ಈ ವರ್ಷ ಅತೀ ಹೆಚ್ಚು ಟ್ವಿಟರ್ ಬಳಸಿರುವ ಸೆಲಬ್ರಿಟಿಗಳಿವರು | ಮೊದಲ ಸ್ಥಾನದಲ್ಲಿ ಅಮಿತಾಬಚ್ಚನ್ ಹಾಗೂ ಸೋನಾಕ್ಷಿ ಸಿನ್ಹಾ ಇದ್ದಾರೆ | 

2019 ಮುಗಿಯುವ ಹಂತಕ್ಕೆ ಬಂದಿದೆ. ಈ ವರ್ಷ ನಡೆದ ಪ್ರಮುಖ ಘಟನೆಗಳನ್ನು ಮತ್ತೊಮ್ಮೆ ರೀ ಕಾಲ್ ಮಾಡುವ ಸಮಯ. ಅತೀ ಹೆಚ್ಚು ಟ್ವಿಟ್ - ರೀಟ್ವೀಟ್ ಮಾಡಿದ ಸೆಲಬ್ರಿಟಿಗಳ ಲಿಸ್ಟನ್ನು ಟ್ವಿಟರ್ ಪ್ರಕಟಪಡಿಸಿದೆ. 

ಪುರುಷರ ವಿಭಾಗದಲ್ಲಿ ಅಮಿತಾಬಚ್ಚನ್ ಮೊದಲ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಶಾರೂಕ್ ಖಾನ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಟ್ವಿಟರ್‌ನಲ್ಲಿ ಯಾವಾಗಲೂ ಸಕ್ರಿಯರಾಗಿರುವ ಅಮಿತಾಬ್ ತಮ್ಮ ಅಭಿಪ್ರಾಯಗಳನ್ನು, ಸಿನಿಮಾಗಳ ಅಪ್‌ಡೇಟ್‌ಗಳನ್ನು ಹಾಕುತ್ತಿರುತ್ತಾರೆ. 

ಆಕೆ ನಂಬರ್ ಕೊಡಿ ಎಂದು ಕೇಳಿದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಪೊಲೀಸ್

Scroll to load tweet…

ಮಹಿಳಾ ವಿಭಾಗದಲ್ಲಿ ಸೋನಾಕ್ಷಿ ಸಿನ್ಹಾ ಮೊದಲ ಸ್ಥಾನದಲ್ಲಿದ್ದಾರೆ. ಆನಂತರ ಅನುಷ್ಕಾ ಶರ್ಮಾ, ಲತಾ ಮಂಗೇಶ್ಕರ್ ಇದ್ದಾರೆ. ಸೋನಾಕ್ಷಿ ಸಿನ್ಹಾ ಸದ್ಯ ದಬಾಂಗ್- 3 ಯಲ್ಲಿ ಬ್ಯುಸಿಯಾಗಿದ್ದಾರೆ.

ಕಿವೀಸ್ ಪ್ರವಾಸ: ಸಂಜುಗೆ ಗೇಟ್‌ಪಾಸ್, ಕಿಡಿಕಾರಿದ ಫ್ಯಾನ್

Scroll to load tweet…