Asianet Suvarna News Asianet Suvarna News

Jai Bheem: ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್ ಹೆಸರಲ್ಲಿ 10 ಲಕ್ಷ ಠೇವಣಿ ಇಟ್ಟ ಸೂರ್ಯ

  • Jai Bhim: ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್‌ಗೆ ನಟನ ಕಾಣಿಕೆ
  • 10 ಲಕ್ಷ ಠೇವಣಿ ಇಟ್ಟ ಕಾಲಿವುಡ್ ನಟ ಸೂರ್ಯ
Kollywood actor Suriya Donates Rs 10 Lakh to Parvathi Ammal the Real Inspiration for Jai Bhim dpl
Author
Bangalore, First Published Nov 16, 2021, 6:16 PM IST
  • Facebook
  • Twitter
  • Whatsapp

ನಟರಾದ ಸೂರ್ಯ(Suriya) ಮತ್ತು ಜ್ಯೋತಿಕಾ ಅವರ ಹೋಮ್ ಪ್ರೊಡಕ್ಷನ್ ಬ್ಯಾನರ್ 2D ಎಂಟರ್‌ಟೈನ್‌ಮೆಂಟ್ ನವೆಂಬರ್14ರಂದು ಪಾರ್ವತಿ ಅಮ್ಮಾಳ್ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳ ಫಿಕ್ಸ್‌ಡ್ ಠೇವಣಿ ತೆರೆಯುತ್ತಾರೆ ಎಂದು ಘೋಷಿಸಿದ್ದಾರೆ. ಅವರ ಜೀವನ ಕಥೆಯು ಸೂರ್ಯ ಅವರ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ಜೈ ಭೀಮ್‌ನ ಕಥಾವಸ್ತುವನ್ನು ಪ್ರೇರೇಪಿಸಿತು. ಪಾರ್ವತಿ ಅಮ್ಮಾಳ್ ಪತಿ ರಾಜಾಕಣ್ಣು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾದ ನಂತರ ನ್ಯಾಯಕ್ಕಾಗಿ ಹೋರಾಡಿದರು. ಇದುವೇ ಜೈ ಭೀಮ್‌ ಕಥೆಯ ಜೀವಾಳ.

ಎಫ್‌ಡಿಗಾಗಿ ಸ್ವಾಧೀನಪಡಿಸಿಕೊಂಡ ಬಡ್ಡಿಯನ್ನು ಪ್ರತಿ ತಿಂಗಳು ಪಾರ್ವತಿ ಅಮ್ಮಾಳ್‌ಗೆ ನೀಡಲಾಗುವುದು. ಆಕೆಯ ಮರಣದ ನಂತರ ಈ ಮೊತ್ತವನ್ನು ಆಕೆಯ ಮಕ್ಕಳಿಗೆ ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಸೂರ್ಯ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

#WeStandWithSuriya: ನಟನಿಗೆ 5 ಕೋಟಿ ರೂ. ಪರಿಹಾರ ನೀಡಲು ಲೀಗಲ್ ನೋಟಿಸ್

ಜೈ ಭೀಮ್ ಸಿನಿಮಾ 1993 ರಲ್ಲಿ ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರು ವಕೀಲರಾಗಿದ್ದಾಗ ಹೋರಾಡಿದ ಕಾನೂನು ಪ್ರಕರಣವನ್ನು ಆಧರಿಸಿದೆ. ನ್ಯಾಯಮೂರ್ತಿ ಕೆ ಚಂದ್ರು ಅವರು 96,000 ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಅವರು ನ್ಯಾಯಾಂಗ ವ್ಯವಸ್ಥೆಯಲ್ಲೇ ಕೆಲವು ಮಹತ್ವದ ತೀರ್ಪುಗಳಿಗೆ ಹೆಸರುವಾಸಿಯಾಗಿದ್ದಾರೆ.

ಸಿನಿಮಾ ಬಿಡುಗಡೆಗೂ ಮುನ್ನ, ಇರುಲರ್ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಸೂರ್ಯ ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂ. ನೀಡಿದ್ದರು. ಇರುಲರನ್ನು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪು (PVTG) ಎಂದು ವರ್ಗೀಕರಿಸಲಾಗಿದೆ. ಈ ಮೊತ್ತವನ್ನು ಇರುಲರ್ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಪಜಂಕುಡಿ ಇರುಲರ್ ಎಜುಕೇಷನಲ್ ಟ್ರಸ್ಟ್‌ಗೆ ದೇಣಿಗೆ ನೀಡಲಾಯಿತು. ಚೆಕ್ ಅನ್ನು ನವೆಂಬರ್ 1 ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಹಸ್ತಾಂತರಿಸಲಾಯಿತು.

Kollywood actor Suriya Donates Rs 10 Lakh to Parvathi Ammal the Real Inspiration for Jai Bhim dpl

1995ರ ನೈಜ ಘಟನೆ ಆಧರಿಸಿದ ಸಿನಿಮಾ ಕಥೆಯಾದ್ದರಿಂದ ಇರುಳರು ಎಂಬ ಸಮುದಾಯಕ್ಕೆ ಪೊಲೀಸರು ಯಾವ ರೀತಿ ಹಿಂಸೆ ನೀಡಿದ್ದರು? ಇದರಿಂದ ಅವರು ಎಷ್ಟು ನೋವು, ವೇದನ ಅನುಭವಿಸಿದ್ದಾರೆ, ಎಂಬುದನ್ನು ಮನಮುಟ್ಟುವಂತೆ ತೋರಿಸಲಾಗಿದೆ. ಇರುಳರ ಸಮುದಾಯದ ಪರ ವಕೀಲ ಚಂದ್ರು (Lawyer Chandru) ನ್ಯಾಯಾಲಯದಲ್ಲಿಈ ಸಮುದಾಯದ ಪರ ವಾದ ಮಾಡಿ ನ್ಯಾಯ ತಂದು ಕೊಡುತ್ತಾನೆ. ವಕೀಲ ಚಂದ್ರು ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇಲಿ (Rat) ಮತ್ತು ಹಾವು (Snake) ಹಿಡಿದು, ಇಟ್ಟಿಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ಧ ಬುಡಕಟ್ಟು ಜನಾಂಗ ಪೊಲೀಸರಿಗೆ ಸಿಲುಕಿ ನರಳಿದ ಇತಿಹಾಸವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. 

Kollywood actor Suriya Donates Rs 10 Lakh to Parvathi Ammal the Real Inspiration for Jai Bhim dpl

ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ಪ್ರಕಾಶ್ ರಾಜ್, ರಜಿಶಾ ವಿಜಯನ್, ಮಣಿಕಂದನ್ ರಾವ್ ರಮೇಶ್ ಮತ್ತು ಲಿಜೋ ಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ವನ್ನಿಯಾರ್ ಸಮುದಾಯಕ್ಕೆ ಅವಮಾನ ಮಾಡಿವೆ ಎಂದು ಆರೋಪಿಸಿ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಸೇರಿದಂತೆ ಜೈ ಭೀಮ್ ತಂಡದಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳಿಗೆ ವನ್ನಿಯಾರ್ ಸಂಗಮ್ ರಾಜ್ಯಾಧ್ಯಕ್ಷರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನಂತರದಲ್ಲಿ ಸಿನಿಮಾ ವಿವಾದಕ್ಕೆ ಸಿಲುಕಿದೆ.

ಹಿಂದಿಯಲ್ಲಿ ಮಾತನಾಡಿದವನಿಗೆ ಕಪಾಳಮೋಕ್ಷ ಮಾಡಿದ ನಟ ಪ್ರಕಾಶ್ ರೈ; ವಿಡಿಯೋ ವೈರಲ್

ಅವರು ಬೇಷರತ್ ಕ್ಷಮೆಯಾಚಿಸಲು ಮತ್ತು ದೃಶ್ಯಗಳನ್ನು ಡಿಲೀಟ್ ಮಾಡಲು ಸಹ ಕೋರಿದ್ದಾರೆ.  ತ್ತೊಂದೆಡೆ, ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಈ ವಿಚಾರದಲ್ಲಿ ಜೈ ಭೀಮ್ ತಂಡಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ.

Kollywood actor Suriya Donates Rs 10 Lakh to Parvathi Ammal the Real Inspiration for Jai Bhim dpl

ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ)ಯ ಅನ್ಬುಮಣಿ ರಾಮದಾಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದನ್ನು ರಿಲೀಸ್ ಮಾಡಿದ್ದು, ಜೈ ಭೀಮ್ ವನ್ನಿಯಾರ್ ಸಮುದಾಯದ ಮೇಲೆ ಯೋಜಿತ ದಾಳಿ ಎಂದು ಆರೋಪಿಸಿದ್ದಾರೆ. ಪ್ರತಿಕ್ರಿಯೆಯಾಗಿ, ಸೂರ್ಯ ನವೆಂಬರ್ 11 ರಂದು ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಯಾವುದೇ ವ್ಯಕ್ತಿ ಅಥವಾ ನಿರ್ದಿಷ್ಟ ಸಮುದಾಯವನ್ನು ನೋಯಿಸುವ ಉದ್ದೇಶವನ್ನು ಚಿತ್ರದ ತಂಡದಿಂದ ಯಾರೂ ಹೊಂದಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios