ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2023ರ ಫೆಬ್ರವರಿಯಲ್ಲಿ ವಿವಾಹವಾದ ಈ ಜೋಡಿ, ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೊಳ್ಳದಿದ್ದರೂ, ಮಗುವಿನ ಆಗಮನದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಈ ಹಿಂದೆ, ಗರ್ಭಿಣಿಯಾದಾಗ ಇಷ್ಟವಾದ್ದನ್ನು ತಿನ್ನಬಹುದೆಂದು ಕಿಯಾರಾ ಹೇಳಿದ್ದರು. ಇತ್ತೀಚೆಗೆ ಕಿಯಾರಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿತ್ತು.

ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈಚೆಗಷ್ಟೇ ಕಿಯಾರಾ ತಾವು ಗರ್ಭಿಣಿ ಎನ್ನುವುದಾಗಿ ಹೇಳಿಕೊಂಡಿದ್ದಾರೆ. 2023ರ ಫೆಬ್ರವರಿ 7ರಂದು ಈ ಜೋಡಿ ಹಸೆಮಣೆ ಏರಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸಿದರೂ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಮಗುವನ್ನು ಎದುರು ನೋಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. 

ಇದೇ ಸಂದರ್ಭದಲ್ಲಿ ನಟಿ ತಾವು ಬೇರೆಯದ್ದೇ ಕಾರಣಕ್ಕೆ ಗರ್ಭಿಣಿಯಾಗಲು ಇಚ್ಛಿಸುವುದಾಗಿ ಈ ಹಿಂದೆ ಹೇಳಿದ್ದರು. ಅದರ ವಿಡಿಯೋ ಈಗ ಪುನಃ ವೈರಲ್​ ಆಗುತ್ತಿದೆ. ಈ ವಿಡಿಯೊದಲ್ಲಿ ನಟಿ, ಕೆಲ ವರ್ಷಗಳಿಂದಲೂ ಗರ್ಭಧಾರಣೆಯ ಬಗ್ಗೆ ಯೋಚಿಸುತ್ತಿದ್ದೆ. ಗರ್ಭಿಣಿಯಾಗಲು (Pregnant) ಬಹಳ ದಿನಗಳಿಂದ ಬಯಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಕೊಟ್ಟಿರೋ ಕಾರಣ ಮಾತ್ರ ಸಕತ್​ ಫನ್ನಿಯಾಗಿದೆ. ನನಗೆ ಗರ್ಭಿಣಿಯಾಗಲು ಇಷ್ಟ ಏಕೆಂದರೆ... ಆ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು, ಅದೂ ತಿನ್ನಬೇಡ, ಇದು ತಿನ್ನಬೇಡ ಎಂದು ತಡೆಯುವವರು ಯಾರೂ ಇರುವುದಿಲ್ಲ. ಏಕೆಂದರೆ ಗರ್ಭಿಣಿಗೆ ಬಯಕೆ ಇರುತ್ತದೆ ಎಂದು ಸುಮ್ಮನಾಗ್ತಾರೆ. ಅದಕ್ಕೇ ನನಗೆ ಗರ್ಭ ಧರಿಸಲು ಇಷ್ಟವಿದೆ ಎಂದು ನಕ್ಕಿರುವ ನಟಿ, ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಯಾವುದು ಆದರೂ ಪರವಾಗಿಲ್ಲ. ಆರೋಗ್ಯವಾಗಿದ್ರೆ ಸಾಕು ಎಂದಿದ್ದರು.

ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್​ ಮಾಡಿದ ಆಲಿಯಾ ಭಟ್​! ಆ ಪುಸ್ತಕದಲ್ಲಿ ಇದ್ದದ್ದೇನು?


ಕೆಲ ತಿಂಗಳ ಹಿಂದಷ್ಟೇ, ಕಿಯಾರಾ ಅವರ ಒಂದು ಫೋಟೋ ಸಕತ್​ ವೈರಲ್​ ಆಗಿತ್ತು. ವೈರಲ್​ ಮಾತ್ರವಲ್ಲದೇ ಸುದ್ದಿಯನ್ನೂ ಮಾಡಿತ್ತು. ಸತ್ಯಪ್ರೇಮ್ ಕಿ ಕಥಾ ಸಿನಿಮಾ ಪ್ರಚಾರಕ್ಕಾಗಿ ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಇದು. ಅರಮನೆ ನಗರಿಗೆ ಬಂದ ಕಿಯಾರಾ ಅಡ್ವಾಣಿ ಜೈಪುರದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದವರು ಕಿಯಾರಾ ಗರ್ಭಿಣಿ ಎಂದು ಹೇಳಲು ಶುರು ಮಾಡಿದ್ದರು. ಬೇಬಿ ಬಂಪ್‌ ಕಾಣಿಸುತ್ತಿದೆ ಎಂದು ಕಮೆಂಟ್​ ಹಾಕಿದ್ದರು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು, ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಕಿಯಾರಾ ಅಡ್ವಾಣಿ ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು. ಆಗ ನೆಟ್ಟಿಗರು ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದರು. ಈಗ ಪತ್ನಿ ಗರ್ಭಿಣಿ ಎನ್ನುವ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು.

 ಮದುವೆಯ ನಂತರ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರವೂ ಸಿನಿಮಾ ಮಾಡುವುದರಲ್ಲಿ ಸಕ್ರಿಯರಾಗಿರುವ ಈ ಜೋಡಿಗೆ ಮಗು ಯಾವಾಗ ಆಗುತ್ತದೆ ಎಂದು ಅಭಿಮಾನಿಗಳಿಗೆ ಚಿಂತೆ ಶುರುವಾಗಿತ್ತು. ಇದೀಗ ಕೊನೆಗೂ ಕಿಯಾರಾ ಗುಡ್​ನ್ಯೂಸ್​ ಕೊಟ್ಟಿದ್ದಾರೆ. 

ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್‌ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್‌ ಶಾಕ್‌