನ್ (Karina Kapoor Khan) ಜತೆಗೆ ಕೃತಿ ಅವರು ತೆರೆಹಂಚಿಕೊಳ್ಳಲಿದ್ದಾರೆ. ರಿಯಾ ಕಪೂರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ರಾಜೇಶ್ ಕೃಷ್ಣನ್ ನಿರ್ದೇಶನ ಮಾಡುತ್ತಿದ್ದಾರೆ. 'ಸದ್ಯ ನಾನು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ಬಹಳ ಇಂಟರೆಸ್ಟಿಂಗ್ ಪ್ರಾಜೆಕ್ಟ್ ಇದು. ಇಬ್ಬರು ಅದ್ಭುತ ನಟಿಯರ ಜತೆಗೆ ನಾವು ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯವಾಗಿ ನಟರ ಜತೆಗೆ ನಾವು ಹೆಚ್ಚು ಕೆಲಸ ಮಾಡುತ್ತೇವೆ. ಆದರೆ ಇಂಥ ಇಬ್ಬರು ನಟಿಯರ ಜತೆಗೆ ಕೆಲಸ ಮಾಡುವುದು, ಕನಸು ನನಸಾದಂತಹ ಅನುಭವ' ಎಂದು ಹೇಳಿದ್ದಾರೆ.