ರಾಜಕೀಯ ಕಡೆ ತ್ರಿಷಾ ಒಲವು; 'ಪವರ್' ನಟಿಗೆ ದಳಪತಿ ವಿಜಯ್ ಬೆಂಬಲ?
ದಕ್ಷಿಣ ಭಾರತ ಖ್ಯಾತ ನಟಿ ತ್ರಿಷಾ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ಸಿನಿಮಾರಂಗದಲ್ಲಿ ಹರಿದಾಡುತ್ತಿದೆ.
ದಕ್ಷಿಣ ಭಾರತ ಖ್ಯಾತ ನಟಿ ತ್ರಿಷಾ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ಸಿನಿಮಾರಂಗದಲ್ಲಿ ಹರಿದಾಡುತ್ತಿದೆ. ಈಗಾಗಲೇ ನಟಿ ತ್ರಿಷಾ ರಾಜಕೀಯ ಎಂಟ್ರಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಸಿನಿಮಾರಂಗಕ್ಕೂ ಮತ್ತು ರಾಜಕೀಯ ರಂಗಕ್ಕೂ ಇರುವ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಅನೇಕ ಸಿನಿಮಾ ಸ್ಟಾರ್ಸ್ ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರು ಸಕ್ಸಸ್ ಕಂಡಿದ್ದಾರೆ. ಇನ್ನು ಕೆಲವರಿಗೆ ರಾಜಕೀಯದಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ. ಆದರೂ ಅನೇಕ ಸಿನಿ ಮಂದಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ತ್ರಿಷಾ ಹೆಸರು ಸಹ ಕೇಳಿಬರುತ್ತಿದೆ. ನಿಜಕ್ಕೂ ತ್ರಿಷಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಇದು ಕೇವಲ ರೂಮರ್ ಅಷ್ಟೆನಾ ಎನ್ನುವ ಬಗ್ಗೆ ನಟಿ ತ್ರಿಷಾ ಅವರೇ ಪ್ರತಿಕ್ರಿಯೆ ನೀಡಬೇಕಿದೆ.
ನಟಿ ತ್ರಿಷಾ ಕಾಂಗ್ರೆಸ್‌ಗೆ ಸೇರಿಕೊಳ್ಳಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಅಂದಹಾಗೆ ನಟಿ ತ್ರಿಷಾ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಡುವಂತೆ ನಟ ದಳಪತಿ ವಿಜಯ್ ಪ್ರೋತ್ಸಾಹ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 39 ವರ್ಷದ ನಟಿ ತ್ರಿಷಾ ಸಿನಿಮಾರಂಗದಲ್ಲೂ ಸಕ್ರೀಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಜೊತೆಗೆ ಕುತೂಹಲ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಜೆ ಜಯಲಿತಾ ಬಿಟ್ಟರೆ ಸಿನಿಮಾದಿಂದ ರಾಜಕೀಯಕ್ಕೆ ಬಂದು ಸಕ್ಸಸ್ ಆದವರು ಯಾರು ಇಲ್ಲ. ಹಾಗಾಗಿ ತ್ರಿಷಾ ರಾಜಕೀಯ ಜೀವನ ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
Ponniyin Selvan; ಐಶ್ವರ್ಯಾ ಲುಕ್‌ಗೆ ಫ್ಯಾನ್ಸ್ ಫಿದಾ, ಉಳಿದವರ ಗೆಟಪ್ ಹೇಗಿದೆ?
ನಟಿ ತ್ರಿಷಾ ಸದ್ಯ ಖ್ಯಾತ ನಿರ್ದೇಶಕ ಮಿಣಿ ರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ತ್ರಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೊಡ್ಡ ತಾರಾಬಳಗ ಇರುವ ಸಿನಿಮಾ ಇದಾಗಿದ್ದು ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದುಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಐಶ್ವರ್ಯಾ ರೈ, ಚಿಯಾನ್ ವಿಕ್ರಾಮ್, ಕಾರ್ತಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಾಗಿ ತ್ರಿಷಾ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.
ನಂದಿ ಮತ್ತು ಶಿವನ ನಡುವೆ ಚಪ್ಪಲಿ ಧರಿಸಿದ ತ್ರಿಶಾ ವಿರುದ್ಧ ಆಕ್ರೋಶ!
ಪೊನ್ನಿಯನ್ ಸೆಲ್ವನ್ ಜೊತೆಗೆ ತ್ರಿಷಾ ರಾಮ್ ಪಾರ್ಟ್1, ದಿ ರೋಡ್ ಸಿನಿಮಾಗಳು ಸೇರಿದಂತೆ ಇನ್ನು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತ್ರಿಷಾ ಕೊನೆಯದಾಗಿ ಪರಮಪದಂ ವಿಲಯತ್ತು ಎನ್ನುವ ತಮಿಳು ಸಿನಿಮಾ ಮೂಲಕ ಕೊನೆಯದಾಗಿ ಅಭಿಮಾನಿಗಳ ಮುಂದೆ ಬಂದಿದ್ದರು. 201ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಇನ್ನು ನಟಿ ತ್ರಿಷಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ದ್ವಿತ್ವ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಪವರ್ ಸ್ಟಾರ್ ಅಗಲಿಕೆಯ ಕಾರಣ ಈ ಸಿನಿಮಾ ಇನ್ನು ತಡವಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ತ್ರಿಷಾ ಪವರ್ ಸ್ಟಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ದ್ವಿತ್ವ ಮೂಲಕ ಮತ್ತೆ ಕನ್ನಡಕ್ಕೆ ಬರ್ತಾರಾ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿದೆ. ಈ ನಡುವೆ ರಾಜಕೀಯ ಎಂಟ್ರಿಯ ಸುದ್ದಿ ಅಭಿಮಾನಿಗಳ ಅಚಚ್ರಿ ಮೂಡಿಸಿದೆ.