ಸೋಷಿಯರಲ್ ಮೀಡಿಯಾವನ್ನು ಸ್ಟಾರ್ಸ್ ಎರಡು ರೀತಿಯಲ್ಲಿ ಬಳಸುತ್ತಾರೆ. ಒಂದು ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕವನ್ನಿಟ್ಟುಕೊಳ್ಳಲು ಮತ್ತೊಂದು ತಮ್ಮ ಸಿನಿಮಾವನ್ನು ಪ್ರಮೋಟ್ ಮಾಡಲು ಮಾತ್ರ. ಆದರೆ ಅಭಿಮಾನಿಗಳೇ ನನ್ನ ಉಸಿರು ಎಂದು ಹೇಳುವ ನಟನ ಸೆಲ್ಫಿ ಫೋಟೋ ಹಿಸ್ಟರಿ ಕ್ರಿಯೇಟ್ ಮಾಡಿದೆ.

ಕಳೆದ ವರ್ಷ 'ಬಿಗಿಲ್' ಸಿನಿಮಾ ಪ್ರಮೋಷನ್‌ ಸಮಯದಲ್ಲಿ ವಿಜಯ್ ದಳಪತಿ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರಿ. ಇದನ್ನು  'ಥ್ಯಾಂಕ್ಯು  Neyveli' ಎಂದು ಟ್ವೀಟ್‌ ಮಾಡಿದ್ದರು. ಈಗ ಅದೇ ಫೋಟೋ ವೈರಲ್ ಆಗಿದೆ.

ದಳಪತಿ ವಿಜಯ್ ಅಭಿಮಾನಿ ಆತ್ಮಹತ್ಯೆ

ಕಿಂಗ್ ಆಫ್‌ ಸೋಷಿಯಲ್ ಮೀಡಿಯಾ:
ವಿಜಯ್ ಫೋಟೋ ಹೀಗೆ ಹಿಸ್ಟರಿ ಕ್ರಿಯೇಟ್ ಮಾಡಿರುವುದರ ಬಗ್ಗೆ ಮಾಸ್ಟರ್ ಫಿಲ್ಮ್ ಎಂದು ಟ್ವಿಟರ್‌ ಖಾತೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. 'ದಳಪತಿ ಸೆಲ್ಫಿ ವಿತ್ ಫ್ಯಾನ್ಸ್ ಇನ್ ನಯೆವೆಲಿ. ನಿಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. 134.2k ರೀ-ಟ್ವೀಟ್ ಪಡೆದಿರುವ ಏಕೈಕ ಪೋಸ್ಟ್. ಯಾವುದೇ ಹ್ಯಾಶ್‌ಟ್ಯಾಗ್ ಬಳಕೆ ಇಲ್ಲ, ಪ್ರಮೋಟ್ ಮಾಡಲು ಏನೋ ಬರೆದಿಲ್ಲ. ಕಿಂಗ್ ಆಫ್ ಸೋಷಿಯಲ್ ಮೀಡಿಯಾ' ಎಂದು ಬರೆದಿದೆ.

 

ಇನ್ನು ಕಾಲಿವುಡ್‌ ಬಹುನಿರೀಕ್ಷಿತ ಮಾಸ್ಟರ್ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಚಿತ್ರಮಂದಿರ ತೆರೆ ಕಂಡ ನಂತರ ಮೊದಲು ರಿಲೀಸ್ ಆಗುವ ಸಿನಿಮಾ ಆಗಲಿದೆ. ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಶೀಘ್ರದಲ್ಲಿಯೇ ಗುಡ್‌ ನ್ಯೂಸ್ ಸಿಗುವ ನಿರೀಕ್ಷೆ ಇದೆ.