Adipurush: ಟ್ರೋಲ್, ಬ್ಯಾನ್ ನಡುವೆಯೂ ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರ ಬುಕ್ ಮಾಡಿದ 'ಆದಿಪುರುಷ್' ಸೀತೆ ಕೃತಿ
ಟ್ರೋಲ್, ಬ್ಯಾನ್ ನಡುವೆಯೂ ಆದಿಪುರುಷ್ ಸಿನಿಮಾ ನೋಡಲು ನಟಿ ಕೃತಿ ಸನೊನ್ ಇಡೀ ಚಿತ್ರಮಂದಿರ ಬುಕ್ ಮಾಡಿಸಿದ್ದಾರೆ. ದೆಹಲಿಯಲ್ಲಿಇಂದು ಕೃತಿ ಮತ್ತೆ ಸಿನಿಮಾ ವೀಕ್ಷಿಸಲಿದ್ದಾರೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಅಷ್ಟೆಯಲ್ಲದೇ ಸಿನಿಮಾ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಅನೇಕ ವಿಚಾರಗಳಿಗೆ ಆದಿಪುರುಷ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದುಪುರುಷ್ ಸಿನಿಮಾದ ಕೆಲವು ಡೈಲಾಗ್, ಪಾತ್ರಗಳ ಚಿತ್ರಣ, ವಿಎಫ್‌ಎಕ್ಸ್ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅಷ್ಟೆಯಲ್ಲದೇ ಆದಿಪುರುಷ್ ಸಿನಿಮಾ ಬ್ಯಾನ್ ಮಾಡಬೇಕು, ಪ್ರಸಾರ ನಿಲ್ಲಿಸಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಈ ನಡುವೆ ಆದಿಪುರುಷ್ ಚಿತ್ರದಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ನಟಿ ಕೃತಿ ಸನೊನ್ ತನ್ನ ಕುಟುಂಬಕ್ಕಾಗಿ ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದಾರೆ. ಈ ಬಗ್ಗೆ ಮೂಲಗಳು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿವೆ. ಅಂದಹಾಗೆ ಕೃತಿ ಚಿತ್ರಮಂದಿರ ಬುಕ್ ಮಾಡಿರುವುದು ತನ್ನ ಕುಟುಂಬ ಹಾಗೂ ಶಾಲಾ ಮಕ್ಕಳಿಗಾಗಿ ಎನ್ನಲಾಗಿದೆ. ದೆಹಲಿಯ ಮಲ್ಟಿಫ್ಲೆಕ್ಸ್‌ನಲ್ಲಿ ಕೃತಿ ಬುಕ್ ಮಾಡಿದ್ದಾರೆ.
'ಕೃತಿ ಸನೊನ್ ಇಂದು (ಜೂನ್ 21) ದೆಹಲಿ ಮಲ್ಟಿಪ್ಲೆಕ್ಸ್‌ನಲ್ಲಿ ಕುಟುಂಬ ಹಾಗೂ ಶಾಲಾ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ದೆಹಲಿ ಪಬ್ಲಿಕ್ ಸ್ಕೂಲ್, ಆರ್ ಕೆ ಪುರಂನ ವಿದ್ಯಾರ್ಥಿಗಳನ್ನು ಸ್ಕ್ರೀನಿಂಗ್‌ಗಾಗಿ ಕರೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ. ಮಕ್ಕಳು ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಚಲನಚಿತ್ರವನ್ನು ಆನಂದಿಸುತ್ತಾರೆ. ಹಾಗಾಗಿ ಮಕ್ಕಳನ್ನುಸಿನಿಮಾ ವೀಕ್ಷಿಸಲು ಕರೆದುಕೊಂಡು ಹೋಗುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಸಹ ಸ್ಕ್ರೀನಿಂಗ್‌ಗೆ ಹಾಜರಾಗಲಿದ್ದಾರೆ' ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.
ಸ್ಕ್ರೀನಿಂಗ್‌ಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ನಿಖರವಾದ ಸಂಖ್ಯೆ ಬಹಿರಂಗ ಆಗಿಲ್ಲ. ಆದರೆ 300 ಆಸನ ವ್ಯವಸ್ಥೆ ಇರುವ ಮಲ್ಟಿಫ್ಲೆಕ್ಸ್ ಬುಕ್ ಆಗಿದೆ. ಅವರ ಸಮ್ಮುಖದಲ್ಲಿ ಹಳೆಯ ವಿದ್ಯಾರ್ಥಿಗಳು ಚಲನಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ಕೃತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಮಲ್ಟಿಪ್ಲೆಕ್ಸ್ ತಂಡದಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ವಿವಾದಗಳ ಗೂಡಾಗಿದೆ ಪ್ರಭಾಸ್ ನಟನೆಯ ಆದಿಪುರುಷ್!: ಇನ್ಮುಂದೆ ಬಾಲಿವುಡ್ ಸಿನಿಮಾಗೆ ಹೊಸ ರೂಲ್ಸ್!
ಕೃತಿ ಸನೋನ್ ತನ್ನ ಶಿಕ್ಷಣ ಸಂಸ್ಥೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಅವರು ತನ್ನ ಸಹ-ನಟ ವರುಣ್ ಧವನ್ ಜೊತೆಗೆ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ 2022 ಭೇದಿಯ ಸಿನಿಮಾ ಪ್ರಚಾರ ಮಾಡಿದ್ದರು. ತಾನು ಓದಿದ ಶಾಲೆ 50 ವರ್ಷಗಳನ್ನು ಪೂರೈಸಿದಾಗ ಅವರು ಸುಂದರವಾದ ವೀಡಿಯೊ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಇದೀಗ ಅದೇ ಶಾಲೆಯ ಮಕ್ಕಳಿಗೆ ಆದಿಪುರುಷ್ ಸಿನಿಮಾ ತೋರಿಸುತ್ತಿದ್ದಾರೆ.
ಕನ್ನಡದ ಅಣ್ಣಾವ್ರ ಪಾತ್ರ, ಆ್ಯಕ್ಟಿಂಗ್ ಮುಂದೆ ಯಾವ ಆದಿಪುರುಷ್ ಸಿನಿಮಾನೂ ಇಲ್ಲ!
ಓಂ ರಾವುತ್ ಸಾರಥ್ಯದಲ್ಲಿ ಮೂಡಿ ಬಂದಿರುವ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಕೊಂಡರೆ ಸೀತೆಯಾಗಿ ಕೃತಿ ಸನೊನ್ ಮಿಂಚಿದ್ದಾರೆ. ಸೈಪ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ.