ಕೊನೆಗೂ ಬಯಲಾಯ್ತು ಖರ್ಜೂರ ರಹಸ್ಯ! ಸತ್ಯ ಬಾಯ್ಬಿಟ್ಟ ಶಾರ್ವರಿ- ಮನೆಯಾಗತ್ತಾ ಸ್ಮಶಾನ?
ಕೊನೆಗೂ ಬಯಲಾಗಿದೆ ಖರ್ಜೂರ ರಹಸ್ಯ. ಆ್ಯಕ್ಸಿಡೆಂಟ್ ನಾನೇ ಮಾಡಿಸಿದ್ದು ಎಂದು ಶಾರ್ವರಿ ಒಪ್ಪಿಕೊಂಡಿದ್ದಾಳೆ. ಮುಂದೆ?
ಕೊನೆಗೂ ಶಾರ್ವರಿ ಅಪಘಾತ ಮಾಡಿಸಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ. ಇಲ್ಲಿಯವರೆಗೆ ಮಹೇಶ್ಗೆ ಇದ್ದ ಸಂದೇಹ ನಿಜವಾಗಿದೆ. ಇಡೀ ಮನೆ ಸ್ಮಶಾನ ಮಾಡುವುದೇ ನನ್ನ ಗುರಿ ಎಂದಿದ್ದಾಳೆ ಶಾರ್ವರಿ. ಇಷ್ಟು ದಿನಗಳಿಂದ ಮಹೇಶ್ಗೆ ಕಾಡುತ್ತಿದ್ದ ಖರ್ಜೂರ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಅಪಘಾತಕ್ಕೂ, ಮಹೇಶ್ ಹಾಸಿಗೆ ಮೇಲಿದ್ದಾಗ ಖರ್ಜೂರ ಖರ್ಜೂರ ಎಂದು ಕನವರಿಸುತ್ತಿದ್ದುದಕ್ಕೂ ಸಂಬಂಧ ಏನು ಎಂದು ತಿಳಿದಿದೆ. ಅಷ್ಟಕ್ಕೂ ಈಗ ತುಳಸಿ, ಪೂರ್ಣಿ ಮತ್ತು ಮಾಧವ್ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್ನಿಂದಲೇ. ಮಹೇಶ್ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಮಾಧವ್ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು.
ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್.
ಕಾಂಗ್ರೆಸ್ನಿಂದ ಹೆಸರು ದುರುಪಯೋಗ: ಆಮೀರ್, ರಣವೀರ್ ಬಳಿಕ ಅಲ್ಲು ಅರ್ಜುನ್ ಗರಂ-ತಪ್ಪಿತಸ್ಥರಿಗೆ ಶಿಕ್ಷೆ ಏನು?
ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದಾನೆ. ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದಾನೆ ಮಹೇಶ್. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಾಳೆ. ಆದರೆ ಈಗ ಖರ್ಜೂರ ರಹಸ್ಯ ಬಯಲಾಗಿದೆ. ಅದೇನೆಂದರೆ, ಒಂದೊಂದೇ ಖರ್ಜೂರ ಬಾಯಿಗೆ ಹಾಕಿಕೊಳ್ಳುತ್ತಲೇ ಶಾರ್ವರಿ, ಇದು ಮಾಧವ, ಇನ್ನೊಂದು ಮಾಧವನ ಪತ್ನಿ ಸುಮತಿ... ಎಂದಿದ್ದಾಳೆ. ಸಂಪೂರ್ಣ ಕುಟುಂಬ ನಾಶ ಮಾಡುತ್ತೇನೆ ಎಂದಿದ್ದನ್ನು ಮಹೇಶ್ ಕೇಳಿಸಿಕೊಂಡಿದ್ದ. ಅದನ್ನೀಗ ಪತ್ನಿಗೆ ಹೇಳಿದಾಗ, ಈಗ ಶಾರ್ವರಿ ತಾನೇ ಮಾಡಿಸಿದ್ದು ಆ್ಯಕ್ಸಿಡೆಂಟ್ ಎಂದು ಒಪ್ಪಿಕೊಂಡಿದ್ದಾಳೆ.
ನಿಜ ಜೀವನದ ಪ್ರತಿಬಿಂಬವಾಗ್ತಿವೆ ಧಾರಾವಾಹಿಗಳು: ಸೀರಿಯಲ್ಗಳಲ್ಲೂ ಕೆಲಸ ಕಳೆದುಕೊಳ್ತಿರೋ ಪಾತ್ರಧಾರಿಗಳು!