Asianet Suvarna News Asianet Suvarna News

ಶೂಟಿಂಗ್​ ವೇಳೆ ರೋಪ್​ ಕಾರ್​ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಸೂರ್ಯ!

ಶೂಟಿಂಗ್​ ವೇಳೆ ರೋಪ್​ ಕಾರ್​ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಸೂರ್ಯ!
 

Kollywood star Suriya gets injured on Kanguva sets shares health update suc
Author
First Published Nov 24, 2023, 11:44 AM IST

ಸಿನಿಮಾ ಶೂಟಿಂಗ್​ ಸಮಯದಲ್ಲಿ ಆಗಾಗ್ಗೆ ಕೆಲವೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲಿಯೂ ಆ್ಯಕ್ಷನ್​ ಚಿತ್ರದ ಸಮಯದಲ್ಲಿ ಇಂಥ ಅವಘಡಗಳು ಹೆಚ್ಚು. ಇದೀಗ ತಮಿಳಿನ ಖ್ಯಾತ ನಟ ಸೂರ್ಯ ಅವರೂ ಅಪಘಾತದಲ್ಲಿ ಸಿಲುಕಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಕಂಗುವ (Kanguva) ಚಿತ್ರದ ಶೂಟಿಂಗ್​ ವೇಳೆ ಈ ಅವಘಡ ಸಂಭವಿಸಿದೆ. ರೋಪ್​ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರಿ ಅನಾಹುತ ಸಂಭವಿಸುವುದರಲ್ಲಿತ್ತು. ಆದರೆ ಸ್ವಲ್ಪದರಲ್ಲಿಯೇ ನಟ ಸೂರ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದ ಬಳಿಕ ಶೂಟಿಂಗ್​ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು  ಅತ್ಯುನ್ನತ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.  ಚಿತ್ರವನ್ನು ಏಕಕಾಲಕ್ಕೆ 10 ಭಾಷೆಗಳಲ್ಲಿ, 3 ಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದ್ಧೂರಿ ಶೂಟಿಂಗ್​ ಸಮಯದಲ್ಲಿ ಅಪಘಾತ ಸಂಭವಿಸಿದೆ. ಈ ಚಿತ್ರದಲ್ಲಿ ಸೂರ್ಯ ಜೊತೆಗೆ ಬೇರೆ ಭಾಷೆಗಳ ಪ್ರಮುಖ ಪಾತ್ರಧಾರಿಗಳು ಸಹ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್​ ನಟಿ ದಿಶಾ ಪಠಾಣಿ (Disha Patani) ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ರಾಕ್ ಸ್ಟಾರ್’ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ, ವೆಟ್ರಿ ಪಳನಿಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.


ಅಷ್ಟಕ್ಕೂ ಆಗಿದ್ದೇನೆಂದರೆ,  ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ರೋಪ್ ಕಾರ್ ಕ್ಯಾಮೆರಾವು ಸೂರ್ಯ ಅವರಿಗೆ ಡಿಕ್ಕಿ ಹೊಡೆದಿದೆ. ಸ್ವಲ್ಪ ಹೆಚ್ಚೂ ಕಮ್ಮಿ ಆಗಿದ್ದರೂ ಅವರ ಪ್ರಾಣಕ್ಕೆ ಅಪಾಯವಿತ್ತು. ಆದರೆ ಅದೃಷ್ಟವಶಾತ್​ ಹಾಗಾಗಲಿಲ್ಲ.  ನಟನಿಗೆ ಸ್ವಲ್ಪ ಗಾಯವಾಗಿದೆ. ಸೂರ್ಯ ಅವರ ಭುಜಕ್ಕೆ ಸ್ವಲ್ಪ ಪೆಟ್ಟು ಬಿದ್ದಿದೆ ಎಂದು ಚಿತ್ರತಂಡ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಚಿತ್ರತಂಡವು,  ಸಿರುತೈ ಶಿವ ನಿರ್ದೇಶನದ ಕಾಂಗುವಾ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಚೆನ್ನೈನ ಇವಿಪಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಅದರಲ್ಲಿ ಸೂರ್ಯ ಹಿಂದೆ ತಿರುಗಿ ನೋಡುವ ಬಿಲ್ಡ್ ಅಪ್ ದೃಶ್ಯಗಳನ್ನು ಚಿತ್ರೀಕರಿಸಗುತ್ತಿತ್ತು. ಇದರ ಶೂಟಿಂಗ್​ ರಾತ್ರಿ  11 ಗಂಟೆಗೆ ನಡೆಯುತ್ತಿತ್ತು.  ಈ ವೇಳೆಯೇ ಅವಘಡ  ಸಂಭವಿಸಿದೆ ಎಂದಿದೆ.

ಸೂಪರ್​ಸ್ಟಾರ್​ ಬಾಲಕೃಷ್ಣ ವಿರುದ್ಧ ನಟಿ ವಿಚಿತ್ರಾ ಬಳಿಕ ರಾಧಿಕಾ ಆಪ್ಟೆ ಲೈಂಗಿಕ ದೌರ್ಜನ್ಯ ಆರೋಪ?

 ಸೂರ್ಯ ಅವರು ನಡೆದುಕೊಂಡು ಹೋಗುವ ದೃಶ್ಯವನ್ನು ಚಿತ್ರೀಕರಿಸಿದಾಗ ರೋಪ್ ಕಾರ್ ಕ್ಯಾಮೆರಾದಿಂದ ರೋಪ್ ಕೆಳಗಿಳಿದು ಸೂರ್ಯನ ಭುಜವನ್ನು ಒರೆಸಿದೆ. ಇದರಿಂದಾಗಿ ಸೂರ್ಯ ಅವರ ಭುಜಕ್ಕೆ ಸ್ವಲ್ಪ ಪೆಟ್ಟು ಬಿದ್ದಿದೆ. ಇದರಿಂದ ಅರೆ ಕ್ಷಣ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ  ಶೂಟಿಂಗ್ ರದ್ದು ಮಾಡಲಾಯಿತು ಎಂದಿರುವ ಚಿತ್ರ ತಂಡ, ಒಂದು ದಿನ ಬಿಟ್ಟು ಪುನಃ ಶೂಟಿಂಗ್​ ಆರಂಭಿಸಲಾಗುವುದು ಎಂದಿದೆ.  ಅಂದಹಾಗೆ, ಕಾಂಗುವಾ ಚಿತ್ರದಲ್ಲಿ  ಸೂರ್ಯ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನೂ ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ.  ಅದಕ್ಕಾಗಿ ಬಹುತೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.  ಕಾಂಗುವ ಚಿತ್ರ ಏಪ್ರಿಲ್ 11 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. 

ಕಳೆದ ಜುಲೈ ತಿಂಗಳಿನಲ್ಲಿ  ಸೂರ್ಯ (Surya) ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ‘ಕಂಗುವ’ ಚಿತ್ರತಂಡವು ಟೀಸರ್  ಬಿಡುಗಡೆ ಮಾಡಿತ್ತು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯದಲ್ಲೇ ಇನ್ನೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಕಳೆದ 16 ವರ್ಷಗಳಲ್ಲಿ ‘ಸಿಂಗಂ’ ಸರಣಿ, ‘ಪರುತ್ತಿವೀರನ್’, ‘ಸಿರುತ್ತೈ’, ‘ಕೊಂಬನ್’, ‘ನಾನ್ ಮಹಾನ್ ಅಲ್ಲ’, ‘ಮದರಾಸ್’, ‘ಟೆಡ್ಡಿ’, ‘ಪತ್ತು ತಾಲ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ಕೆ.ಇ. ಜ್ಞಾನವೇಲ್ ರಾಜ, ‘ಕಂಗುವ’ ಚಿತ್ರವನ್ನು ತಮ್ಮ ಸ್ಟೂಡಿಯೋ ಗ್ರೀನ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ. ‘ಕಂಗುವ’ ಚಿತ್ರದಲ್ಲಿ ಮಾನವೀಯ ಸಂಬಂಧಗಳಷ್ಟೇ ಅಲ್ಲ, ಇದುವರೆಗೂ ನೋಡಿರದ ಅದ್ಭುತ ಸಾಹಸ ದೃಶ್ಯಗಳಿವೆ. ಎರಡು ನಿಮಿಷ ಅವಧಿಯ   ಟೀಟರ್​ನಲ್ಲಿ  ಅದ್ಭುತ ಗ್ರಾಫಿಕ್ಸ್ ಜನರ ಗಮನ ಸೆಳೆದಿದ್ದವು.

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?
 

Follow Us:
Download App:
  • android
  • ios