ಕಾಲಿವುಡ್‌ ಲೋಕದ ಬ್ಯೂಟಿ ನಯನತಾರಾ ಆರ್‌ಜೆ ಬಾಲಾಜಿ ನಿರ್ದೇಶಕದ 'ಮೂಕುತಿ ಅಮ್ಮನ್' ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಕಾರಣಕ್ಕೆ 40 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿದ್ದಾರೆ ಎಂದು ಕೆಲ ಮೂಲಗಳಿಂದ ಕೇಳಿ ಬಂದಿದೆ.

'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

 

'ಮೂಕುತಿ ಅಮ್ಮನ್' ಚಿತ್ರದ ಇಡೀ ತಂಡ ಮಾಂಸಾಹಾರವನ್ನು ತ್ಯಜಿಸುವ ನಿರ್ಧಾರ ಮಾಡಿದೆ. ನಯನತಾರಾ ಸೀತಾ ಆಗಿ ನಟಿಸುತ್ತಿದ್ದು ನಿರ್ದೇಶಕ ಬಾಲಾಜಿ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಇಶಾರಿ ಕೆ ಗಣೇಶ್ ನಿರ್ಮಾಣ ಮಾಡುತ್ತಿದ್ದಾರೆ.

ವಿಭಿನ್ನ ಪಾತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ನಯನತಾರಾಳಿಗೆ ಇದೊಂದು ಚಾಲೆಂಜಿಂಗ್ ಪಾತ್ರವಾಗಲಿದೆ. ಈ ಹಿಂದೆ ತೆರೆ ಕಂಡಂತ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಒಂದು ಬಗೆಯಾದರೆ 'ಬಿಗಿಲ್' ಮತ್ತೊಂದು ರೀತಿಯ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 2011 ರಲ್ಲಿ 'ಶ್ರೀ ರಾಮ ರಾಜ್ಯಂ' ಚಿತ್ರದಲ್ಲಿ ನಟಿಸುವಾಗಲು ನಯನತಾರಾ ಮಾಂಸವನ್ನು ತ್ಯಜಿಸಿದ್ದರು.