Asianet Suvarna News Asianet Suvarna News

The Kerala Story ಚಿತ್ರ ನಿಷೇಧ ಮಾಡಿದ ಪಶ್ಚಿಮ ಬಂಗಾಳ, ದೀದಿ ವಿರುದ್ಧ ಬೀದಿಗಿಳಿದ ಬಿಜೆಪಿ!

ಪಶ್ಚಿಮ ಬಂಗಾಳ ಸರ್ಕಾರ, ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರವನ್ನು ನಿಷೇಧ ಮಾಡಿದೆ. ಈ ಕುರಿತಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇನ್ನು ದೀದಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕಕ್ತಪಡಿಸಿದೆ. ಅನುರಾಗ್‌ ಠಾಕೂರ್ ಇವರೆಲ್ಲರೂ ಪಿಎಫ್‌ಐ ಹಾಗೂ ಐಸಿಸ್‌ನ ಬೆಂಬಲಿಗರು ಎಂದು ಹೇಳಿದ್ದಾರೆ.
 

West Bengal bans The Kerala Story BJP Protests Anurag Thakur they are Supporters Of PFI ISIS san
Author
First Published May 8, 2023, 8:10 PM IST

ಕೋಲ್ಕತ್ತಾ (ಮೇ.8): ರಾಜ್ಯದಲ್ಲಿನ ವಾತಾವರಣವನ್ನು ಚಿತ್ರ ಹಾಳು ಮಾಡುತ್ತದೆ. ದ್ವೇಷ ಹಾಗೂ ಹಿಂಸಾಚಾರದ ಘಟನೆಗಳಿಗೆ ಕಾರಣವಾಗುವ ಯಾವುದೇ ಚಿತ್ರಗಳಿಗೆ ಅನುಮತಿ ನೀಡೋದಿಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ 'ದಿ ಕೇರಳ ಸ್ಟೋರಿ' ಚಿತ್ರವನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದಾರೆ. "ಪಶ್ಚಿಮ ಬಂಗಾಳ ಸರ್ಕಾರವು 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ. ಇದು ಯಾವುದೇ ದ್ವೇಷ ಮತ್ತು ಹಿಂಸಾಚಾರದ ಘಟನೆಯನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ಕುರಿತೂ ಪ್ರಸ್ತಾಪ ಮಾಡಿರುವ ಅವರು,' "ದಿ ಕಾಶ್ಮೀರ್ ಫೈಲ್ಸ್' ಎಂದರೇನು? ಇದು ಸಮಾಜದ ನಿರ್ದಿಷ್ಟ ವರ್ಗವನ್ನು ಅವಮಾನಿಸುವ ಉದ್ದೇಶವಾಗಿತ್ತು. 'ದಿ ಕೇರಳ ಸ್ಟೋರಿ' ಎಂದರೇನು? ಅದೊಂದು ತಿರುಚಿದ ಕಥೆ’ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ 'ದಿ ಕೇರಳ ಸ್ಟೋರಿ'ಯನ್ನು ನಿಷೇಧಿಸಿದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಒಂದು ವೇಳೆ ಆಕೆ ಈ ರೀತಿ ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಕಾನೂನಿನ ಪ್ರಕಾರ ಏನೆಲ್ಲ ಸಾಧ್ಯವೋ, ಹೋರಾಟ ಮಾಡುತ್ತೇವೆ ಎಂದು ನಿರ್ಮಾಪಕ ವಿಪುಲ್ ಶಾ ಹೇಳಿದ್ದಾರೆ. ತಮಿಳುನಾಡಿನಲ್ಲಿ ಕೂಡ ಭಾನುವಾರದಿಂದ ಚಿತ್ರದ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇನ್ನೊಂದೆಡೆ ಮಮತಾ ಬ್ಯಾನರ್ಜಿ ಕ್ರಮವನ್ನು ಬಿಜಿಪಿ ಟೀಕಿಸಿದ್ದು, ಪ್ರತಿಭಟನೆಯನ್ನೂ ಮಾಡಿದೆ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಇವರೆಲ್ಲರೂ ಪಿಎಫ್‌ಐ ಹಾಗೂ ಐಸಿಸ್‌ನ ಬೆಂಬಲಿಗರು ಎಂದು ಜರಿದಿದ್ದಾರೆ.
ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಅಧ್ಯಕ್ಷ ಎಂ ಸುಬ್ರಮಣ್ಯಂ, ಚಿತ್ರವನ್ನು ಪ್ರದರ್ಶಿಸಿದ ಕೆಲವು ಮಲ್ಟಿಪ್ಲೆಕ್ಸ್‌ಗಳು ಅದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿವೆ ಎಂಬ ಸುದ್ದಿಯನ್ನು ಖಚಿತಪಡಿಸಿದ್ದಾರೆ. 

"ಈ ಚಲನಚಿತ್ರವನ್ನು ಪ್ಯಾನ್-ಇಂಡಿಯಾ ಗುಂಪುಗಳ ಒಡೆತನದ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಪ್ರದರ್ಶಿಸಲಾಯಿತು, ಅದರಲ್ಲೂ ಬಹುತೇಕವಾಗಿ ಪಿವಿಆರ್‌ಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಸ್ಥಳೀಯರ ಮಾಲೀಕತ್ವದ ಮಲ್ಟಿಪ್ಲೆಕ್ಸ್‌ಗಳು ಚಲನಚಿತ್ರವನ್ನು ಪ್ರದರ್ಶಿಸದಿರಲು ಈಗಾಗಲೇ ನಿರ್ಧರಿಸಿದ್ದವು, ಏಕೆಂದರೆ ಅದರಲ್ಲಿ ಯಾವುದೇ ಜನಪ್ರಿಯ ತಾರೆಗಳಿಲ್ಲ. ಉದಾಹರಣೆಗೆ ಕೊಯಮತ್ತೂರಿನಲ್ಲಿ ಎರಡು ಶೋ ನೀಡಲಾಗಿತ್ತು. ಶುಕ್ರವಾರ ಹಾಗೂ ಶನಿವಾರ ನೀಡಿದ ಪ್ರದರ್ಶನದಲ್ಲಿ ಯಾವುದೇ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ' ಎಂದು ತಿರುಪ್ಪೂರ್ ಸುಬ್ರಮಣ್ಯಂ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸುಬ್ರಮಣ್ಯಂ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

ಆದರೆ, ತಮಿಳುನಾಡು ಬಿಜೆಪಿಯು ಡಿಎಂಕೆ ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದು, ಇದು ವ್ಯವಸ್ಥಿತ ಶೈಲಿಯಲ್ಲಿ ಚಲನಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದುಹಾಕುತ್ತಿದೆ ಎಂದು ಆರೋಪಿಸಿದೆ.
'ದಿ ಕೇರಳ ಸ್ಟೋರಿ' ಚಿತ್ರವನ್ನು ಕೇರಳದ ರಾಜಕಾರಣಿಗಳು ತೀವ್ರವಾಗಿ ಟೀಕಿಸಿದ್ದಾರೆ, ಈ ಚಿತ್ರವು ಕೇರಳ ಮತ್ತು ಮುಸ್ಲಿಮರನ್ನು ಕೆಟ್ಟ ರೀತಿಯಲ್ಲಿ  ಬಿಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ರಾಜಕೀಯ ಮುಖಂಡರು, ರಾಜ್ಯದಲ್ಲಿ ಇದು ಕೋವು ಉದ್ವಿಗ್ನೆತೆಗೆ ಕಾರಣವಾಗಬಹುದು ಎಂದು ಕೋರಿ ಚಿತ್ರ ನಿಷೇಧ ಮಾಡಲು ಪ್ರಯತ್ನಿಸಿದ್ದರು. ಆದರೆ, ಚಿತ್ರಕ್ಕೆ ತಡೆಯಾಜ್ಞೆ ನೀಡಲು ಕೋರ್ಟ್‌ ನಿರಾಕರಿಸಿತ್ತು.

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

ಈ ಕಥೆಯು 3 ಮಹಿಳೆಯರನ್ನು ಪರಿವರ್ತಿಸಿ ನಂತರ ಇಸ್ಲಾಮಿಕ್ ಸ್ಟೇಟ್‌ಗೆ ಲೈಂಗಿಕ ಗುಲಾಮರನ್ನಾಗಿ ಮಾರಾಟ ಮಾಡುವುದರ ಸುತ್ತ ಸುತ್ತುತ್ತದೆ. ಆದರೆ, ಮೇ 5 ರಂದು ತೆರೆಗೆ ಬಂದ ಚಿತ್ರದ ಬಿಡುಗಡೆಯನ್ನು ನಿಷೇಧಿಸಲು ಅಥವಾ ತಡೆಯಲು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳು ನಿರಾಕರಿಸಿವೆ. ಮತ್ತೊಂದೆಡೆ, 'ದಿ ಕೇರಳ ಸ್ಟೋರಿ' ತನ್ನ ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಗಳಿಕೆ ದಾಖಲಿಸಿದೆ. ಶುಕ್ರವಾರ 8.03 ಕೋಟಿ ಗಳಿಸುವ ಮೂಲಕ ಚಿತ್ರ ಭರ್ಜರಿ ಆರಂಭ ಕಂಡಿತ್ತ. ಈ ಚಿತ್ರವು 11.22 ಕೋಟಿ ರೂ ಮತ್ತು ಮುಂದಿನ ಎರಡು ದಿನಗಳಲ್ಲಿ ರೂ 16 ಕೋಟಿ ಗಳಿಸಿ ಭಾರತದಲ್ಲಿ ತನ್ನ ಮೊದಲ ವಾರಾಂತ್ಯದ ಕಲೆಕ್ಷನ್ ಅನ್ನು ರೂ 35.25 ಕೋಟಿ ರೂಪಾಯಿಗೆ ಏರಿಸಿದೆ.

Follow Us:
Download App:
  • android
  • ios