ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಎಸ್‌ಕೆ ಕೃಷ್ಣಕಾಂತ್ ಬುಧವಾರ (ಸೆಪ್ಟೆಂಬರ್ 30) ಹೃದಯಾಘಾತದಿಂದ ನಿಧನರಾಗಿದ್ದಾರೆ.  52 ವರ್ಷ ಕೃಷ್ಣಕಾಂತ್ ಕೆಲ ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ನಿವಾಸಕ್ಕೆ ಹಿಂದಿರುಗಿದ್ದರು. 

ಹೃದಯಾಘಾತದಿಂದ ಕನ್ನಡ ಕಿರುತೆರೆ ನಟ ನಿಧನ 

ಆದರೆ, ಚೆನ್ನೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ನಿರ್ದೇಶಕ ಸುಬ್ರಹ್ಮಣಿಯಂ ಶಿವಾ ಟ್ಟಿಟರ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. 'ತಿರುಡಾ ತಿರುಡಿ' ಸಿನಿಮಾ ನಿರ್ಮಾಪಕರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದಿದ್ದಾರೆ. ಕೃಷ್ಣಕಾಂತ್ ಕಾರ್ಯವನ್ನು ಹಿರಿಯ ಪುತ್ರ ಅಕ್ಟೋಬರ್‌ 1ರಂದು ನೆರವೇರಿಸಿದ್ದಾರೆ.

ಧನುಶ್ 'ತಿರುಡಾ-ತಿರುಡಿ', ಸಿಂಬಾ 'ಮನ್ಮಥನ್' ವಿಕ್ರಮ್ 'ಕಿಂಗ್' ಸಿನಿಮಾಗಳುನ್ನು ಕೃಷ್ಣಕಾಂತ್ ನಿರ್ಮಾಣ ಮಾಡಿದ್ದಾರೆ. ಪತ್ನಿ ಲಕ್ಷ್ಮಿ ಹಾಗೂ  ಇಬ್ಬರು ಪುತ್ರರು ಚಂದ್ರಕಾಂತ್ ಮತ್ತು ಉದಯಕಾಂತ್‌ರನ್ನು ಅಗಲಿರುವ ಕೃಷ್ಣಕಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಪ್ರಾರ್ಥಿಸೋಣ.