ಸಾಮಾಜಿಕ ಜಾಲತಾಣದಿಂದ ದೂರ, ಸಿನಿಮಾ ಪ್ರಚಾರದಿಂದಲೂ ದೂರ. ಅಂದ್ಮೇಲೆ ನಯನಾತಾರಾಗೆ ಅವಾರ್ಡ್‌ ಕಾರ್ಯಕ್ರಮವೇಕೆ ಬೇಕು? ಇದನ್ನು ನಾವು ಹೇಳುತ್ತಿರುವುದಲ್ಲ, ಟಾಲಿವುಡ್‌ ನಿರ್ದೇಶಕರ ಆಕ್ರೋಶ.

'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

ಇತ್ತೀಚಿಗೆ ಜೀ ತಮಿಳು ಸಂಸ್ಥೆ ಆಯೋಜಿಸಿದ್ದ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಯನಾತಾರಾ ಪಾಲ್ಗೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಹಿಟ್ ನಟಿಯಾಗುತ್ತಿರುವ ನಯನತಾರಾ ಬಾಲಿವುಡ್‌ ಎವರ್ ಗ್ರೀನ್ ನಟಿ ಶ್ರೀದೇವಿ ಹೆಸರಿನಲ್ಲಿ ನೀಡುವ 'ಭಾರತೀಯ ಚಿತ್ರರಂಗದ ಸ್ಪೂರ್ತಿದಾಯಕ ಮಹಿಳೆ' ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

'ಸೀತೆ' ಆಗಲು ಮಾಂಸಾಹಾರ ತ್ಯಜಿಸಿದ ನಯನತಾರಾ!

ಆದರೆ, ನಿರ್ಮಾಪಕರು ನಯನತಾರಾ ವಿರುದ್ಧ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿ ಹಣ ಬಂಡವಾಳ ಹಾಕಿ ಸಿನಿಮಾ ಮಾಡಲಾಗುತ್ತದೆ. ಆದರೆ ಚಿತ್ರ ಒಪ್ಪಿಕೊಳ್ಳುವ ಮುನ್ನ ಇದ್ದ ಉತ್ಸಾಹ ಮುಗಿದ ನಂತರ ಇರೋದೇ ಇಲ್ಲ. ಚಿತ್ರದ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ, ಎಂದು ಷರತ್ತು ಹಾಕುತ್ತಾರೆ. ಎಂಥ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದ್ದರೂ ಪ್ರಚಾರಕ್ಕೆ ಮಾತ್ರ ಬರುವುದಿಲ್ಲ. ಆದರೆ ಅವಾರ್ಡ್‌ ಬಂತು  ಅಂದ್ರೆ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಶ್ರಮವೆಲ್ಲಾ ನಿರ್ದೇಶಕರದ್ದು ಪ್ರಶಸ್ತಿ ಮಾತ್ರ ಇವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಘ್ನೇಶ್ ಶಿವನ್‌ ಕೈ ಬಿಟ್ರಂತೆ ನಯನತಾರಾ; ಮದ್ವೆ ಎಲ್ಲಾ ಸುಳ್ಳಾ?

ಇದಕ್ಕೆ ನಯನತಾರಾ ಪ್ರತಿಕ್ರಿಯೆ ಏನು? 

'ನಾನು ಈ ಹಿಂದೆ ಬಹಳಷ್ಟು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿ ನನ್ನನ್ನು ಸಾಕಷ್ಟು ಬಾರಿ ತಪ್ಪಾಗಿ ಉಲ್ಲೇಖಿಸಿದ್ದಾರೆ. ಹಾಗಾಗಿ ನಾನು ಹೆಚ್ಚಾಗಿ ಪ್ರಚಾರಗಳಿಗೆ ಕೈ ಜೋಡಿಸಲು ಇಷ್ಟಪಡುವುದಿಲ್ಲ. ನಾನು ತುಂಬಾ ಪ್ರೈವೇಟ್ ಪರ್ಸನ್' ಎಂದು ಪ್ರತಿಕ್ರಿಯಿಸಿದ್ದಾರೆ.