ಲೆಜೆಂಡ್‌ ಆಕ್ಟರ್‌ಗಳ ಜೊತೆಗೆ ಕೆಲಸ ಮಾಡಬೇಕು. ಅವರೊಂದಿಗೆ ಪುಟ್ಟಪಾತ್ರವಾದರೂ ಸರಿ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬ ನಟ, ನಟಿಗೂ ಇರುತ್ತದೆ. ಇದೇ ರೀತಿಯ ಕನಕದಂತಹ ಅವಕಾಶ ಕೀರ್ತಿ ಸುರೇಶ್‌ ಪಾಲಿಗೆ ಬಂದಿದೆ.

ಈ ವರ್ಷ ಟ್ವಿಟರ್‌ನಲ್ಲಿ ಮೊದಲಿರುವ ಸೆಲಬ್ರಿಟಿಗಳಿವರು!

ಹಿಂದೆ ದೊಡ್ಡ ಚಿತ್ರ ‘ಮಹಾನಟಿ’ಯಲ್ಲಿ ಸಾವಿತ್ರಿ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದ ಕೀರ್ತಿಗೆ ರಜನಿಕಾಂತ್‌ ಹೊಸ ಚಿತ್ರ ‘ತಲೈವಾರ್‌ 168’ ನಟಿಸುವ ಅವಕಾಶ ಸಿಕ್ಕಿದೆ. ಸನ್‌ ಪಿಕ್ಚ​ರ್ಚ್ ಬ್ಯಾನರ್‌ನಲ್ಲಿ ಸಿರುತೈ ಶಿವ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಕೀರ್ತಿ ರಜನಿಕಾಂತ್‌ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪ್ರಮುಖವಾದ ಪಾತ್ರ. ಅದಕ್ಕಾಗಿಯೇ ಕೀರ್ತಿ ಫುಲ್‌ ಖುಷಿಯಾಗಿದ್ದಾರೆ.

 

‘ನನ್ನ ಸಿನಿ ಬದುಕಿನಲ್ಲಿ ಇದೊಂದು ದೊಡ್ಡ ಮೈಲುಗಲ್ಲು. ರಜನಿ ಸರ್‌ ಅವರೊಂದಿಗೆ ಸ್ಕ್ರೀನ್‌ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ನಾನು ಫುಲ್‌ ಹ್ಯಾಪಿಯಾಗಿ ಇದ್ದೇನೆ’ ಎಂದು ಹೇಳಿಕೊಳ್ಳುತ್ತಾ ಅವಕಾಶ ಕೊಟ್ಟಇಡೀ ತಂಡಕ್ಕೆ ಥ್ಯಾಂಕ್ಸ್‌ ಹೇಳಿದ್ದಾರೆ. ಇನ್ನೇನು ಮುಂದಿನ ವಾರದಿಂದ ಶೂಟಿಂಗ್‌ ಆರಂಭವಾಗಲಿರುವ ಚಿತ್ರಕ್ಕಾಗಿ ಕೀರ್ತಿ ಫುಲ್‌ ಪ್ರಿಪರೇಷನ್‌ಗೆ ಜಾರಿದ್ದಾರೆ.