ಅಂತು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಲಿವುಡ್ ಲೇಡಿ ಸೂಪರ್ ಸ್ಟಾರ್. ನವ ಜೋಡಿಗೆ ಸಾಥ್ ಕೊಟ್ಟ ತಲೈವಾ... 

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಇಂದು ಚೆನ್ನೈನ ಮಹಾಬಲಿಪುರಂನಲ್ಲಿ ಹಸೆಮಣೆ ಏರಿದ್ದಾರೆ. ಮದುವೆ ದಿನವೇ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ದಿನದ ಬಗ್ಗೆ ಪೋಸ್ಟ್‌ ಬರೆದ ವಿಘ್ನೇಶ್, ಮದುವೆ ಫೋಟೋ ನೋಡಲು ಕಾಯುತ್ತಿದ್ದಾರಂತೆ ಅಭಿಮಾನಿಗಳು.

ವಿಘ್ನೇಶ್ ಪೋಸ್ಟ್‌:

'ಇಂದು ಜೂನ್ 9. ನಯನತಾರಾ ಅವರ ದಿನ. ದೇವರಿಗೆ ಮತ್ತು ನಮಗೆ ಸದಾ ಒಳ್ಳೆಯದಾಗಲಿ ಎಂದು ಪ್ರಾರ್ಥಣೆ ಮಾಡುವ ಜನರಿಗೆ ಧನ್ಯವಾದಗಳು. ಒಳ್ಳೆ ವ್ಯಕ್ತಿಗಳು, ಶುಭ ದಿನ, ಎವರ್‌ ಗುಡ್‌ coincidence, ಒಳ್ಳೆಯವರಿಂದ ಆಶೀರ್ವಾದ, ಶೂಟಿಂಗ್‌ನಲ್ಲಿ ಕಳೆಯುವ ದಿನಗಳು..ಎಲ್ಲವು ಸೇರಿಕೊಂಡು ನಮ್ಮ ಲೈಫ್‌ನ ಬ್ಯೂಟಿಫುಲ್ ಮಾಡಿದೆ. ಇದಕ್ಕೆಲ್ಲಾ ಕಾರಣ ನಾವು ದಿನ ಮಾಡುವ ಪ್ರಾರ್ಥನೆಗಳು. ಈ ದಿನ ನನ್ನ ಲವ್ ಆಫ್‌ ಮೈ ಲೈಫ್‌ಗೆ ಅರ್ಪಣೆ. ಬೆಳಗ್ಗೆ ಎದ್ದು ಮದುವೆ ಸೀರೆಯಲ್ಲಿ ನಡೆದುಕೊಂಡು ಬರುವ ಭಾವಿ ಪತ್ನಿಯನ್ನು ನೋಡುವ ಅದೃಷ್ಟ ಮಾಡಿರುವೆ' ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.

ಇಬ್ಬರು ಡೆಸ್ಟಿನೇಷನ್‌ ವೆಡ್ಡಿಂಗ್ ಮಾಡಿಕೊಳ್ಳುತ್ತಿರುವಾಗಿ ಸಣ್ಣ ಸುಳಿವು ಸಿಕ್ಕಿದೆ ಅಲ್ಲದೆ ಪೇಸ್ಟಲ್ ಬಣ್ಣದಲ್ಲಿರುವ ಟ್ರೆಂಡಿಷನಲ್ ಉಡುಗೆಯನ್ನು ಧರಿಸಬೇಕು ಎಂದು ಆಮಂತ್ರಣದಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 8.30ಕ್ಕೆ ಮುಹೂರ್ತ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಸಿನಿಮಾದಲ್ಲಿ ಧರಿಸಿದ ಮದುವೆ ಲುಕ್‌ಗಳು ವೈರಲ್ ಆಗುತ್ತಿದೆ. ಆದರೆ ಮದುವೆ ಸಮಾರಂಭದ ಒಂದು ಫೋಟೋನೂ ರಿವೀಲ್ ಮಾಡಿಲ್ಲ. ಟೈಟ್‌ ಸೆಕ್ಯೂರಿಟಿಯಲ್ಲಿ ಮದುವೆ ನಡೆಯುತ್ತಿದ್ದು, ಕುಟುಂಬಸ್ಥರು ಮತ್ತು ಸಿನಿ ಸ್ನೇಹಿತರು ಮಾತ್ರ ಭಾಗಿಯಾಗಿದ್ದಾರೆ.

ನಯನತಾರಾ ಮದುವೆ ಡೇಟ್ ಫಿಕ್ಸ್! ಎನ್‌ಟಿಆರ್ ಲಗ್ನಪತ್ರಿಗೆ ವೈರಲ್

2015ರಿಂದ ಪ್ರೀತಿಸುತ್ತಿರುವ ಈ ಜೋಡಿ ಜೂನ್ 7ರಂದು ಹಸೆಮಣೆ ಏರುತ್ತಿರುವ ವಿಚಾರ ರಿವೀಲ್ ಮಾಡಿದ್ದರು. ಮದುವೆ ನಡೆಯುತ್ತಿರುವ ರೆಸಾರ್ಟ್‌ ಹೊರಗಡೆ ಟೈಟ್‌ ಸೆಕ್ಯೂರಿಟಿ ಇರುವ ಕಾರಣ ಮಂಟಪ ಯಾರೆಲ್ಲಾ ಭಾಗಿಯಾಗುತ್ತಿದ್ದಾರೆಂದು ಬಹಿರಂಗವಾಗುತ್ತಿಲ್ಲ. ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ.ಯಾವ ಕಾರಣ ಇಷ್ಟೊಂದು ಪ್ರೈವಸಿ ಕಾಪಾಡುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Nayanthara Vignesh Shivan wedding update: ಸ್ಥಳ, ದಿನಾಂಕ, ಆರತಕ್ಷತೆ ಬಗ್ಗೆ ಇಲ್ಲಿದೆ ವಿವರ

ಇಂಗ್ಲಿಷ್ ವೆಬ್‌ವೊಂದು ವರದಿ ಮಾಡಿರುವ ಪ್ರಕಾರ ತಲೈವ ರಜನಿಕಾಂತ್‌ ನಿಂತು ಮದುವೆ ನಡೆಸಿಕೊಟ್ಟಿದ್ದಾರಂತೆ. ನಯನತಾರಾಗೆ ತಾಳಿ ಕಟ್ಟಲು ರಜನಿಕಾಂತ್ ತಮ್ಮ ಕೈಯಾರ ವಿಘ್ನೇಶ್‌ಗೆ ಮಾಂಗಲ್ಯಸೂತ್ರ ಕೊಟ್ಟಿದ್ದಾರಂತೆ. ಬಾಲಿವುಡ್ ಕಿಂಗ್ ಶಾರುಖ್‌ ಖಾನ್‌ ಕೂಡ ನಯನತಾರಾ ಮದುವೆಯಲ್ಲಿ ಭಾಗಿಯಾಗಿದ್ದರು. ವೈಟ್ ಆಂಡ್ ಬ್ರೌನ್ ಬಣ್ಣದ ಔಟ್‌ಫಿಟ್‌ನಲ್ಲಿ ಶಾರುಖ್‌ ಮಿಂಚುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಶಾರುಖ್‌ಗೆ ಕೊರೋನಾ ಸೋಂಗು ತಗುಲಿದೆ ಎಂದು ಹೇಳಿತ್ತಿದ್ದರು, ಈಗ ನಟನನ್ನು ಮದುವೆಯನ್ನು ನೋಡಿ ಅಭಿಮಾನಿಗಳು ಇದೆಲ್ಲ ವದಂತೆ ಎಂದು ಕ್ಲಾರಿಟಿ ಪಡೆದುಕೊಂಡಿದ್ದಾರೆ.