ತಾಯಿಯಿಂದ ಕಿಡ್ನಿ ದಾನ, ಬೇರೆಯವರಿಗೆ ಕೊಟ್ಟರು ದೃಷ್ಟಿದಾನ: ಇದು ರಾಣಾ ದುಗ್ಗುಬಾಟಿ ಸೀಕ್ರೇಟ್​!

ನಟ ರಾಣಾ ದುಗ್ಗುಬಾಟಿ ಅವರ ಆಸಕ್ತಿಕರ ಗುಟ್ಟೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದು ನಟನಿಗೆ ನೀಡಿರುವ ಕಿಡ್ನಿ ಮತ್ತು ನೇತ್ರದ ಕುರಿತು. ಏನದು?
 

Kidney and Eye donation for actor Rana Duggubati old video again viral in social media suc

ರಾಣಾ ದಗ್ಗುಬಾಟಿ ಎಂದಾಕ್ಷಣ ಕಣ್ಣ ಮುಂದೆ ಬರುವುದು ನಟನ ಅದ್ಭುತ ನಟನೆ. ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ಮೂಲಕ ಸಕತ್​ ಫೇಮಸ್​ ಆಗಿರೋ ನಟ ಇದಾಗಲೇ ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇವರ ಕುರಿತು ಇದೀಗ ಇಂಟರೆಸ್ಟಿಂಗ್​ ವಿಷಯಗಳು ಹೊರಬಂದಿವೆ. ಅದೇನೆಂದರೆ, ನಟನಿಗೆ ಹಿಂದೊಮ್ಮೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದರು ಎನ್ನುವ ವಿಷಯವಿದು. ಅಷ್ಟೇ ಅಲ್ಲದೇ, ನಟನಿಗೆ ಬಲಗಣ್ಣು ಕಾಣಿಸುವುದಿಲ್ಲ ಎನ್ನುವ ಶಾಕಿಂಗ್​ ಸತ್ಯ ಕೂಡ. 

ಹೌದು. ಕೆಲ ವರ್ಷಗಳ ಹಿಂದೆ  ರಾಣಾ ಅವರು ಕಿಡ್ನಿ ಖಾಯಿಲೆಗೆ  ಅಮೆರಿಕಕ್ಕೆ ತೆರಳಿದ್ದರು.  ಮೂಲಗಳ ಪ್ರಕಾರ ರಾಣಾ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು.  ಅವರು ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಸಫಲ ಆಗದ ಹಿನ್ನೆಲೆಯಲ್ಲಿ, ಅವರು ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿದ್ದರು. ಆ ಸಂದರ್ಭದಲ್ಲಿ,  ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ಕಿಡ್ನಿಯ ಅವಶ್ಯಕತೆ ಇತ್ತು. ಆಗ  ಮೂತ್ರಪಿಂಡಶಾಸ್ತ್ರಜ್ಞರು ಅವರಿಗೆ ಚಿಕಿತ್ಸೆ ಮಾಡಲು ಬಯಸಿದಾಗ,  ಮೂತ್ರಪಿಂಡ ಕಸಿ ಮಾಡಬೇಕು ಎಂದು ಯೋಚಿಸಿದಾಗ ತಾಯಿಯವರೇ  ಕಿಡ್ನಿ ದಾನ ಮಾಡಲು ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ.

ಕೊನೆಗೂ ಬಯಲಾಯ್ತು ಖರ್ಜೂರ ರಹಸ್ಯ! ಸತ್ಯ ಬಾಯ್ಬಿಟ್ಟ ಶಾರ್ವರಿ- ಮನೆಯಾಗತ್ತಾ ಸ್ಮಶಾನ?
 
ಅದೇ ಇನ್ನೊಂದೆಡೆ, ರಾಣಾ ದಗ್ಗು ಬಾಟಿ ಅವರಿಗೆ ಸಂಬಂಧ ಪಟ್ಟ ಆಸಕ್ತಿ ದಾಯಕ ವಿಷಯವೊಂದು ತಿಳಿದುಬಂದಿದೆ. ಅದೇನೆಂದರೆ ಅವರಿಗೆ ಬಲಗಣ್ಣು ಸರಿಯಾಗಿ ಕಾಣಿಸುವುದಿಲ್ಲ ಎನ್ನುವುದು.  ‘ಬಾಹುಬಲಿ 2’ ಚಿತ್ರದ ಸಮಯದಲ್ಲಿಯೇ ಈ ವಿಷಯ ಸಾಕಷ್ಟು ಓಡಾಡುತ್ತಿದ್ದರೂ ಇದೀಗ ಮತ್ತೆ ಇದು ಮುನ್ನೆಲೆಗೆ ಬಂದಿದೆ.  ಸಂದರ್ಶನವೊಂದರಲ್ಲಿ ರಾಣಾ ಹೇಳಿದ್ದ ಈ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿ ಇದೆ. ಬಾಲ್ಯದಿಂದಲೇ ನನ್ನ ಬಲಗಣ್ಣಿಗೆ ದೃಷ್ಟಿಯಿಲ್ಲ. ಯಾರೋ ಒಬ್ಬರು ಅವರ ಮರಣಾನಂತರ ನನಗೆ ನೇತ್ರದಾನ ಮಾಡಿದ್ದರು. ನಾನು ಚಿಕ್ಕವನಿದ್ದಾಗ ಶಸ್ತ್ರ ಚಿಕಿತ್ಸೆ ನೆರವೇರಿಸಿದರು, ಆದರೂ ಎರಡು ಕಣ್ಣಿನ ದೃಷ್ಟಿ ಸಿಗಲಿಲ್ಲ, ನನ್ನ ಎಡಗಣ್ಣು ಮುಚ್ಚಿದರೆ ನನಗೇನು ಕಾಣಿಸುವುದಿಲ್ಲ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವಿಡಿಯೋದಲ್ಲಿ ನಟ, ''ನಮ್ಮಲ್ಲಿ ಹಲವರಿಗೆ ಅಂಗವೈಕಲ್ಯ ಇರುತ್ತದೆ. ಆದರೆ ಆ ಸಮಸ್ಯೆಯಿಂದ ಕುಗ್ಗಿ ಹೋಗಬಾರದು. ಅದನ್ನು ಮೀರಿ ಬೆಳೆಯಬೇಕು. ಆತ್ಮವಿಶ್ವಾಸವೊಂದಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಹುದು. ಅಂಧರಾದ ಮಕ್ಕಳಿಗೆ ಅವರ ಹೆತ್ತವರು ಪ್ರೇರಣೆಯಾಗಬೇಕು. ನನ್ನ ಒಂದು ಕಣ್ಣಿಗೆ ದೃಷ್ಟಿ ಇಲ್ಲದೇ ಇರುವುದು ನನ್ನನ್ನು ತುಂಬಾ ಕಾಡಿತ್ತು. ಆದರೆ ನನ್ನ ತಂದೆ-ತಾಯಿ ನನ್ನ ಗೆಲುವಿಗೆ ಸ್ಫೂರ್ತಿ ತುಂಬಿದರು ಎಂದು ಹೇಳಿದ್ದಾರೆ. ಅಂಗವೈಕಲ್ಯಕ್ಕೆ ಕುಗ್ಗಬಾರದು, ಅದನ್ನು ಮೀರಿ ಬೆಳೆಯಬೇಕು, ಇದಕ್ಕೆ ಅವರ ತಂದೆ ತಾಯಿಗಳು ಪ್ರೇರಣೆಯಾಗಬೇಕು ಎಂದಿದ್ದಾರೆ. 

ಕೆಲ್ಸ ಕೇಳ್ಕೊಂಡು ಹೋದ ಭಾಗ್ಯಂಗೆ ನಿರಾಸೆ: ಡೈರೆಕ್ಟರ್​ಗೂ ಮೊದಲೇ ನೆಟ್ಟಿಗರೇ ನೀಡ್ತಿದ್ದಾರೆ​ ಭರ್ಜರಿ ಸಲಹೆ!
 

Latest Videos
Follow Us:
Download App:
  • android
  • ios