Asianet Suvarna News Asianet Suvarna News

ಆಟೋ ಚಾಲಕಿಗೆ ದುಬಾರಿ ಕಾರು ಗಿಫ್ಟ್‌ ನೀಡಿದ ನಟಿ ಸಮಂತಾ ಅಕ್ಕಿನೇನಿ!

ತಮ್ಮದೇ ಸ್ವತಃ ಕ್ಯಾಬ್ ಬ್ಯುಸಿನೆಸ್‌ ಆರಂಭಿಸಲು ಆಟೋ ಚಾಲಕಿಗೆ ಸಹಾಯ ಮಾಡಿದ ನಟಿ ಸಮಂತಾ.

Kind hearted Samantha gifts expensive car to female auto driver vcs
Author
Bangalore, First Published Apr 20, 2021, 12:36 PM IST

ಟಾಲಿವುಡ್‌ ಬ್ಯೂಟಿ ಸಮಂತಾ ಸಿನಿಮಾದಿಂದ ಕೊಂಚ ದೂರ ಉಳಿದರೂ, ಸಮಾಜ ಸೇವೆಯಲ್ಲಿ ಮೊದಲಿರುತ್ತಾರೆ. ಅದರಲ್ಲೂ ತಮ್ಮದೇ ಎನ್‌ಜಿಓ Prathyushaದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 

ಸಮಂತಾ ಕಾರ್ಯಕ್ರಮ ನಡೆಸೋದಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?

ಇದೀಗ ಮಹಿಳಾ ಕವಿತಾ ಹಲವು ವರ್ಷಗಳಿಂದ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಆಟೋದಿಂದನೇ ಜೀವನ ನಡೆಸುವುದು ಕಷ್ಟ ಆಗಿರುವುದರಿಂದ ಸಮಂತಾ ಎನ್‌ಜಿಓ ಸಹಾಯ ಮಾಡಲು ಮುಂದಾಗಿದ್ದಾರೆ. 12.5 ಲಕ್ಷ ರೂ. ಬೆಲೆ ಬಾಳುವ ಕಾರು ನೀಡಿದ್ದಾರೆ. 

Kind hearted Samantha gifts expensive car to female auto driver vcs

ಕವಿತಾ ತಮ್ಮ ಏಳು ಸಹೋದರಿಯರು ಹಾಗೂ ಕುಟುಂಬವನ್ನು ನೋಡಿಕೊಳ್ಳಬೇಕಾಗಿದೆ.   ಮನೆಯಲ್ಲಿ ದಿನೇ ದಿನೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿರುವ ಕಾರಣ ರಾತ್ರಿ ಹಗಲೂ ಆಟೋ ಓಡಿಸುವುದು ಅನಿವಾರ್ಯವಾಗಿದೆ. ಸಮಂತಾ ಕಾರು ಗಿಫ್ಟ್ ಮಾಡಿರುವ ಕಾರಣ ಕ್ಯಾಬ್ ಸರ್ವಿಸ್‌ ನೀಡಿದರೆ ತಿಂಗಳು ತಿಂಗಳು ಇಂತಿಷ್ಟು ಎಂದು ಹಣ ಸಹಾಯವಾಗುತ್ತದೆ, ಎಂದು ಕವಿತಾ ಹೇಳಿದ್ದಾರೆ. 

ಸಮಂತಾಗೆ 15 ಮಿಲಿಯನ್ ಫಾಲೋವರ್ಸ್: ನಟಿ ಥ್ಯಾಂಕ್ಸ್ ಹೇಳಿದ್ದು ಹೀಗೆ 

ವಿಜಯ್ ಸೇತುಪತಿ ಹಾಗೂ ನಯನತಾರಾ ಜೊತೆ ಅಭಿನಯಿಸುತ್ತಿರುವ ಸಮಂತಾ 'ಶಕುಂತಲಾ' ಸಿನಿಮಾ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೊರೋನಾ ಸೊಂಕಿನಿಂದ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ನಿರ್ಧಾರ ಮಾಡಲಾಗದೆ ಚಿತ್ರರಂಗ ಕಂಗಾಲು ಆಗಿದೆ.

 

Follow Us:
Download App:
  • android
  • ios