Asianet Suvarna News Asianet Suvarna News

ಕರಣ್​ ಜೋಹರ್​ರನ್ನು ಬಟಾ ಬಯಲು ಮಾಡಿದ ರಾಣಿ ಮುಖರ್ಜಿ! ಷೋ ಬಿಟ್ಟು ನಡೆದ ಕಾಜೋಲ್​

ಕಾಫಿ ವಿತ್​ ಕರಣ್​ ಷೋನಲ್ಲಿ ಕರಣ್​ ಜೋಹರ್​ರನ್ನು ಬಟಾ ಬಯಲು ಮಾಡಿದ ರಾಣಿ ಮುಖರ್ಜಿ! ಷೋ ಬಿಟ್ಟು ನಡೆದ ಕಾಜೋಲ್​. ಆಗಿದ್ದೇನು?
 

Koffee With Karan 8 Rani Mukerji Will Expose Karan Johar Kajol Stages  Walk Out suc
Author
First Published Nov 27, 2023, 3:38 PM IST

ಹಿಂದಿ ರಿಯಾಲಿಟಿ ಷೋನಲ್ಲಿ ಸಾಕಷ್ಟು ಹಂಗಾಮ ಸೃಷ್ಟಿಸ್ತಿರೋ ಷೋಗಳಲ್ಲಿ ಒಂದು ಕಾಫಿ ವಿತ್ ಕರಣ್​.  ಈ ಕಾರ್ಯಕ್ರಮ ನಡೆಸಿಕೊಡುತ್ತಿರುವವರು ಇನ್ನೂ ಅವಿವಾಹಿತರಾಗಿಯೇ ಇರೋ ನಿರ್ದೇಶಕ ಕರಣ್​ ಜೋಹರ್​. ಆದರೆ ಈ ಕಾರ್ಯಕ್ರಮ ಸದಾ ವಿವಾದಗಳಿಂದಲೇ ಫೇಮಸ್ಸು. ಅದರಲ್ಲಿಯೂ ಸೆಕ್ಸ್​ ಪ್ರಶ್ನೆಗಳಿಗೇ ಇಲ್ಲಿ ಪ್ರಾಧಾನ್ಯ. ಅಶ್ಲೀಲ ಪ್ರಶ್ನೆಗಳನ್ನು ಗೆಸ್ಟ್​ಗಳಿಗೆ ಕೇಳುವ ಮೂಲಕ ತಮ್ಮ ಷೋನ ಟಿಆರ್​ಪಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಜನರೂ ಬೈಯುತ್ತಲೇ ಇಂಥ ಷೋಗಳನ್ನು ನೋಡುವುದು ಈ ರೀತಿಯ ರಿಯಾಲಿಟಿ ಷೋಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಬರುವ ಸೆಲೆಬ್ರಿಟಿಗಳು ತಮ್ಮ ಮನದ ಮಾತುಗಳನ್ನು ಹೇಳಿ, ತಮ್ಮ ಹಳೆಯ ಬಾಯ್​ಫ್ರೆಂಡ್​, ಗರ್ಲ್​ಫ್ರೆಂಡ್ಸ್​ ವಿಷಯ ತಿಳಿಸಿ ಹಲ್​ಚಲ್​ ಸೃಷ್ಟಿಸುವುದು ಇದೆ. ಇದೀಗ ಕರಣ್​ ಷೋಗೆ ಬಂದಿರುವ ನಟಿಯೊಬ್ಬರು ಖುದ್ದು ಕರಣ್​ ಅವರನ್ನು ಬಟಾಬಯಲು ಮಾಡ್ತಾರಾ ಎನ್ನುವ ಪ್ರಶ್ನೆ ಕಾಡಿದೆ.

ಹೌದು. ಈ ಷೋನ ಹೊಸ ಪ್ರೊಮೋ ರಿಲೀಸ್ ಆಗಿದ್ದು, ಅದರಲ್ಲಿ ನಟಿಯರಾದ ಕಾಜೋಲ್​ ಮತ್ತು ರಾಣಿ ಮುಖರ್ಜಿಯವರು ಕಾಣಿಸಿಕೊಂಡಿದ್ದಾರೆ. 2007ರಲ್ಲಿ ಬಿಡುಗಡೆಯಾದ ಕುಚ್​ ಕುಚ್​ ಹೋತಾ ಹೈ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ಈ ಇಬ್ಬರು ನಟಿಯರು ನಟಿಸಿದ್ದರು. ಅದರ ಬಳಿಕ ಈಗ ಇಬ್ಬರೂ ಕಾಫಿ ವಿತ್​ ಕರಣ್​ ಸೀಸನ್​-8ನಲ್ಲಿ ಕಾಣಿಸಿಕೊಂಡಿದ್ದಾರೆ. 

ಕರೀನಾ ಮನೆಯಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಗಂಡಂದಿರ ಫೋಟೋ! ಬಯಲಾಯ್ತು ಗುಟ್ಟು...

ಈ ಸಂದರ್ಭದಲ್ಲಿ ಕರಣ್​ ಅವರು ಕುಚ್​ ಕುಚ್​ ಹೋತಾಹೈ ಚಿತ್ರದ ನೆನಪನ್ನು ಮಾಡಿದರು. ಆಗ ರಾಣಿ ಅವರು ನಿಮ್ಮನ್ನು ಬಟಾ ಬಯಲು ಮಾಡುವೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇದನ್ನು ಕೇಳಿ ಕರಣ್​ ಜೋಹರ್​ಗೆ ಶಾಕ್​ ಆಗಿದೆ. ನಂತರ ರಾಣಿ ಮುಖರ್ಜಿ, ''ನೀವು ನನ್ನ ಕೈಯಿಂದ ಆಹಾರವನ್ನು ಕಸಿದುಕೊಂಡಿದ್ದೀರಿ, ನೀವು ನನಗೆ ಹೊಡೆದಿದ್ದೀರಿ' ಎಂದು ನೆನಪಿಸಿಕೊಂಡರು. ಅದಕ್ಕೆ ಕರಣ್ ಜೋಹರ್, 'ನಾನು ನಿಮಗೆ ಹೊಡೆದಿಲ್ಲ' ಎಂದು ಸಮರ್ಥಿಸಿಕೊಂಡರು.  ಇಷ್ಟಾಗುತ್ತಿದ್ದಂತೆಯೇ ಕಾಜೋಲ್​, ಹಾಗಿದ್ದರೆ ಹೆಣ್ಣಿನ ಮೇಲೆ ದೌರ್ಜನ್ಯ ಆಗಿದೆ. ನಾನು ಇಂಥ ಷೋನಲ್ಲಿ ಇರುವುದಿಲ್ಲ ಎಂದು ಷೋ ಬಿಟ್ಟು ಹೋದರು. 
 
ಈ ಷೋನದಲ್ಲಿ ಇದಾಗಲೇ ಹಲವಾರು ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಪತಿ ರಣವೀರ್​ ಸಿಂಗ್​ ಆಗಮಿಸಿದ್ದ ಸಂಚಿಕೆ ಸತ್​ ಸದ್ದು ಮಾಡಿತ್ತು. ದೀಪಿಕಾ ತಮ್ಮ ಎಕ್ಸ್​ ಬಗ್ಗೆ ಮಾತನಾಡಿ ಹಲ್​ಚಲ್​ ಸೃಷ್ಟಿಸಿದ್ದರು. ಇದೇ ರೀತಿ ಹಲವಾರು ಮಂದಿ ಈ ವಿವಾದಿತ ಷೋನಲ್ಲಿ ಭಾಗವಹಿಸಿ, ವಿವಾದಾತ್ಮಕ ಮಾತನಾಡಿ ಸದ್ದು ಮಾಡುತ್ತಿದ್ದಾರೆ. 

ದೀಪಿಕಾ ನನ್ನ ಸ್ಪರ್ಧಿನೇ ಅಲ್ಲ, ಅವಳೇನಿದ್ರೂ... ಕರೀನಾ ಕಪೂರ್​ ಅಹಂಕಾರದ ಮಾತಿಗೆ ನೆಟ್ಟಿಗರ ಕ್ಲಾಸ್​

 
 
 
 
 
 
 
 
 
 
 
 
 
 
 

A post shared by Karan Johar (@karanjohar)

Follow Us:
Download App:
  • android
  • ios