Asianet Suvarna News Asianet Suvarna News

ನನ್ನ ಹೊಸ ಹೆಜ್ಜೆಗೆ ನಿಮ್ಮೆಲ್ಲರ ಆಶೀರ್ವಾದ ಬೇಕು: ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ

ಕಿಚ್ಚ ಸುದೀಪ್ 47 ಚಿತ್ರದ ಘೋಷಣೆ ಆಗುತ್ತಿದ್ದಂತೆ ಈ ಚಿತ್ರದ ನಾಯಕಿ ಯಾರಾಗಬಹುದು ಎಂದು ಕುತೂಹಲ ಎಲ್ಲರನ್ನೂ ಕಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಕೆಜಿಎಫ್ 2 ಬಳಿಕ ಖಾಲಿಯೇ ಇದ್ದ ನಟಿ ಶ್ರೀನಿಧಿ ಈಗ ಸ್ಟಾರ್ ನಟ ಸುದೀಪ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

KGF Actress Srinidhi Shetty selected for Kichcha Sudeep 47th Cheran film srb
Author
First Published Oct 22, 2023, 8:00 PM IST

ರಾಕಿಂಗ್ ಸ್ಟಾರ್ ಅಭಿನಯದ, ಜಗತ್ತಿನ ತುಂಬಾ ಖ್ಯಾತಿ ಪಡೆದಿರುವ 'ಕೆಜಿಎಫ್ ' ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಇದೀಗ ಕನ್ನಡದ ಇನ್ನೊಬ್ಬರು ಸ್ಟಾರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ಕಿಚ್ಚ ಸುದೀಪ್ ಅಭಿನಯದ 47ನೇ ಚಿತ್ರಕ್ಕೆ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಕಿಚ್ಚ ಸುದೀಪ್ ಮುಂಬರುವ ಈ ಚಿತ್ರವನ್ನು ಚೇರನ್ ನಿರ್ದೇಶಿಸಲಿದ್ದಾರೆ. 

ಕಿಚ್ಚ ಸುದೀಪ್ 47 ಚಿತ್ರದ ಘೋಷಣೆ ಆಗುತ್ತಿದ್ದಂತೆ ಈ ಚಿತ್ರದ ನಾಯಕಿ ಯಾರಾಗಬಹುದು ಎಂದು ಕುತೂಹಲ ಎಲ್ಲರನ್ನೂ ಕಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಕೆಜಿಎಫ್ 2 ಬಳಿಕ ಖಾಲಿಯೇ ಇದ್ದ ನಟಿ ಶ್ರೀನಿಧಿ ಈಗ ಸ್ಟಾರ್ ನಟ ಸುದೀಪ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ತಾನು ತುಂಬಾ ಚೂಸಿ ಎಂದು ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾರೆ ಎನ್ನಬಹುದು. 

ಸುದೀಪ್ ನಾಯಕತ್ವದ 47ನೇ ಚಿತ್ರವನ್ನು ತಮಿಳು ನಿರ್ದೇಶಕ ಚೇರನ್ ನಿರ್ದೇಶನ ಮಾಡುತ್ತಿದ್ದರೂ ಇದು ತಮಿಳು ಭಾಷೆಯಲ್ಲಿ ಮಾತ್ರ ಬರುವ ಚಿತ್ರವಲ್ಲ, ಬದಲಿಗೆ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರ ಎನ್ನಲಾಗಿದೆ. ಈ ಬಗ್ಗೆ ನಟಿ ಶ್ರೀನಿಧಿ ಶೆಟ್ಟಿ "ನನ್ನ ಹೊಸ ಹೆಜ್ಜೆಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನಾನು ಕಿಚ್ಚ ಸುದೀಪ್ ಅವರ ಜತೆ ಸ್ಕ್ರೀನ್ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇಂತಹ ಅದ್ಭುತ ಅವಕಾಶ ನೀಡಿದ ಸತ್ಯ ಜ್ಯೋತಿ ಪಿಕ್ಚರ್ಸ್ ಹಾಗೂ ಚೇರನ್ ಅವರಿಗೆ ಧನ್ಯವಾದಗಳು" ಎಂದಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ. 

Bigg Boss Kannada ಹೆಸರಲ್ಲೇ ಧನ ಇಟ್ಕೊಂಡಿದೀರಾ, ವಾಟ್ ಅಬೌಟ್ ಧನಲಕ್ಷ್ಮೀ ಸರ್: ಧನಂಜಯ್ ಕಾಲೆಳೆದ ಸುದೀಪ್

ನಿನ್ನೆ (21 ಅಕ್ಟೋಬರ್ 2023) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ, ಇಂತಹ ಅಪೂರ್ವ ಸಮಯದಲ್ಲಿ ತಮ್ಮ ಟ್ವಿಟರ್ (X) ಮೂಲಕ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸತ್ಯ ಜ್ಯೋತಿ ಪಿಕ್ಚರ್ಸ್‌ ಸಂಸ್ಥೆ ಕೂಡ ತಮ್ಮ ಕಿಚ್ಚ ಸುದೀಪ್ 47ನೇ ಚಿತ್ರಕ್ಕೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅವರನ್ನು ನಮ್ಮ ತಂಡಕ್ಕೆ ಸ್ವಾಗತಿಸುತ್ತಿದ್ದೇವೆ' ಎಂದು ಅಧಿಕೃತ ಘೋಷಣೆ ಮಾಡಿದೆ. ಒಟ್ಟಿನಲ್ಲಿ, ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಕಾಯುತ್ತಿದ್ದ ಶ್ರೀನಿಧಿಗೂ, ಅವರ ಅಭಿಮಾನಿಗಳಿಗೂ ಶ್ರೀನಿಧಿಯ ಜನ್ಮದಿನದಂದು ಸಂತೋಷದ ಸಮಾಚಾರ ಸಿಕ್ಕಿದೆ. ಲೆಟ್‌ ದೆಮ್‌ ಟು ಎಂಜಾಯ್..!

 

 

Follow Us:
Download App:
  • android
  • ios