ಒಟಿಟಿಯಲ್ಲಿಯೇ ಎರಡು ಹಿಟ್ ಸಿನಿಮಾ ನೀಡಿದ ನಟ ಆರ್ಯ ನಟಿಸುತ್ತಿರುವ ಹೊಸ ಚಿತ್ರಕ್ಕೆ 'ಕ್ಯಾಪ್ಟನ್' ಎಂಬ ಹೆಸರನ್ನು ಇಡಲಾಗಿದ್ದು, ಸ್ಯಾಂಡಲ್‌ವುಡ್ ನಟಿ ಕಾವ್ಯಾ ಶೆಟ್ಟಿ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಲವು ವರ್ಷಗಳ ಗ್ಯಾಪ್ನ ಬಳಿಕ ಮತ್ತೆ ಕಾಲಿವುಡ್ (Kollywood) ಚಿತ್ರದಲ್ಲಿ ಸ್ಯಾಂಡಲ್‌ವುಡ್ ನಟಿ ಕಾವ್ಯಾ ಶೆಟ್ಟಿ (Kavya Shetty) ಕಾಣಿಸಿಕೊಳ್ಳುತ್ತಿದ್ದಾರೆ. ನಟ ಆರ್ಯ (Arya) ಜೊತೆಗೆ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾವ್ಯಾ ಶೆಟ್ಟಿ ನಟಿಸುತ್ತಿದ್ದು, ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಹೌದು! ಒಟಿಟಿಯಲ್ಲಿಯೇ ಎರಡು ಹಿಟ್ ಸಿನಿಮಾ ನೀಡಿದ ನಟ ಆರ್ಯ ನಟಿಸುತ್ತಿರುವ ಹೊಸ ಚಿತ್ರಕ್ಕೆ 'ಕ್ಯಾಪ್ಟನ್' (Captain) ಎಂಬ ಹೆಸರನ್ನು ಇಡಲಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಪೋಸ್ಟರ್‌ನ್ನು (Title Poster) ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕಾವ್ಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಕಾವ್ಯಾ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram), ನನ್ನ ಹೊಸ ಚಿತ್ರಕ್ಕೆ 'ಕ್ಯಾಪ್ಟನ್' ಎಂಬ ಟೈಟಲ್ ಫಿಕ್ಸ್ ಆಗಿದೆ. ಶಕ್ತಿ ಸೌಂದರ್ ರಾಜನ್ (Shakti Soundar Rajan) ಸರ್ ನಿರ್ದೇಶನ ಮಾಡುತ್ತಿದ್ದು, ಆರ್ಯ ಅವರ ಜೊತೆಗೆ ನಟಿಸುತ್ತಿದ್ದೇನೆ ಎಂದು ಚಿತ್ರದ ಶೀರ್ಷಿಕೆಯ ಪೋಸ್ಟರನ್ನು ಹಂಚಿಕೊಂಡಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಚಿತ್ರೀಕರಣದಲ್ಲಿ ಕಾವ್ಯಾ ಭಾಗಿಯಾಗಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಆಗಿದ್ದು, ಕಾವ್ಯಾ ಆ್ಯಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆರ್ಯ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಕಾವ್ಯಾ, ಅವರ ಇತ್ತೀಚಿನ 'ಸರಪಟ್ಟ ಪರಂಬರೈ' ಮತ್ತು 'ಟೆಡ್ಡಿ' ಚಿತ್ರಗಳನ್ನು ವೀಕ್ಷಿಸಿದ್ದೇನೆ. ಅವರೊಂದಿಗೆ ನಟಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ.
ಮೋಹನ್‌ಲಾಲ್ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ: ಕಾವ್ಯ ಶೆಟ್ಟಿ
ಈ ಸಿನಿಮಾದಲ್ಲಿ ನನಗೆ ಆಕ್ಷನ್ ಅವತಾರ ಇರುವುದರಿಂದ, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದೇನೆ. ಜೀವರಕ್ಷಕ ಕಲೆಯ ಮೊರೆ ಹೋಗಿದ್ದೇನೆ ಎಂದು ಈ ಹಿಂದೆ ತಿಳಿಸಿದ್ದಾರೆ. ಜೊತೆಗೆ 2015ರಲ್ಲಿ ತೆರೆಕಂಡ 'ಇದು ಎನ್ನ ಮಾಯಂ' ಎಂಬ ತಮಿಳು ಚಿತ್ರದಲ್ಲಿ ಮೊದಲೇ ನಟಿಸಿದ್ದೇನೆ. ಅದಾದ ಬಳಿಕ ಒಳ್ಳೆಯ ಅವಕಾಶಕ್ಕೆ ಕಾದಿದ್ದೆ. ಇದೀಗ ಅದು ಈ ಚಿತ್ರದ ಮೂಲಕ ಸಿಕ್ಕಿದೆ ಎನ್ನುತ್ತಾರೆ ಕಾವ್ಯಾ ಶೆಟ್ಟಿ. 'ಟಿಕ್ ಟಿಕ್ ಟಿಕ್' ಮತ್ತು ಇತ್ತೀಚೆಗೆ ಬಿಡುಗಡೆ ಆಗಿದ್ದ 'ಟೆಡ್ಡಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ಶಕ್ತಿ ಸೌಂದರ್ ರಾಜನ್ (Shakti Soundar Rajan) 'ಕ್ಯಾಪ್ಟನ್' ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವೂ ಸಹ ನಿರ್ದೇಶಕರ ಹಿಂದಿನ ಸಿನಿಮಾಗಳನ್ನೇ ಹೋಲುವ ಸೈನ್ಸ್ ಫಿಕ್ಷನ್ (Science Fiction) ಶೈಲಿಯಲ್ಲಿ ಇರಲಿದೆಯಂತೆ.
ಇನ್ನು ಕಾವ್ಯಾಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕನ್ನಡದ 'ರವಿ ಬೋಪಣ್ಣ' (Ravi Bopanna) ಮತ್ತು 'ಕಾಡಾ' (Kaada) ಸಿನಿಮಾ ಕೆಲಸ ಮುಗಿಸಿದ್ದು, ತೆಲುಗಿನಲ್ಲಿ 'ಗುರ್ತಂದಾ ಸೀತಾಕಲಂ'ನಲ್ಲೂ ನಟಿಸಿದ್ದಾರೆ. ಮಲಯಾಳಂನ 'ಬ್ರೋ ಡ್ಯಾಡಿ' ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕಾವ್ಯಾ ಶೆಟ್ಟಿ, ಕಾರ್ತಿಕ್ ಜಯರಾಮ್( ಜೆಕೆ ) ಅಭಿನಯದ 'ಕಾಡಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. 'ಕಾಡ' ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ. 'ಮಂಜರಿ' ನಿರ್ದೇಶಕ ವಿಶ್ರುತ್ ನಾಯಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಆರ್ಯ ಜೊತೆಗೆ ಕಾಲಿವುಡ್ ಚಿತ್ರದಲ್ಲಿ ಕಾವ್ಯಾ ಶೆಟ್ಟಿ
ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ (V.Ravichandran) ನಟಿಸಿ ನಿರ್ದೇಶಿಸಿರುವ 'ರವಿ ಬೋಪಣ್ಣ' ಚಿತ್ರದಲ್ಲೂ ರವಿಚಂದ್ರನ್‌ಗೆ ನಾಯಕಿಯಾಗಿ ಕಾವ್ಯಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಗ್ಲಾಮರ್ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಬಳಸಿರುವ ಹಿನ್ನೆಲೆ ಸಂಗೀತ, ದೃಶ್ಯಗಳು, ಕ್ರೇಜಿಸ್ಟಾರ್ ಮ್ಯಾನರಿಸಂ, ಕಾವ್ಯಾ ಶೆಟ್ಟಿ ಅವರ ಹಾಟ್ ಲುಕ್‌ಗಳು ನೋಡುಗರ ಗಮನ ಸೆಳೆದಿತ್ತು. ಅಲ್ಲದೇ ತುಂಬಾ ದಿನಗಳ ನಂತರ ಕಾವ್ಯಾ ಶೆಟ್ಟಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
