ಭಾರತೀಯ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ದ ಸಿನಿಮಾ 'ಬಾಹುಬಲಿ'.  ಒಂದು ಸಿನಿಮಾ ಸೂಪರ್ ಹಿಟ್‌ ಆಗಲು ಕಾರಣವೇ ನಾಯಕ, ನಿರ್ದೇಶಕ ಹಾಗೂ ನಟಿಯ ಪರಿಶ್ರಮ. ಅದರಲ್ಲೂ ರಾಜಮೌಳಿ ಹಾಗೂ ಪ್ರಭಾಸ್‌ ಸೂಪರ್‌ ಹಿಟ್ ಕಾಂಬಿನೇಷನ್‌ ಅಂತಾನೇ ಹೇಳ ಬಹುದು. ಏಕೆಂದರೆ ಇವರು ಆನ್‌ಸ್ಕ್ರೀನ್‌ ಮಾತ್ರವಲ್ಲದೇ, ಆಫ್‌ಸ್ಕ್ರೀನ್‌‌ನಲ್ಲೂ ಕೂಡ ತುಂಬಾ ಕ್ಲೋಸ್‌....

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ರಾಜಮೌಳಿ ಮಾತು:
ಬಾಹುಬಲಿ ಸಿನಿಮಾ ಪ್ರಚಾರದ ಸಮಯದಲ್ಲಿ ನಿರ್ದೇಶಕ ರಾಜಮೌಳಿ ಹೇಳಿದ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರ ಸ್ನೇಹ ಹುಟ್ಟಿದ್ದು ಹೇಗೆ? ಅದರಿಂದ ಸಿನಿಮಾ ಮಾಡಲು ನಿರ್ಧರಿಸಿದ್ದು ಹೇಗೆ ಎಂಬ ವಿಷಯವನ್ನು ಹಂಚಿಕೊಂಡಿದ್ದರು.

'ಪ್ರಭಾಸ್ ಹಾಗೂ ನಾನು ವೃತ್ತಿ ಬಾಂಧವ್ಯದ  ಜೊತೆ ಉತ್ತಮ ಗೆಳೆತನವನ್ನೂ ಹೊಂದಿದ್ದೇವೆ. 'ಛತ್ರಪತಿ' ಚಿತ್ರದ ವೇಳೆ ನಾವಿಬ್ಬರೂ ಪರಿಚಯವಾಗಿದ್ದು ಹಾಗೂ ಅಲ್ಲಿಂದಲೇ ಗೆಳೆಯರಾದದ್ದು,' ಎಂದು ಹೇಳಿಕೊಂಡಿದ್ದಾರೆ. ಅಷ್ಟೆೇ ಅಲ್ಲದೇ ಪ್ರಭಾಸ್‌ ನಾನು ಲೈಕ್‌ಮೈಂಡೆಡ್‌ ಎಂದೂ ಹೇಳಿದ್ದಾರೆ. 

'ನನ್ನ ಹಾಗೂ ಪ್ರಭಾಸ್‌ ವ್ಯಕ್ತಿತ್ವ ಒಂದೇ. ನಾವಿಬ್ಬರು ಎಷ್ಟು ಸಿನಿಮಾಗಳನ್ನು ಮಾಡಿದೆವು ಎಂಬುದನ್ನು ಲೆಕ್ಕ ಮಾಡುವುದಿಲ್ಲ. ಎಷ್ಟು ಒಳ್ಳೆ ಸಿನಿಮಾಗಳನ್ನು ಮಾಡಿದೆವು ಎಂದು ಮಾತ್ರ  ಲೆಕ್ಕ ಮಾಡುತ್ತೇವೆ. ನಮ್ಮಿಬ್ಬರಿಗೂ ಸಿನಿಮಾ ಲೆಕ್ಕವಿಟ್ಟು ಅಭ್ಯಾಸವೇ ಇಲ್ಲ' ಎಂದು ಹೇಳಿ ಮುಗುಳ್ನಕ್ಕಿದ್ದಾರೆ.

ಬಾಹುಬಲಿ ನಿರ್ದೇಶಕನನ್ನು ಸ್ವಾರ್ಥಿ ಎಂದ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ

ಮಾರುಕಟ್ಟೆ ಲೆಕ್ಕವಿಲ್ಲ:
ಅತ್ತ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದರೆ, ಇತ್ತ ಪ್ರಭಾಸ್‌ 'ರಾಧೆ ಶ್ಯಾಮ' ಚಿತ್ರೀಕರಣಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರನ್ನೂ ಒಟ್ಟಾಗಿ ನೋಡಬೇಕೆಂದು ಅಭಿಮಾನಿಗಳು ಡಿಮ್ಯಾಂಡ್‌ ಮಾಡುತ್ತಲೇ ಇರುತ್ತಾರೆ.

ಹೌದು! ಪ್ರಭಾಸ್‌ ಹಾಗೂ ರಾಜಮೌಳಿ ಸಂಭಾಷಣೆ ವಿಚಾರ ಅಥವಾ ಮಾರುಕಟ್ಟೆ ಲೆಕ್ಕಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಒಳ್ಳೆ ಕಥೆ ಹಾಗೂ ಅದರಿಂದ ಜನರಿಗೆ ಸಿಗುವ ಅರಿವು ಮಾತ್ರ ನಮಗೆ ಮುಖ್ಯ ಎನ್ನುವ ವಿಷಯವನ್ನು ದಕ್ಷಿಣ ಭಾರತದ ಪ್ರತಿಭಾನ್ವಿತ ನಿರ್ದೇಶಕ ರಾಜಮೌಳಿ ಹೇಳಿ ಕೊಂಡಿದ್ದಾರೆ.