KGF2 Tickets Soldout: ಕರ್ನಾಟಕದಲ್ಲಿ ಏಪ್ರಿಲ್ 10ರಿಂದ ಕೆಜಿಎಫ್-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಶೋಗಳ ಸೋಲ್ಡ್ ಔಟ್ ಆಗಿವೆ. ಬೆಳಗ್ಗೆ 3ಗಂಟೆಯಿಂದನೇ ಶೋ ಪ್ರಾರಂಭವಾಗುತ್ತಿದೆ.

KGF 2 ಎಂಟ್ರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲಾ ಕಡೆ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ (Advance Ticket Booking Open). ಮೊದಲು ವಿದೇಶದಲ್ಲಿ ಮತ್ತು ಉತ್ತರ ಭಾರತ, ತಮಿಳುನಾಡು ಸೇರಿದಂತೆ ಕೆಲವು ಭಾಗಗಳಲ್ಲಿ ಮಾತ್ರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಾರಂಭ ಮಾಡಲಾಗಿತ್ತು. ಬುಕ್ಕಿಂಗ್ ಪ್ರಾರಂಭ ಮಾಡುತ್ತಿದ್ದಂತೆ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಹಿಂದಿ ವಿಭಾಗದಲ್ಲಿ ಕೋಟಿ ಕೋಟ್ ಕಲೆಕ್ಷನ್ ಮಾಡಿತ್ತು. ಇದೀಗ ಏಪ್ರಿಲ್ 10ರಿಂದ ಕರ್ನಾಟಕದಲ್ಲಿ ಕೆಜಿಎಫ್2 ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಬಹುತೇಕ ಶೋಗಳು ಸೋಲ್ಡ್ ಔಟ್ (Show Sold Out) ಆಗಿದೆ.

Add Asianetnews Kannada as a Preferred SourcegooglePreferred

ಇಂದು ಬೆಳಗ್ಗೆಯಿಂದ ಕರ್ನಾಟಕದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭ ಮಾಡಲಾಗಿದೆ. ಆನ್ ಲೈನ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದಂತೆ ಬಹುತೇಕ ಶೋಗಳು ಕ್ಷಣಾರ್ಧದಲ್ಲಿ ಮಾರಾಟವಾಗಿವೆ. ಅಂದಹಾಗೆ ಕರ್ನಾಟಕದಲ್ಲಿ ಬೆಳಗ್ಗೆ 3ಗಂಟೆಯಿಂದನೇ ಶೋ ಪ್ರಾರಂಭವಾಗುತ್ತಿದೆ. ಇನ್ನು ಬೆಂಗಳೂರಿನ ಕೆಲವು ಕಡೆ ಬೆಳ್ಳಂಬೆಳಗ್ಗೆ 3.30 ಮತ್ತು 4 ಗಂಟೆಯಿಂದ ಕೂಡ ಅನೇಕ ಕಡೆ ಶೋ ಪ್ರಾರಂಭವಾಗುತ್ತಿದೆ. ಸದ್ಯ ಬುಕ್ ಮೈ ಶೋನಲ್ಲಿ ಬಹುತೇಕ ಶೋಗಳು ಬುಕ್ ಆಗಿವೆ. ಇನ್ನು ಕೆಲವೇ ಕೆಲವು ಶೋಗಳು ಬಾಕಿ ಇದ್ದು, ಇನ್ನೇನು ಕೆಲವೇ ಸಮಯದಲ್ಲಿ ಸಂಪೂರ್ಣ ಸೋಲ್ಡ್ ಔಟ್ ಆಗಲಿದೆ.

RCB ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; ಇದು ಮನರಂಜನೆಯ ಹೊಸ ಯುಗಕ್ಕೆ ನಾಂದಿ

ಏಪ್ರಿಲ್ 10ರಿಂದ KGF 2 ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಸಿನಿಮಾತಂಡ ಈ ಮೊದಲೇ ಅನೌನ್ಸ್ ಮಾಡಿತ್ತು. ಅಭಿಮಾನಿಗಳು ಸಹ ಕಾತರದಿಂದ ಕಾದು ಇಂದು ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಮುಗಿಬಿದ್ದು ಬುಕ್ ಮಾಡಿದ್ದಾರೆ. ಬೆಳ್ಳಂಬೆಳಗ್ಗೆಯ ಶೋಗಳು ಸಂಪೂರ್ಣ ಬುಕ್ ಆಗಿವೆ. ಇನ್ನು ಟಿಕೆಟ್ ಬೆಲೆ ಕೂಡ ಅಷ್ಟೆ ಜಾಸ್ತಿ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ 700 ರೂಪಾಯಿ ದಾಟಿದ್ರೆ ಇನ್ನು ಕೆಲವು ಕಡೆ 500 ರೂಪಾಯಿ ಮತ್ತು 400 ರೂ. ಇದೆ.

ಭಾರತದಲ್ಲಿ ಕೆಲವು ಭಾಗಗಳಲ್ಲಿ ಏಪ್ರಿಲ್ 7 ಮಧ್ಯಾಹ್ನನದಿಂದ ಮುಂಗಡ ಬುಕ್ಕಿಂಗ್ ಪ್ರಾರಂಭ ಮಾಡಲಾಗಿತ್ತು. ಹಿಂದಿ ಭಾಗಗಳಲ್ಲಿ KGF 2 ಬುಕ್ಕಿಂಗ್ ಓಪನ್ ಆಗಿ 12ಗಂಟೆಗಳಲ್ಲಿ ಸುಮಾರು 1.7 ಲಕ್ಷ ಟಿಕೆಟ್ ಗಳು ಮಾರಾಟವಾಗಿತ್ತು. ಒಟ್ಟು 3.35 ಕೋಟಿ ರೂಪಾಯಿ ಗಳಿಸಿಗೆ ಮಾಡಿತ್ತು ಎಂದು ವರದಿಯಾಗಿತ್ತು. ಇದೇ ಮೊದಲ ಬಾರಿಗೆ ಇಷ್ಟು ವೇಗದಲ್ಲಿ ಟಿಕೆಟ್ ಬುಕ್ ಆಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಕರ್ನಾಟಕದಲ್ಲೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.

ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್

ಏಪ್ರಿಲ್ 14ರಂದು ತೆರೆಗೆ ಬರುತ್ತಿರುವ ಕೆಜಿಎಫ್ 2 ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಕುತೂಹಲಗಳಿಗೆ ಏಪ್ರಿಲ್ 14ರಂದು ತೆರೆ ಬೀಳಲಿದೆ.