Asianet Suvarna News Asianet Suvarna News

ಹಿಂದಿಯಲ್ಲಿ ಮಾತನಾಡಿದವನಿಗೆ ಕಪಾಳಮೋಕ್ಷ ಮಾಡಿದ ನಟ ಪ್ರಕಾಶ್ ರೈ; ವಿಡಿಯೋ ವೈರಲ್!

ಹಿಂದಿ ಮಾತನಾಡಬೇಡಿ, ತಮಿಳು ಮಾತನಾಡಿ ಎಂದು ಜನ ಸಾಮಾನ್ಯನ ಕೆನ್ನೆಗೆ ಭಾರಿಸಿದ ಖ್ಯಾತ ನಟ...... 

Tamil Prakash Raj trolled for Slapping a man for speaking hindi  Jai Bhim vcs
Author
Bangalore, First Published Nov 4, 2021, 1:44 PM IST
  • Facebook
  • Twitter
  • Whatsapp

'ಮಾ' (MAA) ಚುನಾವಣೆ ಹಾಗೂ 'ಜೈ ಭೀಮ್‌' (Jai Bhim) ಸಿನಿಮಾದಿಂದ ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಪ್ರತಿ ದಿನವೂ ಒಂದೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನ ದಿಕ್ಕರಿಸಬೇಕೋ ಅಥವಾ ಭಾಷೆ ಪ್ರೀತಿ ಎಂದು ಒಪ್ಪಿಕೊಳ್ಳಬೇಕೋ ಎಂದು ತಿಳಿಯದೇ ಮೌನಿಯಾದವರೂ ಇದ್ದಾರೆ. 

ಹೌದು! ನಟ ಸೂರ್ಯ (Suriya) ನಟನೆಯ ಜೈ ಭೀಮ್ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಆಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರೈ ಕೂಡ ನಟಿಸಿದ್ದಾರೆ, ಅವರ ಅದ್ಭುತ ನಟನೆ ಮೆಚ್ಚಿಕೊಳ್ಳುತ್ತಿರುವ ನೆಟ್ಟಿಗರು ಈ ಒಂದು ದೃಶ್ಯವನ್ನು ಖಂಡಿಸುತ್ತಿದ್ದಾರೆ. ಪ್ರಕಾಶ್ ರೈ ಎದುರಿಗಿದ್ದ ವ್ಯಕ್ತಿಯೊಬ್ಬ ಹಿಂದಿಯಲ್ಲಿ (Hindi) ಮಾತನಾಡುತ್ತಾನೆ, ಹಿಂದಿಯಲ್ಲಿ ಮಾತನಾಡಬೇಡ ತಮಿಳಿನಲ್ಲಿ (Tamil) ಮಾತನಾಡು ಎಂದು ಕಪಾಳಕ್ಕೆ (Slap) ಹೊಡೆಯುತ್ತಾರೆ. ಆನಂತಕ ಆ ವ್ಯಕ್ತಿ ತಮಿಳಿನಲ್ಲಿ ಮಾತನಾಡುತ್ತಾರೆ.  

Tamil Prakash Raj trolled for Slapping a man for speaking hindi  Jai Bhim vcs

ಜೈ ಭೀಮಾ ಸಿನಿಮಾ ತಮಿಳು, ತೆಲುಗು (Telugu), ಕನ್ನಡ (Kannada) ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಭಾಷೆಯಲ್ಲೂ ಈ ಡೈಲಾಗ್ ಹಾಕಿದ್ದಾರೆ ಆದರೆ ಹಿಂದಿಯಲ್ಲಿ ಮಾತ್ರ ಕಪಾಳಕ್ಕೆ ಹೊಡೆದು, 'ಈಗ ಸತ್ಯ ಹೇಳು' ಎನ್ನುವ ಸಾಲಗೆ ಬದಲಾಯಿಸಿದ್ದಾರೆ. ನಿರ್ದೇಶಕರ ಉದ್ದೇಶ ಏನಿತ್ತೋ ಗೊತ್ತಿಲ್ಲ, ಆದರೆ ಪ್ರಕಾಶ್ ಸಿನಿಮಾದಲ್ಲೂ ತಮ್ಮ ಪ್ರೊಪೊಗಂಡ (Propoganda) ಹೇಳಿಕೊಂಡಿದ್ದಾರೆ ಎಂದು ವಿರೋಧಿಗಳು ಗೇಲಿ ಮಾಡುತ್ತಿದ್ದಾರೆ. 

ಪ್ರಕಾಶ್ ರಾಜ್ ಮದುವೆ ವಾರ್ಷಿಕೋತ್ಸವ: ಮೊದಲ ಪತ್ನಿ ಮಕ್ಕಳೂ ಭಾಗಿ

'ಜೈ ಭೀಮಾ ಸಿನಿಮಾ ನೋಡಿ ನನ್ನ ಮನಸ್ಸು ಮುರಿದಿದೆ. ಯಾವ ನಟನ ವಿರುದ್ಧವಾಗಿಯೂ ನಾನು ಏನೂ ಹೇಳುತ್ತಿಲ್ಲ. ಆದರೆ ಈ ಒಂದು ದೃಶ್ಯ ನೋಡಿ ತುಂಬಾನೇ ಬೇಸರವಾಗಿದೆ. ಪ್ರಕಾಶ್ ಆತನಿಗೆ ಕಪಾಳಕ್ಕೆ ಹೊಡೆದು, ತಮಿಳು ಮಾತನಾಡು ಎಂದು ಹೇಳುವ ದೃಶ್ಯ ಬೇಕಿರಲಿಲ್ಲ. ಈಗಲೂ ಅವರಿಗೆ ಸಮಯವಿದೆ. ಕಟ್ ಮಾಡಿ ಹಾಕಬಹುದು,' ಎಂದು ಸಿನಿಮಾ ಕ್ರಿಟಿಕ್ (Film critic) ಒಬ್ಬರು ಟ್ಟೀಟ್ ಮಾಡಿದ್ದಾರೆ. 

'ಈ ದೃಶ್ಯ ಹಿಂದಿ ಮಾತನಾಡುವ ಭಾರತೀಯರ ಬಗ್ಗೆ ಇರುವುದಲ್ಲ. ಪ್ರಕಾಶ್‌ಗೆ ಅರ್ಥವಾಗದ ಭಾಷೆ ಹಿಂದಿಯಲ್ಲಿ ಮಾತನಾಡಿ, ಅವನನ್ನು ಯಾಮಾರಿಸಬಹುದು ಎಂದು ಗಿಮಿಕ್ ಮಾಡುತ್ತಾನೆ. ಅದು ತಿಳಿಯುತ್ತಿದ್ದಂತೆ ಪ್ರಕಾಶ್ ಅವನ ಕೆನ್ನೆಗೆ ಭಾರಿಸುತ್ತಾರೆ.  ಈ ಕೇವಲ ಸಿನಿಮಾ ಅಷ್ಟೇ. ಯಾವ ತಮಿಳು ನಿರ್ದೇಶಕರು ಕೂಡ ಹಿಂದೆ ವಿರೋಧಿಗಳಲ್ಲ,' ಎಂದು ಕೆಲವರು ಪ್ರಕಾಶ ಪರವಾಗಿ ಮಾತನಾಡಿದ್ದಾರೆ. 

ಚಿತ್ರೀಕರಣದ ವೇಳೆ ನಟ ಪ್ರಕಾಶ್‌ ರಾಜ್‌ಗೆ ಗಾಯ; ಶಸ್ತ್ರ ಚಿಕಿತ್ಸೆ ನಂತರ ಸೆಲ್ಫೀ

'ಡಿಯರ್ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್, ನೀವು ನನಗೆ ಹೇಳಿ ನಮ್ಮ ಯಾವ ಸಂವಿಧಾನದಲ್ಲಿ ಹಿಂದೆ ಮಾತನಾಡುವುದು ತಪ್ಪು ಎಂದಿದೆ. ಅದಕ್ಕೆ ನೀವು ಆ ವ್ಯಕ್ತಿಗೆ ಹೊಡೆದಿದ್ದೀರಾ? ಹಾಗಿದ್ರೆ ನೀವು ಹಿಂದಿ, ಮಲಯಾಳಂ ಮತ್ತು ತೆಲುಗು ಮಾತನಾಡುವುದಕ್ಕೆ ಎಷ್ಟು ಮಂದಿ ಕನ್ನಡಿಗರು ನಿಮಗೆ ಭಾರಿಸಬೇಕು?' ಎಂದು ಟ್ಟೀಟ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ದೃಶ್ಯದ ಬಗ್ಗೆ ಚಿತ್ರ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಸಿನಿಮಾ ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ತಮಿಳು ಚಿತ್ರರಂಗದಲ್ಲಿ ಮಾಡಿರುವ ಅತ್ಯಂತ ಬೋಲ್ಡ್ ಚಿತ್ರ ಜೈ ಭೀಮ್ ಎಂದು ಪರಿಗಾಣಿಸಲಾಗುತ್ತಿದ್ದು, ಬುಡಗಟ್ಟು ಜನಾಂದ ಮಹಿಳೆಯೊಬ್ಬಳಿಗೆ ಆಗುವ ಅನ್ಯಾಯದ ವಿರುದ್ದ ವಕೀಲರೊಬ್ಬರು ಹೋರಾಡುವ ಚಿತ್ರಕಥೆಯುಳ್ಳ ಸಿನಿಮಾವಿದು. ದುಡ್ಡು, ಅಧಿಕಾರ ಸಿಕ್ಕ ಮೇಲ್ವರ್ಗದ ಜನರು ತಮ್ಮ ಹಿತಕ್ಕಾಗಿ ಬಡವರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ಕಥಾಹಂದರವಿದೆ ಈ ಚಿತ್ರಕ್ಕೆ. ಅಮೇಜಾನ್ ಪ್ರೈಮ್‌ನಲ್ಲಿ ನವೆಂಬರ್ 2ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ನಟನೆಗೆ ಅತ್ಯುತ್ತರ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

Follow Us:
Download App:
  • android
  • ios