ಬಾಲಿವುಡ್ ನಟ ಸಂಜಯ್ ದತ್ ಪ್ರತಿ ಬಾರಿ ಗಣೇಶನ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಆಡಂಬರದ ಆಚರಣೆಗೆ ತಡೆ ಬಿದ್ದಿದೆ.

ಪ್ರತಿ ಬಾರಿ ಬಾಲಿವುಡ್ ಸೆಲೆಬ್ರಿಗಳ ಮನೆಯಲ್ಲಿ ಗಣೇಶನ ಹಬ್ಬ ಗ್ರ್ಯಾಂಡ್ ಆಗಿ ನಡೆಯುತ್ತದೆ. ಆದರೆ ಊ ಬಾರಿ ಎಲ್ಲರೂ ಸಿಂಪ್ ಆಗಿ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಸಂಜಯ್ ಮನೆಯಲ್ಲೇ ಸರಳ ಹಬ್ಬ ಆಚರಿಸಿದ್ದಾರೆ.

ಸಮಿಶಾಗೆ ಅನ್ನಪ್ರಾಶನ: ಈ ಬಾರಿ ಗಣೇಶ ಚತುರ್ಥಿ ಸ್ಪೆಷಲ್ ಎಂದ ಶಿಲ್ಪಾ ಶೆಟ್ಟಿ

ಮನೆಯಲ್ಲಿ ಕೂರಿಸಿದ ಗಣೇಶನ ಮುಂದೆ ನಿಂತು ಪತ್ನಿ ಮಾನ್ಯತಾ ದತ್ ಜೊತೆಗಿನ ಫೋಟೋ ಶೇರ್ ಮಾಡಿದ ಸಂಜಯ್ ದತ್, ಆಚರಣೆ ಗ್ರ್ಯಾಂಡ್ ಇಲ್ಲಿದಿದ್ದರೂ, ಗಣಪತಿ ಹಾಗೇ ಇದ್ದಾನೆ ಎಂದು ಬರೆದಿದ್ದಾರೆ.

ಈ ಹಬ್ಬ  ನಮ್ಮ ಜೀವನದ ವಿಘ್ನಗಳನ್ನು ನಿವಾರಿಸಿ ಆರೋಗ್ಯ ಮತ್ತು ಸಂತೋಷವನ್ನು ತರಲಿ ಎಂದು ಎಂದು ಕೆಜಿಎಫ್ ನಟ ಹಾರೈಸಿದ್ದಾರೆ. ಸಂಜಯ್ ದತ್‌ಗೆ ಇತ್ತೀಚೆಗಷ್ಟೇ ಲಂಗ್‌ ಕ್ಯಾನ್ಸರ್‌ನ ಮೂರನೇ ಹಂತದ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದ ನಿಮಿತ್ತ ಶೂಟಿಂಗ್‌ನಿಂದ ಬ್ರೇಕ್ ಪಡೆಯುತ್ತಿರುವುದಾಗಿ ಸಂಜಯ್ ದತ್ ಹೇಳಿದ್ದರು.