ನಟಿ ಕೀರ್ತಿ ಸುರೇಶ್ ಮಹಿಳಾ ಕ್ರಿಕೆಟ್‌ನ ಬ್ರ್ಯಾಂಡ್ ಅಂಬಾಸಿಡರ್: ಭಾರತ vs ಆಸ್ಟ್ರೇಲಿಯಾ ಟಿಕೆಟ್ ಮಾರಾಟ
ಬಹುಭಾಷಾ ತಾರೆ ಕೀರ್ತಿ ಸುರೇಶ್ ಅವರನ್ನು ಮಹಿಳಾ ಕ್ರಿಕೆಟ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಅದರ ಡಿಟೇಲ್ಸ್ ಇಲ್ಲಿದೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕೀರ್ತಿ ಸುರೇಶ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಿವೆ. ಮಲಯಾಳ, ತಮಿಳು, ತೆಲಗು ಚಿತ್ರಗಳಲ್ಲಿ ಸಕತ್ ಮಿಂಚಿರುವ ನಟಿ, ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದು, ಅದು ಬಿಡುಗಡೆಗೆ ಕಾದಿದೆ. ಕೀರ್ತಿ ನಟಿಸಿದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ದೊಡ್ಡ ಸಕ್ಸಸ್‌ಗೆ ಕಾಯುತ್ತಿದ್ದ ಕೀರ್ತಿಗೆ ಮಾಮನ್ನನ್ ಸಿನಿಮಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದರು. ತಮಿಳಿನ ಮಾಮನ್ನನ್ ಸಿನಿಮಾ ಸಕ್ಸಸ್ ಆಗಿದ್ದು ಕೀರ್ತಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಸೌತ್ ಸುಂದರಿ ಬಾಲಿವುಡ್‌ಗೆ ಹಾರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಹಿಂದಿ ಸಿನಿಮಾ ಮಾಡಬೇಕು ಎನ್ನುವುದು ಕೀರ್ತಿ ಸುರೇಶ್ ಅವರ ಆಸೆಯಾಗಿತ್ತು. ಉತ್ತಮ ಪಾತ್ರಕ್ಕಾಗಿ ಕೀರ್ತಿ ಎದುರು ನೋಡುತ್ತಿದ್ದರು. ಅದರಂತೆ ಈಗ ಬಾಲಿವುಡ್‌ಗೂ ಜಿಗಿದಿದ್ದಾರೆ. ತಮ್ಮಿಷ್ಟದ ಪಾತ್ರ ಸಿಕ್ಕಿದ ಕಾರಣ ಕೀರ್ತಿ ಧೈರ್ಯವಾಗಿ ಹಿಂದಿಗೆ ಹಾರಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಇದೀಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಂದಹಾಗೆ ಈ ಚಿತ್ರದ VD18. 2024ರ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಮೊದಲನೆ ನಾಯಕಿಯಾಗಿ ಕೀರ್ತಿ ಆಯ್ಕೆಯಾಗಿದ್ದಾರೆ.
ಇದರ ನಡುವೆಯೇ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ. ಅದೇನೆಂದರೆ, ಕೀರ್ತಿ ಸುರೇಶ್ ಅವರು ಮಹಿಳಾ ಕ್ರಿಕೆಟ್‌ನ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ದೇವರ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದರ ಪ್ರಯತ್ನವಾಗಿ, ಜನಪ್ರಿಯ ದಕ್ಷಿಣ ಭಾರತದ ತಾರೆಯಾಗಿರುವ ಕೀರ್ತಿ ಅವರಿಗೆ ಈ ಪಟ್ಟವನ್ನು ನೀಸಲಾಗಿದೆ. ಇದೇ 26 ರಂದು ತಿರುವನಂತಪುರದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ T20I ಗೆ ಆನ್‌ಲೈನ್ ಟಿಕೆಟ್ ಮಾರಾಟವನ್ನು ಕೀರ್ತಿ ಸುರೇಶ್ ಉದ್ಘಾಟಿಸಿದರು.
ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ಗೆ ವಿಶೇಷ ಗೌರವ: ಜೀವಮಾನ ಸಾಧನೆ ಪ್ರಶಸ್ತಿಯ ಗರಿ
ಈ ಗಮನಾರ್ಹ ಸಂದರ್ಭದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ತನ್ನ ಮಹಿಳಾ ತಂಡಕ್ಕೆ ಬ್ರ್ಯಾಂಡ್ ಅಂಬಾಸಿಡರ್‌ನ ಮೊದಲ ನೇಮಕಾತಿಯನ್ನು ಮಾಡಿದೆ. ಈ ಕಾರ್ಯಕ್ರಮದಲ್ಲಿ ಕೇರಳದ ಏಕೈಕ ರಾಷ್ಟ್ರೀಯ ತಂಡದ ಆಟಗಾರ್ತಿ ಮಿನ್ನು ಮಣಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು ಮತ್ತು ದೇಶೀಯ ಪಂದ್ಯಾವಳಿಗಳ ಎಲ್ಲಾ ವಯೋಮಾನದ ವಿಭಾಗಗಳಲ್ಲಿ ಎಲೈಟ್ ಮತ್ತು ಸೂಪರ್ ಲೀಗ್ ಹಂತಕ್ಕೆ ಅವರ ಅರ್ಹತೆಯನ್ನು ಶ್ಲಾಘಿಸಲಾಯಿತು. ಇವರನ್ನು ನೇಮಕ ಮಾಡಲು ಕಾರಣವೂ ಇದೆ. ಅದೇನೆಂದರೆ, ಕೀರ್ತಿ ಸುರೇಶ್ ಅವರು 2017-18ರ ಋತುವಿನಲ್ಲಿ ರಾಷ್ಟ್ರೀಯ T-20 ಚಾಂಪಿಯನ್‌ಶಿಪ್‌ನಲ್ಲಿ ಜಯಗಳಿಸಿದವರು. 23 ವರ್ಷದೊಳಗಿನ ಯುವತಿಯರ ಸ್ಪರ್ಧೆಯಲ್ಲಿ ಇವರು ವಿಜೇತರಾಗಿದ್ದರು.
ಇನ್ನು ಇವರ ಸಿನಿ ಪಯಣದ ಕುರಿತು ಹೇಳುವುದಾದರೆ, ಕೀರ್ತಿ ಸುರೇಶ್ ಅವರು ಚಿರಂಜೀವಿಯ ಭೋಲಾ ಶಂಕರ್, ನಾನಿಯ ದಸರಾ ಮತ್ತು ತಮಿಳು ಚಿತ್ರ ಮಾಮನ್ನನ್‌ನಲ್ಲಿನ ಪಾತ್ರಗಳೊಂದಿಗೆ ಬಹುಮುಖತೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ, ಅವರು ಸೈರನ್, ರಘು ಥಾಥಾ, ರಿವಾಲ್ವರ್ ರೀಟಾ ಮತ್ತು ಕನ್ನಿವೇದಿಯಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನೇನು ಸೈಲಜಾ ಚಿತ್ರದ ಮೂಲಕ ತೆಲುಗಿನಲ್ಲಿ ಖ್ಯಾತಿಯನ್ನು ಗಳಿಸಿದ ಕೀರ್ತಿ ಸುರೇಶ್ ನಿರಂತರವಾಗಿ ಉದ್ಯಮದಲ್ಲಿ ಪ್ರಮುಖ ತಾರೆಯಾಗಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಸೋಲಿಲ್ಲದ ಸರದಾರ: 'ಅಪಶಕುನ' ಎಂದವರಿಗೆ ಕಂಗನಾ ತಿರುಗೇಟು