Asianet Suvarna News Asianet Suvarna News

The Kerala story: 3 ದಿನದಲ್ಲಿ ₹35 ಕೋಟಿ ಬಾಚಿದ ‘ಕೇರಳ ಸ್ಟೋರಿ’ !

ಹಲವು ವಿವಾದಗಳ ನಡುವೆಯೂ ‘ದ ಕೇರಳ ಸ್ಟೋರಿ’ ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಗಳಿಕೆ ತೋರುತ್ತಿದೆ. ಬಿಡುಗಡೆ ಆದ ಮೂರನೇ ದಿನವಾದ ಸೋಮವಾರ ಮೊದಲ 2 ದಿನಗಳಿಗಿಂತ ಉತ್ತಮ ಗಳಿಕೆಯಾದ 15 ಕೋಟಿ ರು.ಗಳನ್ನು ಸಂಪಾದಿಸಿದ್ದು, ಮೂರೇ ದಿನದಲ್ಲಿ 35 ಕೋಟಿ ರು.ಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದೆ.

Kerala Story movie grossed 35 crores in 3 days rav
Author
First Published May 9, 2023, 12:59 AM IST | Last Updated May 9, 2023, 12:59 AM IST

ನವದೆಹಲಿ (ಮೇ.9): ಹಲವು ವಿವಾದಗಳ ನಡುವೆಯೂ ‘ದ ಕೇರಳ ಸ್ಟೋರಿ’ ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಗಳಿಕೆ ತೋರುತ್ತಿದೆ. ಬಿಡುಗಡೆ ಆದ ಮೂರನೇ ದಿನವಾದ ಸೋಮವಾರ ಮೊದಲ 2 ದಿನಗಳಿಗಿಂತ ಉತ್ತಮ ಗಳಿಕೆಯಾದ 15 ಕೋಟಿ ರು.ಗಳನ್ನು ಸಂಪಾದಿಸಿದ್ದು, ಮೂರೇ ದಿನದಲ್ಲಿ 35 ಕೋಟಿ ರು.ಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದೆ.

32 ಸಾವಿರ ಮಹಿಳೆಯರನ್ನು ಕೇರಳ(Kerala)ದಲ್ಲಿ ಇಸ್ಲಾಂಗೆ ಮತಾಂತರಿಸಿ ಕುಖ್ಯಾತ ಇಸ್ಲಾಮಿಕ್‌ ಉಗ್ರವಾದಿ ಸಂಘಟನೆ(Islamic extremist organization) ‘ಐಸಿಸ್‌’ಗೆ ಸೇರಿಸುವ ಮೂಲಕ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಕಥಾಹಂದರವನ್ನು ಚಿತ್ರ ಹೊಂದಿದೆ. ಈ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು ಹಾಗೂ ಕೇರಳಕ್ಕೆ ಈ ಚಿತ್ರದ ಮೂಲಕ ಮಸಿ ಬಳಿಯಲಾಗಿದೆ ಎಂದು ದೂರಲಾಗಿತ್ತು. ಆದರೆ ಕೇರಳ ಹೈಕೋರ್ಚ್‌ ಇದರ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿತ್ತು.

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

‘ಆದರೂ ಸಹ ಮೇ 5ರಂದು ಬಿಡುಗಡೆಯಾಗಿದ್ದ ಸಿನಿಮಾ 35 ಕೋಟಿ ರು. ಗಳಿಕೆ ಮಾಡಿದ್ದು, ಜನರು ಚಿತ್ರದತ್ತ ಆಕರ್ಷಿತರಾಗಿದ್ದಾರೆ ಎಂಬುದರ ಸೂಚಕವಾಗಿದೆ. ಸೋಮವಾರ ಕೆಲಸದ ದಿನ ಇದ್ದರೂ ಜನ ಮುಗಿಬಿದ್ದು ಸಿನಿಮಾ ನೋಡಿದ್ದು, 15 ಕೋಟಿ ರು. ಗಳಿಸಿದ್ದು ಗಮನಾರ್ಹ’ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ಕೂಡ ಚಿತ್ರಕ್ಕೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗರ ಮೆಚ್ಚುಗೆಗೂ ಚಿತ್ರ ಪಾತ್ರವಾಗಿದೆ. ಆದರೆ ಮಮತಾ ಬ್ಯಾನರ್ಜಿ ಆಡಳಿತದ ಪ.ಬಂಗಾಳದಲ್ಲಿ ಮಾತ್ರ ಚಿತ್ರ ನಿಷೇಧಕ್ಕೆ ಒಳಗಾಗಿದೆ.

ಈ ಸಿನಿಮಾವನ್ನು ಸುದಿಪ್ತೋ ಸೇನ್‌ ನಿರ್ದೇಶನ ಮಾಡಿದ್ದು, ಅದಾ ಶರ್ಮಾ, ಯೋಗಿತಾ ಬಿಹಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

The Kerala Story ಚಿತ್ರ ನಿಷೇಧ ಮಾಡಿದ ಪಶ್ಚಿಮ ಬಂಗಾಳ, ದೀದಿ ವಿರುದ್ಧ ಬೀದಿಗಿಳಿದ ಬಿಜೆಪಿ

Latest Videos
Follow Us:
Download App:
  • android
  • ios