Asianet Suvarna News Asianet Suvarna News

IPL 2022: RCB ಪಂದ್ಯ ವೀಕ್ಷಿಸಿದ KGF 2 ಅಧೀರ ಮತ್ತು ರಮಿಕಾ ಸೇನ್; ಫೋಟೋ ವೈರಲ್

ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2(KGF2) ಸಿನಿಮಾ ಐಪಿಎಲ್(IPL) ಅಂಗಳದಲ್ಲೂ ಹವಾ ಎಬ್ಬಿಸಿದೆ. ಆರ್ ಸಿ ಬಿ(RCB) ಬೆಂಬಲಕ್ಕೆ ನಿಂತಿರುವ ಕೆಜಿಎಫ್-2 ಟೀಂ ಏಪ್ರಿಲ್ 19ರಂದು ನಡೆದ ಲಕ್ನೋ ವಿರುದ್ಧ ಪಂದ್ಯ ವೀಕ್ಷಿಸಿ ಸಂಭ್ರಮಿಸಿದೆ. 

KGF 2 stars Sanjay Dutt and Raveena Tandon to support Royal Challengers Bangalore
Author
Bengaluru, First Published Apr 20, 2022, 10:55 AM IST

ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2(KGF2) ಸಿನಿಮಾ ಐಪಿಎಲ್(IPL) ಅಂಗಳದಲ್ಲೂ ಹವಾ ಎಬ್ಬಿಸಿದೆ. ಆರ್ ಸಿ ಬಿ(RCB) ಬೆಂಬಲಕ್ಕೆ ನಿಂತಿರುವ ಕೆಜಿಎಫ್-2 ಟೀಂ ಏಪ್ರಿಲ್ 19ರಂದು ನಡೆದ ಲಕ್ನೋ ವಿರುದ್ಧ ಪಂದ್ಯ ವೀಕ್ಷಿಸಿ ಸಂಭ್ರಮಿಸಿದೆ. ಆರ್ ಸಿ ಬಿ ಮತ್ತು ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ರೋಚಕ ಪಂದ್ಯ ವೀಕ್ಷಿಸಲು ಕೆಜಿಎಪ್ ಅಧೀರ ಸಂಜಯ್ ಮತ್ತು ರಮಿಕಾ ಸೇನ್ ರವೀನಾ ಟಂಡನ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಸಿನಿಮಾ ಗೆದ್ದ ಖುಷಿಯಲ್ಲಿರುವ ಇವರು ಆರ್ ಸಿ ಬಿ ಬೆಂಬಲಕ್ಕೆ ನಿಂತಿದ್ದಾರೆ. ಆರ್ ಸಿ ಬ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಸಂಜಯ್ ದತ್ ಮತ್ತು ರವೀನಾ ಡಂಟನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ದಾಖಲೆ ಬರೆದಿರುವ ಈ ಸಿನಿಮಾ ಏಪ್ರಿಲ್ 14 ರಂದು ಅದ್ದೂರಿಯಾಗಿ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿರುವ ಕೆಜಿಎಫ್-2 ಚಿತ್ರಕ್ಕೆ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿಗಷ್ಟೆ ಆರ್ ಸಿ ಬಿ ತಂಡ ಕೆಜಿಫ್-2 ಸಿನಿಮಾವನ್ನು ವೀಕ್ಷಿಸಿ ಸಂಭ್ರಮಿಸಿದ್ದರು. ನಾಯಕ ಫಾಫ್ ಡುಪ್ಲೆಸಿಸ್, ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್ ಸೇರಿದಂತೆ ಇಡೀ ಆರ್ ಸಿ ಬಿ ತಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಂತಸ ಪಟ್ಟಿದ್ದರು. ಇದೀಗ ಆರ್ ಸಿ ಬಿ ತಂಡಕ್ಕೆ ಸಪೋರ್ಟ್ ಮಾಡಲು ಕೆಜಿಎಫ್-2 ತಂಡ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿತ್ತು.

ಕ್ಯಾನ್ಸರ್ ಎಂದು ಗೊತ್ತಾದ ಬಳಿಕ 2-3 ಗಂಟೆ ಅತ್ತಿದ್ದ KGF 2 ಅಧೀರ; ಭಾವುಕ ಕ್ಷಣ ಬಿಚ್ಚಿಟ್ಟ ದತ್

ಅಂದಹಾಗೆ ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಆರ್ ಸಿ ಬಿ ಜೊತೆ ಕೈಜೋಡಿಸಿದ್ದು ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಒಟ್ಟಿಗೆ ಸೇರಿ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಗೆ ಮುಂದಾಗಿತ್ತು. ಕೆಜಿಎಫ್-2 ಟ್ರೈಲರ್ ನಲ್ಲಿ ಆರ್ ಸಿ ಬಿ ಆಟಗಾರನ್ನು ಸೇರಿಸಿ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಟ್ರೈಲರ್ ನಲ್ಲಿ ಕೆಜಿಎಫ್2 ಪಾತ್ರಕ್ಕೆ ಆರ್ ಸಿ ಬಿ ಆಟಗಾರರನ್ನು ಹೋಲಿಸಲಾಗಿತ್ತು. ಈ ಪ್ರೋಮೋಗೆ ಮನರಂಜನೆಯ ಹೊಸ ಯುಗಕ್ಕೆ ನಾಂದಿ ಹಾಡೋಣ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿತ್ತು. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್ ಸಿ ಬಿ ಒಪ್ಪಂದ ಪ್ರಕಾರ ಆರ್ ಸಿ ಬಿ ತಂಡ ಕೆಜಿಎಫ್-2 ವೀಕ್ಷಿಸಿದ್ದರು. ಇದೀಗ ಕೆಜಿಎಫ್-2 ಪಂದ್ಯ ವೀಕ್ಷಿಸಿ ಆರ್ ಸಿ ಬಿ ಸಪೋರ್ಟ್ ಮಾಡುತ್ತಿದ್ದಾರೆ.

ಅಂದಹಾಗೆ ಬಾಲಿವುಡ್ ಸ್ಟಾರ್ ಮುನ್ನಾಭಾಯ್ ಸಂಜಯ್ ದತ್ ಮತ್ತು ರವೀನಾ ಟಂಡನ್ ಜೊತೆ ಕೆಜಿಎಫ್-2 ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಸಹ ಆರ್ ಸಿ ಬಿ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ವೀಕ್ಷಣೆಯ ಸಂಭ್ರಮದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

KGF 2 ಸಂಜಯ್ ದತ್ ವೃತ್ತಿ ಜೀವನದ ವಿಶೇಷ ಸಿನಿಮಾ; ಮಾನ್ಯತಾ ದತ್

ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಭರ್ಜರಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸಿನಿಮಾ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್. ಬಾಲಿವುಡ್ ನಲ್ಲೂ ರಾಕಿ ಭಾಯ್ ಅಬ್ಬರಿಸುತ್ತಿದ್ದು ಕನ್ನಡ ಸಿನಿಮಾ ಆರ್ಭಟಕ್ಕೆ ಹಿಂದಿ ಮಂದಿ ಮಂಕಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಉತ್ತಮ ಕಮಾಯಿ ಮಾಡುತ್ತಿರುವ ರೀತಿಗೆ ಬೆಚ್ಚಿಬಿದ್ದಿದ್ದಾರೆ. ಯಾವ ರೀತಿಯ ಸಿನಿಮಾಗಳನ್ನು ನೀಡಬೇಕೆಂದು ತಲೆಕೆಡಿಸಿಕೊಂಡಿದ್ದಾರೆ. ಕೆಜಿಎಫ್ ತಂಡ ಭರ್ಜರಿ ಸಕ್ಸಸ್ ಎಂಜಾಯ್ ಮಾಡುತ್ತಿದೆ.

 

Follow Us:
Download App:
  • android
  • ios