Asianet Suvarna News Asianet Suvarna News

ನಿಪ್ಪಲ್ ಬ್ರಾ ಜಾಹೀರಾತು ಮೂಲಕ ಟೆಂಪರೇಚರ್ ಹೆಚ್ಚಿಸಿದ ಕಿಮ್ ಕರ್ದಾಶಿಯನ್!

ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಇದೀಗ ನಿಪ್ಪಲ್ ಬ್ರಾ ಜಾಹೀರಾತು ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ನೂತನ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.  
 

Kim Kardashian Nipple Bra advertisement viral on social media ckm
Author
First Published Oct 28, 2023, 8:16 PM IST

ಕ್ಯಾಲಿಫೋರ್ನಿಯಾ(ಅ.28) ಹಾಲಿವುಡ್ ಬೆಡಗಿ ಕಿಮ್ ಕರ್ದಾಶಿಯನ್ ಬೋಲ್ಡ್ ಅವತಾರಗಳ ಮೂಲಕ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಕಿಮ್ ಕರ್ದಾಶಿಯನ್ ಹೊಸ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.SKIMS ಬ್ರಾಂಡ್‌ನ ನಿಪ್ಪಲ್ ಬ್ರಾ ಜಾಹೀರಾತು ಇದಾಗಿದ್ದು, ಇಂಟರ್ನೆಟ್ ಟೆಂಪರೇಚರ್ ಹೆಚ್ಚಿಸಿದ್ದಾರೆ. ಇತ್ತೀಚಿನ ಪುಷ್ ಅಪ್ ಶೈಲಿ ಎಡಿಶನ್ ಜೊತೆಗೆ ಇದೀಗ ಫಾಕ್ಸ್ ನಿಪ್ಪಲ್ ಬ್ರಾ ವಿಡಿಯೋವನ್ನು ಕಿಮ್ ಕರ್ದಾಶಿಯನ್ ಹಂಚಿಕೊಂಡಿದ್ದಾರೆ.

ನಿಪ್ಪಲ್ ಬ್ರಾ ವಿಡಿಯೋ ಹಂಚಿಕೊಂಡ ಕಿಮ್ ಕರ್ದಾಶಿಯನ್, ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ. ಸಮುದ್ರದ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ಮುಂಜುಗಡ್ಡೆಗಳು ಕರಗುತ್ತಿದೆ. ನಾನು ವಿಜ್ಞಾನಿಯಂತೂ ಅಲ್ಲ. ಪ್ರತಿಯೊಬ್ಬರು ತಮ್ಮ ಕೌಶಲ್ಯವನ್ನು ಬಳಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಹೀಗಾಗಿಯೇ ಇೀಗ ನಿಪ್ಪಲ್ ಬ್ರಾ ಪರಿಚಯಿಸುತ್ತಿದ್ದೇವೆ.ಇದರಿಂದ ನೀವು ಎಷ್ಟೇ ಬ್ಯೂಸಿ ಇದ್ದರೂ ನೀವು ಯಾವಾಗಲೂ ಕೂಲ್ ಆಗಿರುತ್ತೀರಿ ಎಂದು ಕಿಮ್ ಕರ್ದಾಶಿಯನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 

Instagram ಖಾತೆಯ ಮೂಲಕ ಗರಿಷ್ಠ ಹಣ ಸಂಪಾದನೆ ಮಾಡುವ ಟಾಪ್‌-10 ಸೆಲೆಬ್ರಿಟಿಗಳಿವರು!

ಈ ನಿಪ್ಪಲ್ ಬ್ರಾಗೆ 62 ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 5,200 ರೂಪಾಯಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವರು ನಿಪ್ಪಲ್ ಬ್ರಾ ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಇದೇನಿದು ಎಂದು ಪ್ರಶ್ನಿಸಿದ್ದಾರೆ. ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮಹಿಳೆಯೊಬ್ಬರು ನೂತನ ನಿಪ್ಪಲ್ ಬ್ರಾ ಪರಿಚಯಿಸಿದ ಕಿಮ್ ಕರ್ದಾಶಿಯನ್‌ಗೆ ಧನ್ಯವಾದ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by SKIMS (@skims)

 

ನಿಪ್ಪಲ್ ಬ್ರಾದಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಮಾಹಿತಿ ನೋಡಿದಾಗ ಮೊದಲು ನಾನು ಅಂದುಕೊಂಡರೆ ಇದು ಎಪ್ರಿಲ್ ಫೂಲ್ ಎಂದು, ಆಮೇಲೆ ಗೊತ್ತಾಯಿತು ಇದು ಅಕ್ಟೋಬರ್ ಕೂಲ್. ಹವಾಮಾನ ವೈಪರಿತ್ಯವನ್ನು ಕಿಮ್ ಕರ್ದಾಶಿಯನ್ ಮಾರ್ಕೆಟಿಂಗ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಅಬ್ಬಾ..! ಬರೋಬ್ಬರಿ 3 ಕೋಟಿ ರೂಪಾಯಿ ಬ್ಯಾಗ್ ಹಿಡಿದು ಬಂದ ಖ್ಯಾತ ನಟಿ: ಏನಿದೆ ಅದರಲ್ಲಿ?

ಕಿಮ್ ಕರ್ದಾಶಿಯನ್ ನಿಪ್ಪಲ್ ಬ್ರಾ ವಿಡಿಯೋ ಇದೀಗ ಹೊಸ ಚರ್ಚೆಗೆ ಗ್ರಾಸವಾಗಿದೆ. ಹಲವರು ಇದನ್ನು ಇಷ್ಟಪಟ್ಟಿದ್ದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios