Instagram ಖಾತೆಯ ಮೂಲಕ ಗರಿಷ್ಠ ಹಣ ಸಂಪಾದನೆ ಮಾಡುವ ಟಾಪ್-10 ಸೆಲೆಬ್ರಿಟಿಗಳಿವರು!
ಇನ್ಸ್ಟಾಗ್ರಾಮ್ ಇಂದು ಕೇವಲ ಸೋಶಿಯಲ್ ಮೀಡಿಯಾ ಮಾತ್ರವೇ ಆಗಿ ಉಳಿದಿಲ್ಲ. ಆದಾಯದ ಮೂಲವೂ ಆಗಿದೆ. ಹೆಚ್ಚಿನ ಫಾಲೋವರ್ಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ಮೂಲಕವೇ ಇಂದು ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಅಗ್ರ 10 ಸೆಲೆಬ್ರಿಟಿಗಳ ವಿವರ ಇಲ್ಲಿದೆ.
10.ಕೆಂಡಾಲ್ ಜೆನ್ನರ್: ಅಮೆರಿಕದ ಮಾಡೆಲ್. 27 ವರ್ಷದ ಸುಂದರಿಗೆ ಇನ್ಸ್ಟಾಗ್ರಾಮ್ನಲ್ಲಿ 294 ಮಿಲಿಯನ್ ಫಾಲೋವರ್ಗಳಿದ್ದಾರೆ. ಒಂದು ಪ್ರಮೋಷಲ್ ಪೋಸ್ಟ್ಗಾಗಿ ಈಕೆ ಪಡೆಯುವ ಹಣ 10.75 ಕೋಟಿ ರೂಪಾಯಿ.
9. ಖ್ಲೋ ಕರ್ದಾಶಿಯಾನ್: ಅಮೆರಿಕದ ಕರ್ದಾಶಿಯಾನ್ ಸಹೋದರರಿಯಲ್ಲಿ ಪ್ರಮುಖರಾದವರು ಖ್ಲೋ. ಇನ್ಸ್ಟಾಗ್ರಾಮ್ನಲ್ಲಿ 311 ಮಿಲಿಯನ್ ಫಾಲೋವರ್ಗಳನ್ನು ಹೊಂದಿದ್ದು, 10.95 ಕೋಟಿ ರೂಪಾಯಿ ಹಣ ಸಂಪಾದನೆ ಮಾಡುತ್ತಾರೆ.
8. ಬೆಯಾನ್ಸ್ ನೋಲ್ಸ್-ಕಾರ್ಟರ್: ವಿಶ್ವದ ಅತ್ಯಂತ ಪ್ರಖ್ಯಾತ ಸಿಂಗರ್, ಕ್ವೀನ್ ಬೇ ಎಂದೇ ಖ್ಯಾತರಾಗಿರುವ ಬೆಯಾನ್ಸ್ ನೋಲ್ಸ್-ಕಾರ್ಟರ್ಗೆ ಇನ್ಸ್ಟಾಗ್ರಾಮ್ನಲ್ಲಿ 316 ಮಿಲಿಯನ್ ಫಾಲೋವರ್ಗಳಿದ್ದಾರೆ. ಒಂದು ಪೋಸ್ಟ್ಗಾಗಿ ಈಕೆ 11.55 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ.
7. ಅರಿಯಾನಾ ಗ್ರಾಂಡೆ: ಅಮೆರಿಕದ ಸಿಂಗರ್ ಸಾಂಗ್ ರೈಟರ್ ಹಾಗೂ ನಟಿ. 30 ವರ್ಷದ ವಯಸ್ಸಿನ ಈಕೆಗೆ ಇನ್ಸ್ಟಾಗ್ರಾಮ್ನಲ್ಲಿ 379 ಮಿಲಿಯನ್ ಫಾಲೋವರ್ಗಳಿದ್ದಾರೆ. ಒಂದು ಪ್ರಮೋಷಲ್ ಪೋಸ್ಟ್ನಿಂದ ಈಕೆ 13.99 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ.
6. ಕಿಮ್ ಕರ್ದಾಶಿಯಾನ್: ಅಮೆರಿಕದ ಮಾಡೆಲ್, ನಟಿ, ಮೀಡಿಯಾ ಪರ್ಸನಾಲಿಟಿ. 42 ವರ್ಷದ ಈಕೆ ವಿವಾದಗಳಿಂದಲೇ ಪ್ರಸಿದ್ಧ, 364 ಮಿಲಿಯನ್ ಫಾಲೋವರ್ ಹೊಂದಿರುವ ಈಕೆ, ಇನ್ಸ್ಟಾಗ್ರಾಮ್ನಿಂದ 14.01 ಕೋಟಿ ರೂಪಾಯಿ ಹಣ ಪಡೆಯುತ್ತಾರೆ.
5. ಡ್ವೈನ್ ಜಾನ್ಸನ್: ಮಾಜಿ ಡಬ್ಲ್ಯುಡಬ್ಲ್ಯುಇ ತಾರೆ ಹಾಗೂ ಪ್ರಖ್ಯಾತ ನಟ ದಿ ರಾಕ್ ಖ್ಯಾರಿಯ ಡ್ವೈನ್ ಜಾನ್ಸನ್ ಯಾರಿಗೆ ಗೊತ್ತಿಲ್ಲ. ಇನ್ಸ್ಟಾಗ್ರಾಮ್ನಲ್ಲಿ 389 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಇವರು ಪ್ರತಿ ಪೋಸ್ಟ್ಗಾಗಿ 14.21 ಕೋಟಿ ರೂಪಾಯಿ ಹಣ ಪಡೆಯುತ್ತಾರೆ.
4. ಸೆಲೆನಾ ಗೋಮಜ್: ಅಮೆರಿಕದ ಖ್ಯಾತ ಗಾಯಕಿ, ನಟಿ, ನಿರ್ಮಾಪಕಿ ಹಾಗೂ ಮಹಿಳಾ ಉದ್ಯಮಿ. ಬರೀ 31 ವರ್ಷದ ಈಕೆ ಇನ್ಸ್ಟಾಗ್ರಾಮ್ ಪೋಸ್ಟ್ಗಾಗಿ ಪಡೆಯುವ ಹಣ 14.39 ಕೋಟಿ ರೂಪಾಯಿ. ಈಕೆಗೆ ಇರುವ ಫಾಲೋವರ್ಗಳ ಸಂಖ್ಯೆ 428 ಮಿಲಿಯನ್.
3. ಲಿಯೋನೆಲ್ ಮೆಸ್ಸಿ: ವಿಶ್ವದ ಮತ್ತೊಬ್ಬ ಪ್ರಖ್ಯಾತ ಫುಟ್ಬಾಲ್ ತಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಒಂದು ಪೋಸ್ಟ್ಗಾಗಿ 14.74 ಕೋಟಿ ರೂಪಾಯಿ ಹಣ ಪಡೆಯುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ 484 ಮಿಲಿಯನ್ ಫಾಲೋವರ್ಗಳನ್ನು ಮೆಸ್ಸಿ ಹೊಂದಿದ್ದಾರೆ.
2. ಕೈಲ್ ಜೆನ್ನೆರ್: ಬರೀ 26 ವರ್ಷದ ಯುವತಿ. ಇಂದು ಟಿವಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅಮೆರಿಕದ ಸಮಾಜವಾದಿ, ಮಾಧ್ಯಮ ವ್ಯಕ್ತಿತ್ವ ಮತ್ತು ಯಶಸ್ವಿ ಉದ್ಯಮಿ. ಇನ್ಸ್ಟಾಗ್ರಾಮ್ನಲ್ಲಿ 398 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಈಕೆ, ಪ್ರಚಾರದ ಪೋಸ್ಟ್ಗಾಗಿ ಪಡೆಯಯುವ ಹಣ 15.22 ಕೋಟಿ ರೂಪಾಯಿ.
1. ಕ್ರಿಶ್ಚಿಯಾನೋ ರೊನಾಲ್ಡೋ: ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ತಾರೆ. ಇನ್ಸ್ಟಾಗ್ರಾಮ್ನಲ್ಲಿ ಇವರ ಫಾಲೋವರ್ಗಳ ಸಂಖ್ಯೆ 602 ಮಿಲಿಯನ್. ಇನ್ಸ್ಟಾಗ್ರಾಮ್ನಲ್ಲಿ ಪ್ರಚಾರದ ಪೋಸ್ಟ್ಗಾಗಿ ಇವರು ಪಡೆಯುವ ಮೊತ್ತ 19.88 ಕೋಟಿ ರೂಪಾಯಿ.