Janhavi Kapoor ಜಾನ್ವಿ ಹೀಗೆ ಮಾಡ್ತಾಳೆಂದು ಶ್ರೀದೇವಿ ಮನೆಯಲ್ಲಿ ಬಾತ್‌ರೂಮ್‌ಗೆ ಲಾಕ್ ಹಾಕುತ್ತಿರಲಿಲ್ಲವಂತೆ!
ಚೆನ್ನೈ ಬಂಗಲೆಯನ್ನು ಜನರಿಗೆ ಪರಿಚಯಿಸಿಕೊಟ್ಟ ಜಾನ್ವಿ ಕಪೂರ್. ಬಾತ್‌ರೂಮ್ ಹಿಂದಿರುವ ಸ್ಟೋರಿ ಬಿಚ್ಚಿಟ್ಟ ನಟಿ....
ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಮೂಲತಃ ತಮಿಳು ನಾಡಿವರಾಗಿದ್ದು, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಂತರ ಮುಂಬೈಗೆ ಹಾರಿದ್ದರು. ದೇಶ ವಿದೇಶ ಸುತ್ತಿದ್ದರೂ ನನ್ನ ಉಸಿರು ನೆಮ್ಮದಿ ಇರುವುದು ಚೆನ್ನೈನಲ್ಲಿರುವ ಮನೆಯಲ್ಲಿ ಆಗಾಗ ಹೇಳುತ್ತಿದ್ದರು. ಶ್ರೀದೇವಿ ಅಗಲಿದ ನಂತರ ಚೆನ್ನೈ ಮನೆಯನ್ನು ಬೋನಿ ಕಪೂರ್ ವಿಭಿನ್ನವಾಗಿ ಅಲಂಕಾರ ಮಾಡಿದ್ದಾರೆ. ದೇವಿ ಕಲೆಕ್ಟ್ ಮಾಡಿರುವ ಎಲ್ಲಾ ಆಂಟಿಕ್ ಪೀಸ್ ಮತ್ತು ಪೇಂಟಿಂಗ್‌ಗಳನ್ನು ಈ ಮನೆಯಲ್ಲಿ ಇಡಲಾಗಿದೆ. ವೋಗ್ ಯೂಟ್ಯೂಬ್ ಚಾನೆಲ್‌ನಲ್ಲಿ ಚೆನ್ನೈ ಮನೆ ಹೇಗಿದೆ ಎಂದು ಜಾನ್ವಿ ಕಪೂರ್ ಟೂರ್ ಮಾಡಿದ್ದಾರೆ.
ಇಂಟ್ರೆಸ್ಟಿಂಗ್ ವಿಚಾರ:
ಚೆನ್ನೈ ಮನೆ ಟೂರ್ ಮಾಡುವಾಗ ಜಾನ್ವಿ ತಮ್ಮ ಬೆಡ್ ರೂಮ್‌ಗೆ ಕರೆದುಕೊಂಡು ಹೋಗುತ್ತಾರೆ. ಆಗ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡುತ್ತಾರೆ. 'ನಾನು ಬಾತ್‌ರೂಮ್‌ಗೆ ಹೋಗಿ ಹುಡುಗರ ಜೊತೆ ಫೋನ್‌ನಲ್ಲಿ ಮಾತನಾಡುತ್ತೀನಿ ಎಂದು ಅಮ್ಮ ಹೆದರಿಕೊಳ್ಳುತ್ತಿದ್ದರು ಹೀಗಾಗಿ ನಮ್ಮ ಮನೆಯಲ್ಲಿ ಬಾತ್‌ರೂಮ್‌ಗಳಿಗೆ ಲಾಕ್‌ಗಳು ಇರುವುದಿಲ್ಲ. ನನ್ನ ರೂಮ್ ಸೂಪರ್ ಅಗಿ ರೆಡಿಯಾಗಿದೆ ಆದರೂ ಲಾಕ್ ಇಲ್ಲ' ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
'ಈ ಮನೆಯಲ್ಲಿ ಇರುವುದಕ್ಕೆ ತುಂಬಾನೇ ಖುಷಿಯಾಗುತ್ತದೆ. ಈ ಮನೆಗೆ ಬಗ್ಗೆ ನನಗೆ ಇರುವ ಖುಷಿ ಏನೆಂದರೆ ಅಮ್ಮನ ಪ್ರತಿಯೊಂದು ನೆನಪನ್ನು ಉಳಿಸಿಕೊಂಡಿದ್ದೀವಿ ಎಷ್ಟು ಹಳೆ ಮನೆ ರೀತಿ ಕಾಣಿಸುತ್ತದೆ ಅಷ್ಟೇ ಹೊಸ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ' ಎಂದಿದ್ದಾರೆ ಜಾನ್ವಿ.
ಶ್ರೀದೇವಿ ಪೇಂಟಿಂಗ್:
'ನಟನೆ ಆನಂತರ ಅಮ್ಮ ತುಂಬಾ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸ ಅಂದ್ರೆ ಪೇಂಟಿಂಗ್. ಅಮ್ಮ ಮಾಡಿರುವ ಪ್ರತಿಯೊಂದು ಪೇಂಟಿಂಗ್‌ನ ಈ ಮನೆ ಅಳವಡಿಸಲಾಗಿದೆ. ಶೂಟಿಂಗ್ ಇಲ್ಲದ ದಿನಗಳು ಅಥವಾ ನಮ್ಮ ರಜೆ ದಿನಗಳಲ್ಲಿ ಅಮ್ಮ ಪೇಂಟಿಂಗ್ ಮಾಡುತ್ತಿದ್ದರು ಅದನ್ನು ನೋಡಿ ಖುಷಿ ಮತ್ತು ನಾನು ಪೇಂಟಿಂಗ್ ಕಲಿತಿರುವುದು. ನಾವು ಬಾಲ್ಯದಲ್ಲಿ ಪೇಂಟಿಂಗ್ ಮಾಡಿ ಮನೆಯಲ್ಲಿ ಸಂತೆ ಮಾಡುತ್ತಿದ್ದೆವು. ನಮ್ಮ ಕುಟುಂಬಸ್ಥರು ಆ ಪೇಂಟಿಂಗ್ ರೂಮ್‌ನ ಪ್ರವೇಶ ಮಾಡಬೇಕು ಅಂದ್ರೆ ಹಣ ಕೊಡಬೇಕು ಹೊರಗಡೆ ಹೋಗಬೇಕು ಅಂದ್ರೂ ಹಣ ಕೊಡಬೇಕಿತ್ತು' ಎಂದು ಬಾಲ್ಯದ ಫನ್ನಿ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಶ್ರೀದೇವಿ ಮತ್ತು ಜಾನ್ವಿ ಕಪೂರ್ ನಡುವೆ ಹೋಲಿಕೆ ಮಾಡಬೇಡಿ - ಬೋನಿ ಕಪೂರ್
ಹುಡುಗರ ಬಗ್ಗೆ ಹುಷಾರು:
ಶ್ರೀದೇವಿ ತುಂಬಾ ಪ್ರೊಟೆಕ್ಟೀವ್ ತಾಯಿಯಾಗಿದ್ದರು ಮತ್ತು ಅವರ ಮಗಳು ಜಾನ್ವಿ ಕಪೂರ್ ಯಾರೊಂದಿಗಾದರೂ ಡೇಟಿಂಗ್ ಮಾಡುವ ಬಗ್ಗೆ ಚಿಂತಿಸುತ್ತಿದ್ದರು.ಬ್ರೈಡ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ, ಜಾನ್ವಿ ತನ್ನ ತಾಯಿಯನ್ನು ನೆನಪಿಸಿಕೊಂಡರು ಮತ್ತು ಪುರುಷರ ಬಗ್ಗೆ ನನ್ನ ತೀರ್ಪನ್ನು ಅವರ ತಾಯಿ ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು. 'ಹೌದು, ಮತ್ತು ಅವಳು ಹುಡುಗರ ಬಗ್ಗೆ ನನ್ನ ಜಡ್ಜ್‌ಮೆಂಟ್ ನಂಬುವುದಿಲ್ಲ ಎಂದು ಅವರು ಹೇಳುತ್ತಾರೆ, ಅವರೆ ನನಗೆ ಯಾರನ್ನಾದರೂ ಆಯ್ಕೆ ಮಾಡುತ್ತಾರೆ. ಏಕೆಂದರೆ ನಾನು ತುಂಬಾ ಸುಲಭವಾಗಿ ಪ್ರೀತಿಸುತ್ತೇನೆ.ಅವನು ಪ್ರತಿಭಾವಂತನಾಗಿರಬೇಕು ಮತ್ತು ಅವನು ಮಾಡುವ ಕೆಲಸದಲ್ಲಿ ಉತ್ಸುಕನಾಗಿರಬೇಕು. ನಾನು ಉತ್ಸುಕನಾಗಿರಬೇಕು ಮತ್ತು ಅವನಿಂದ ಏನನ್ನಾದರೂ ಕಲಿಯಬೇಕು. ಹಾಸ್ಯ ಪ್ರಜ್ಞೆಯೂ ಅತ್ಯಗತ್ಯ. ಮತ್ತು ಖಂಡಿತ' ಎಂದು ಜಾನ್ವಿ ಮಾತನಾಡಿದ್ದಾರೆ.