ಕೆ.ಆರ್‌ .ಪೇಟೆ (ಅ.02) : ಕಿರುತೆರೆ ಹಾಸ್ಯ ನಟ ಆರ್‌ .ಎಸ್‌.ಪದ್ಮನಾಭ(46) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಲೂಕಿನ ರಾಯಸಮುದ್ರ ಗ್ರಾಮದ ಪಧ್ಮನಾಭ್‌ ಪಟ್ಟಣದ ತಮ್ಮ ಸ್ವಗೃಹದಲ್ಲಿ ವಾಸವಾಗಿದ್ದರು. 

ಇಂದು ಮುಂಜಾನೆ 1.30ರ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಸರಿರಾತ್ರಿಯಲ್ಲಿಯೇ ಅವರನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 

ಮೃತರು ಪತ್ನಿ, ಪುತ್ರಿ, ಸಹೋದರ ಹಾಗೂ ತಂದೆ ನಿವೃತ್ತ ಶಿಕ್ಷಕ ಸಣ್ಣಬೋರೇಗೌಡ ಇದ್ದಾರೆ. ಕಿರುತೆರೆಯ ಕಾಮಿಡಿ ಕಿಲಾಡಿಗಳ ಮೂಲಕ ಕಲಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪದ್ಮನಾಭ್‌ ಪಂಚರಂಗಿ ಪೋಂ ಪೋಂ, ಉಘೇ ಉಘೇ ಮಾದೇಶ್ವರ ಧಾರವಾಹಿಗಳಲ್ಲಿ ತಮ್ಮ ಹಾಸ್ಯ ಪಾತ್ರದ ಮೂಲಕ ಜನಮೆಚ್ಚುಗೆ ಪಡೆದಿದ್ದರು. 

ನೆನಪಿರಲಿ ನಟಿ ವರ್ಷಾ ಕಮ್‌ಬ್ಯಾಕ್; ಶಾಲಿವುಡ್‌ ವಿಡಿಯೋ ಮೆಚ್ಚಿಕೊಂಡ ನೆಟ್ಟಿಗರು!

ಸುವರ್ಣ ಚಾನಲ್ಲಿನ ಹಳ್ಳಿ ಹುಡ್ಗೀರ್‌ ಪ್ಯಾಟೇ ಲೈಫು ಎಪಿಸೋಡನ್ನು ತಮ್ಮ ಸ್ವಗ್ರಾಮ ರಾಯಸಮುದ್ರದಲ್ಲಿ ಆಯೋಜಿಸಿದ್ದರು. ಮೃತರ ಅಂತ್ಯ ಕ್ರಿಯೆ ಸ್ವಗ್ರಾಮದಲ್ಲಿ ಗುರುವಾರ ಜರುಗಿತು. ತಾಲೂಕಿನ ವಿವಿಧ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.