ನಿರ್ದೇಶಕ ಸೀನು ರಾಮಸ್ವಾಮಿ ಕೆಲವು ತಿಂಗಳ ಹಿಂದೆ ಕ್ರಿಕೆಟರ್‌ ಮುತ್ತಯ್ಯ ಮುರಳೀಧರನ್‌ ಜೀವನಾಧಾರಿತ ಕಥೆಯನ್ನು ಮಾಡುವುದಾಗಿ ಘೋಷಿಸಿದ್ದರು. ನಟ ವಿಜಯ್ ಸೇತುಪತಿ ನಾಯಕನಾಗಿ ಅಭಿನಯಿಸುವುದಾಗಿಯೂ ಮಾತುಕತೆ ನಡೆದಿತ್ತು. ಹಲವು ಆದರೆ ಅಡತಡೆಗಳು ಉಂಟಾದ ಕಾರಣ ನಿರ್ದೇಶಕ ತಮಿಳುನಾಡು ಸಿಎಂ ಬಳಿ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

800 ಕಾಂಟ್ರವರ್ಸಿ: ಶ್ರೀಲಂಕಾ ಕ್ರಿಕೆಟ್ ಕೋಚ್ ಮುತ್ತಯ್ಯ ರಿಯಾಕ್ಷನ್ ಇದು 

ಹೌದು! ವಿಜಯ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಖಚಿತ ಪಡಿಸಿದ ನಂತರ ಶ್ರೀಲಂಕಾದಿಂದ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದನ್ನು. ಅಪ್ರಾಪ್ತ ವಿಜಯ್ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಕರೆ ಮಾಡಿದ್ದವನನ್ನು ಲಂಕಾದಲ್ಲಿ ಬಂಧಿಸಲಾಯಿತು.  ಅಲ್ಲದೇ ನೆಟ್ಟಿಗರು ಲಂಕನ್ ಕ್ರಿಕೆಟಿಗನ ಸಿನಿಮಾಕ್ಕೆ ಪ್ರತಿಕ್ರಯಿಸುತ್ತಿದ್ದ ರೀತಿಗೆ ವಿಜಯ್ ಸಿನಿಮಾದಿಂದ ಹೊರ ಬಂದಿದ್ದಾರೆ ಎಂಬ ಸುದ್ದಿಯೂ ಇದೆ. ಇದರ ಜೊತೆಗೆ ನಿರ್ದೇಶಕ ಸೀನು ಅವರಿಗೂ ಬೆದರಿಕೆಗಳು ದಿನೆ ದಿವೇ ಹೆಚ್ಚಾಗುತ್ತಿದೆಯಂತೆ.

ಮುಖ್ಯಮಂತ್ರಿ ಕೆ ಪಳನಿಸ್ವಾಮಿಗೆ ಭದ್ರತೆ ಬೇಡಿ ಮನವಿ ಮಾಡಿಕೊಂಡಿದ್ದಾರೆ ಸೀನು. ಮುರುಳೀಧರನ್‌ ತೆರೆಗೆ ಬರಬಾರದು ಎಂಬ ನಿಟ್ಟಿನಲ್ಲಿ ಈ ರೀತಿ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎನ್ನಲಾಗಿದೆ.  'ನನ್ನ ಜೀವ ಅಪಾಯದಲ್ಲಿದೆ ಎಂದೆನಿಸುತ್ತಿದೆ. ಮುಖ್ಯಮಂತ್ರಿಗಳೇ ನನಗೆ ಸಹಾಯ ಮಾಡಬೇಕು,' ಎಂದು ಸೀನು ಟ್ಟೀಟ್ ಮಾಡಿದ್ದಾರೆ.

ಮುತ್ತಯ್ಯ ಮುರುಳೀಧರನ್ ಸಿನಿಮಾಗೆ ವಿಜಯ್ ಸೇತುಪತಿ ನಾಯಕ..! 

ಬೆದರಿಕೆ ಕರೆಗಳ ಬಗ್ಗೆ ಚೆನ್ನೈ ಪೋಲಿಸ್‌ ಠಾಣೆಯಲ್ಲಿ ಸೀನು ದೂರು ನೀಡಿದ್ದಾರೆ.  ವಿಜಯ್ ಮಗಳಿಗೆ ಬೆದರಿಕೆ ಕರೆ ಹಾಕಿದ ಶ್ರೀಲಂಕಾ ವ್ಯಕ್ತಿಯಿಂದ ಕ್ಷಮೆ ಕೇಳಿಸಿ ಬಂಧಿಸಲಾಗಿತ್ತು. ಹಾಗೆಯೇ ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಎಂದು ಮನವಿ ಮಾಡಿದ್ದಾರೆ.