ಅಯ್ಯೋ ಕೀರ್ತಿ ಸುರೇಶ್‌ಗೆ ಏನಾಯ್ತು? ಫೋಟೋ ಹಂಚಿಕೊಂಡು ಭಾವುಕರಾದ ಸ್ಟಾರ್ ನಟಿ
ನಟಿ ಕೀರ್ತಿ ಸುರೇಶ್ ಪಾತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತಾರೆ ಎಂದು ಫೋಟೋ ಮೂಲಕ ಬಹಿರಂಗ ಪಡಿಸಿದ್ದಾರೆ.
ಸೌತ್ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಕೀರ್ತಿ ಕೊನೆಯದಾಗಿ ದಸರಾ ಮೂಲಕ ಅಭಿಮಾವನಿಗಳ ಮುಂದೆ ಬಂದಿದ್ದರು.
ದಸರಾ ಸಿನಿಮಾದಲ್ಲಿ ಕೀರ್ತಿ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಡಿ ಗ್ಲಾಮ್ ಲುಕ್‌ನಲ್ಲಿ ಕೀರ್ತಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಬರ್ತಿದ್ದಾರೆ.
ಪಾತ್ರಕ್ಕಾಗಿ ಕೀರ್ತಿ ಎಷ್ಟು ಶ್ರಮ ಬೇಕಾದರೂ ಹಾಕುತ್ತಾರೆ, ಹೇಗೆ ಬೇಕಾದರೂ ಬದಲಾಗುತ್ತಾರೆ. ಸಿಕ್ಕಾಪಟ್ಟೆ ಕಷ್ಟ ಪಡುವ ನಟಿ ಕೀರ್ತಿ ಇದೀಗ ಸಿನಿಮಾಗಾಗಿ ಹೇಗೆ ತಯಾರಾಗುತ್ತಾರೆ ಎನ್ನುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಒಂದಷ್ಟು ಫೋಟೋಗಳನ್ನು ಶೇರ್ ಮಾಡಿರುವ ಕೀರ್ತಿ ಸಿನಿಮಾಗಾಗಿ ಹೇಗೆ ತಯಾರಾಗುತ್ತಾರೆ ಎಂದು ವಿವರಿಸಿದ್ದಾರೆ. ಕೊಳಕು ಉಗುರು, ಚಪ್ಪಲಿಗಳು, ಮೆಟಾಡೋರ್ ವ್ಯಾನ್' ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೀರ್ತಿ ಸದ್ಯ ಸಾನಿ ಕಾಯಿದಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅರುಣ್ ಮಾಥೇಶ್ವರನ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಕೀರ್ತಿ ಹಂಚಿಕೊಂಡಿದ್ದಾರೆ.
ಕೀರ್ತಿ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂಥ ಬದ್ಧತೆಯ ನಟಿ ಎಂದು ಹೊಗಳುತ್ತಿದ್ದಾರೆ. ಪ್ರತಿಭಾವಂತ ನಟಿ ಎಂದು ಹೇಳುತ್ತಿದ್ದಾರೆ.
ಕೀರ್ತಿ ಸುರೇಶ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭೋಲಾ ಶಂಕರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಜೊತೆಗೆ ತೆಲುಗು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.