Asianet Suvarna News Asianet Suvarna News

ಭಾರತ್ ಜೋಡೋ ಯಾತ್ರೆಗೆ KGF ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ದ ನ್ಯಾಯಾಂಗ ನಿಂದನೆ‌ ಅರ್ಜಿ

ಭಾರತೀಯ ರಾಷ್ಟ್ರೀಯ ಕಾಂಗ್ರಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಸಿನಿಮಾದ ಹಾಡು ಬಳಸಿಕೊಂಡ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ದ ನ್ಯಾಯಾಂಗ ನಿಂದನೆ‌ ಅರ್ಜಿ ಸಲ್ಲಿಸಲಾಗಿದೆ. 

KGF music for bharat jodo yatra; Contempt of court petition against Rahul Gandhi sgk
Author
First Published Dec 2, 2022, 3:09 PM IST

ಭಾರತೀಯ ರಾಷ್ಟ್ರೀಯ ಕಾಂಗ್ರಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಸಿನಿಮಾದ ಹಾಡು ಬಳಸಿಕೊಂಡ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ದ ನ್ಯಾಯಾಂಗ ನಿಂದನೆ‌ ಅರ್ಜಿ ಸಲ್ಲಿಸಲಾಗಿದೆ. MRT ಮ್ಯೂಸಿಕ್ ಸಂಸ್ಥೆಯಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.  ರಾಹುಲ್ ಗಾಂಧಿ, ಜಯರಾಂ ರಮೇಶ್, ಸುಪ್ರೀಯಾ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.  ಸಿಜೆ ಪಿ.ಬಿ.ವರಾಲೆ ನೇತೃತ್ವದ ವಿಭಾಗೀಯ ‌ಪೀಠದಲ್ಲಿ ವಿಚಾರಣೆ ನೆಸಲಾಗಿದ್ದು ರಾಹುಲ್ ಗಾಂಧಿ ಸೇರಿದಂತೆ ಮೂವರು ಪ್ರತಿವಾದಿಗೆ ಹೈಕೋರ್ಟ್ ನೋಟಿಸ್ ನೀಡಿದೆ. 

ಕಾಂಗ್ರೆಸ್‌ಗೆ ಕೆಜಿಎಫ್ ಹಾಡು ಬಳಕೆ ಮಾಡಿದ‌ ವಿಡಿಯೋ ಡಿಲೀಟ್ ಮಾಡಲು ಹೈಕೋರ್ಟ್ ಆದೇಶಿಸಿತ್ತು.  ನವೆಂಬರ್ 8 ರಂದು ಹೈಕೋರ್ಟ್ ಆದೇಶ ನೀಡಿತ್ತು. ಕೆಜಿಎಫ್ ಹಾಡಿನ ಎಲ್ಲಾ ವಿಡಿಯೋ ಡಿಲೀಟ್ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಕಾಂಗ್ರೆಸ್ ಪಕ್ಷದವರು ವಿಡಿಯೋ ಡಿಲೀಟ್ ಮಾಡದೇ ಇನ್ನೂ ಹೆಚ್ಚಿನ ವಿಡಿಯೋ ಅಪ್ ಲೋಡ್ ಮಾಡಿದ್ದರು. ಹೈಕೋರ್ಟ್ ಆದೇಶ ಪಾಲನೆ ಮಾಡದ‌ ಹಿನ್ನಲೆ ನ್ಯಾಯಾಂಗ ‌ನಿಂದನೆ‌ ಅರ್ಜಿ ಸಲ್ಲಿಸಲಾಗಿದೆ. 

Threat Letter to Rahul Gandhi: ಬಾಂಬ್‌ ಸ್ಪೋಟಿಸಿ ಹತ್ಯೆ, ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ!

MRT ಸಂಸ್ಥೆಗೆ ಸೇರಿದ KGF ಹಾಡುಗಳನ್ನು ಅನುಮತಿ ಇಲ್ಲದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ ಆರೋಪ ಎದುರಿಸುತ್ತಿದೆ. ಕೆಜಿಎಫ್ ಸಿನಿಮಾದ ಸುಲ್ತಾನಾ.. ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ  ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವರ MRT ಸಂಸ್ಥೆಯು ರಾಹುಲ್ ಗಾಂಧಿ , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿತ್ತು. 

ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ರಾಹುಲ್ ಗಾಂಧಿ ಭಾಷಣ ಅನುವಾದಕ ಎಸ್ಕೇಪ್!

ದೇಶಾದ್ಯಂತ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಮತ್ತು ಆಯಾ ರಾಜ್ಯಗಳ ಮುಖಂಡರು ಭಾಗಿಯಾಗಿದ್ದು ಹಿಂದಿಯಲ್ಲಿ ತಯಾರಾದ ವಿಡಿಯೋಗಳಿಗೆ ಕೆಜಿಎಫ್ ಮ್ಯೂಸಿಕ್ ಬಳಸಿಕೊಂಡಿದ್ದರು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಅಕೌಂಟ್, ಯ್ಯೂಟ್ಯಬ್  ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು. ಸಂಸ್ಥೆಯ ಅನುಮತಿ ಪಡೆಯದೇ ಇರುವ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ಮುಂದಾಗಿತ್ತು MRT ಸಂಸ್ಥೆ. ಹಾಡುಗಳನ್ನು ತೆಗೆಯುವಂತೆ ಕೋರ್ಟ್ ಆದೇಶಿಸಿದ್ದರೂ ಡಿಲೀಟ್ ಮಾಡದೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಮತ್ತೆ ರಾಹುಲ್ ಗಾಂಧಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. 

Follow Us:
Download App:
  • android
  • ios