Asianet Suvarna News Asianet Suvarna News

ನಟ ಕಾರ್ತಿ ಪುತ್ರನ ನಾಮಕರಣ; 'ಕಂದನ್' ಅರ್ಥ ಗೊತ್ತಾ?

ತಮಿಳು ನಟ ಕಾರ್ತಿ 2ನೇ ಮಗುವಿಗೆ ನಾಮಕರಣ ಮಾಡಿದ್ದಾರೆ. ಹೆಸರು ಡಿಫರೆಂಟ್ ಆಗಿದೆ. ಆದರೆ ಅರ್ಥ ತುಂಬಾನೇ ಸಿಂಪಲ್....
 

kollywood actor Karthi reveals baby boy name with cute photo vcs
Author
Bangalore, First Published Mar 20, 2021, 2:31 PM IST

ಕಾಲಿವುಡ್‌ ಮಾಸ್ ಹೀರೋ, ಹುಡುಗಿಯರ ನಿದ್ದೆ ಕದ್ದ ಲವರ್ ಬಾಯ್‌ ನಟ ಕಾರ್ತಿ 2020 ಅಕ್ಟೋಬರ್ ತಿಂಗಳಲ್ಲಿ ಕುಟುಂಬಕ್ಕೆ ಎರಡನೇ ಮಗು ಬರ ಮಾಡಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ನಾಮಕರಣ ಮಾಡುವ ಮೂಲಕ ಪುತ್ರನ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

ಗುಡ್ ನ್ಯೂಸ್; ಗಂಡು ಮಗುವಿಗೆ ತಂದೆಯಾದ ನಟ ಕಾರ್ತಿ 

ಪುತ್ರನ ಪುಟ್ಟ ಕೈ ಫೋಟೋ ಶೇರ್ ಮಾಡಿಕೊಂಡು, 'ನಿನ್ನ ತಾಯಿ, ಅಕ್ಕ ಮತ್ತು ನಾನು ನಿನಗೆ ಕಂದನ್‌ ಎಂದು ಹೆಸರಿಟ್ಟಿದೀವೆ. ನಿನ್ನ ಆಗಮನದಿಂದ ನಮ್ಮ ಕುಟುಂಬದಲ್ಲಿ ಮತ್ತಷ್ಟು ಸಂತೋಷ ತುಂಬಿರಲಿ. ನಿನ್ನ ಪ್ರೀತಿಯ ಅಪ್ಪ,' ಎಂದು ಬರೆದಿದ್ದಾರೆ.

kollywood actor Karthi reveals baby boy name with cute photo vcs

ಅಕ್ಟೋಬರ್ 21ರಂದು ಜನಿಸಿದ ಪುಟ್ಟ ಕಂದಮ್ಮನ ಹೆಸರಿನ ಅರ್ಥ ಏನು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ, ಪ್ರಶ್ನಿಸುತ್ತಿದ್ದಾರೆ. ತಮಿಳಿನಲ್ಲಿ ಕಂದನ್ ಎಂದರೆ ಪ್ರಸಿದ್ಧ ಮುರುಗನ್ ದೇವರ ಹೆಸರು. ಕಾರ್ತಿ ಹೆಸರೂ ಕೂಡ ಕಾರ್ತಿಕೇಯನ್. ಮುರುಗನ್ ಆಶೀರ್ವಾದ ಇದಾ ಹೀಗೆ ಇರಲಿ ಎಂದು ಪುತ್ರಿಗೂ ದೇವರ ಹೆಸರಿನಿಟ್ಟಿದ್ದಾರೆ. 

ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ: ಕಿರಿಕ್ ಚೆಲುವೆಯ ಕ್ಯೂಟ್ ಲುಕ್

2011ರಲ್ಲಿ ಕಾರ್ತಿ ಹಾಗೂ ರಂಜನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2013ರಲ್ಲಿ ಮುದ್ದಾದ ಹೆಣ್ಣು ಮಗಳನ್ನು ಬರ ಮಾಡಿಕೊಂಡರು. 2020ರಲ್ಲಿ ಪುತ್ರನ ಎಂಟ್ರಿ ಕೂಡ ಆಗಿದೆ. ಇದೀಗ ಕಾರ್ತಿ ಫ್ಯಾಮಿಲಿ ಕಂಪ್ಲೀಟ್ ಆದಂತಾಗಿದೆ.

 

Follow Us:
Download App:
  • android
  • ios