Asianet Suvarna News Asianet Suvarna News

ಕಾರ್ತಿಕ್ ಆರ್ಯನ್ 'Replacement Star': ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟ

ಎಷ್ಟೇ ಸಿನಿಮಾ ಮಾಡಿದ್ದರೂ ಕಾರ್ತಿಕ್ ಆರ್ಯನ್‌ಗೆ ಸರಿಯಾಗಿ ಗೌರವ ಸಿಗುತ್ತಿಲ್ವಾ? ಉತ್ತರ ಕೊಟ್ಟ ನಟ....
 

Kartik Aryan reaction for trolls calling him replacement star vcs
Author
First Published Nov 27, 2022, 1:02 PM IST

ಭೂಲ್ ಭುಲೈಯಾ 2 ಚಿತ್ರದ ಮೂಲಕ ಬಿ-ಟೌನ್‌ಗೆ ಬಿಟ್ ಹಿಟ್ ಕೊಟ್ಟ ಕಾರ್ತಿಕ್ ಆರ್ಯನ್‌ ಬಗ್ಗೆ ದಿನಕ್ಕೊಂದು ಮೀಮ್ ಮತ್ತು ಟ್ರೋಲ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾರ್ತಿಕ್ ಎಷ್ಟೇ ಪ್ರಮುಖ ಪಾತ್ರವಿರುವ ಸಿನಿಮಾ ಆಯ್ಕೆ ಮಾಡಿಕೊಂಡರೂ ಒಬ್ಬ ಸ್ಟಾರ್ ನಟ ನಟಿಸಿದ್ದರೆ ಅಥವಾ ಗೆಸ್ಟ್‌ ರೂಲ್‌ನಲ್ಲಿ ಬಂದರೂ ಅವರು ಹೈಲೈಟ್ ಆಗುತ್ತಾರೆ ಹೊರತು ಕಾರ್ತಿಕ್ ಅಲ್ಲ...ಹೀಗಾಗಿ ಕಾರ್ತಿಕ್‌ನ Replacement Star ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾಗ ಕಾರ್ತಿಕ್ ಕೊಟ್ಟ ಉತ್ತರವಿದು...

ಸದ್ಯ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಅಗಲಿರುವ Freddy ಸಿನಿಮಾದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಕಾರ್ತಿ ವೃತ್ತಿ ಜೀವನದಲ್ಲಿ ಇದೊಂದು ಬಿಗ್ ತಿರುವು ನೀಡುವ ಸಾಧ್ಯತೆಗಳಿದೆ. ಕೆಲವು ದಿನಗಳ ಹಿಂದೆ ಸಿದ್ಧಾರ್ಥ್ ಕಣ್ಣನ್ ಜೊತೆ ನಡೆದ ಸಂದರ್ಶನದಲ್ಲಿ ಕಾರ್ತಿಕ್ ಟ್ರೋಗಳ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ ದಿನಕ್ಕೊಂದು ಮಿಮ್ಸ್‌ ಕ್ರಿಯೇಟ್ ಅಗುತ್ತಿದೆ ಅಂದ್ರೆ ಅಷ್ಟು ಜನರು ನನ್ನನ್ನು ನೋಡುತ್ತಿದ್ದಾರೆ ಅಷ್ಟೊಂದು ಪ್ರೀತಿ ಸಿಗುತ್ತಿದೆ ಎಂದು ಅರ್ಥ ಎಂದು ಹೇಳಿದ್ದಾರೆ. 

Kartik Aryan reaction for trolls calling him replacement star vcs

'ಅನೇಕರು ಈ Replacement Star ಅನ್ನೋ ಮೀಮ್ಸ್‌ ಮತ್ತು ಟ್ರೋಲ್‌ನ ಕಳುಹಿಸಿದ್ದರು. ಅದನ್ನ ನೋಡಬೇಕು ಹಾಗೆ ಎಂಜಾಯ್ ಮಾಡಬೇಕು ಅಷ್ಟೆ. ನಾನು ಖುಷಿಯಾಗಿರುವೆ. ಕೆಲವೊಂದು ಕ್ಷಣ ಈ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದ್ರೆ ಒಳ್ಳೆಯದು. ಆರಂಭದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದರು ಅನ್ನೋ ಭಯ ಇತ್ತು ಆದರೆ ಈಗ ಯಾವಾಗಲೂ ಹಾಗೆ ಆಗುತ್ತಿರುವ ಕಾರಣ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಿಂಗಳುಗಳಿಂದಲ್ಲ ಇದು ವರ್ಷಗಳಿಂದ ನಡೆಯುತ್ತಿದೆ. ನಾನು ಹಾಕುತ್ತಿರುವ ಶ್ರಮಕ್ಕೆ ಮತ್ತು ಸಿನಿಮಾಗಳನ್ನು ನೋಡಿದ ಮೇಲೆ ಯಾರಿಗೂ ನನ್ನನ್ನು ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ. ಈಗ ಖುಷಿಯಾಗಿರುವೆ. ಆ ಭಯ ನನಗೆ ಇಲ್ಲ. ಎಲ್ಲಾದಕ್ಕೂ ಓಪನ್ ಆಗಿ ಒಪ್ಪಿಕೊಳ್ಳುತ್ತಿರುವೆ ನನ್ನ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗುತ್ತಿದೆ. ಜನರ ಅಭಿಪ್ರಾಯ ಮತ್ತು ಟ್ರೋಲ್  ಮಾಡುವುದು ನನ್ನ ಕೈಯಲ್ಲಿ ಇಲ್ಲ. ನಾನು ಫ್ಲೋನಲ್ಲಿ ನಡೆಯುತ್ತಿರುವೆ' ಎಂದು ಕಾರ್ತಿಕ್ ಆರ್ಯನ್ ಮಾತನಾಡಿದ್ದಾರೆ.

Bhool Bhulaiyaa 2: ಕಾರ್ತಿಕ್ ಆರ್ಯನ್‌ಗೆ ಚಪ್ಪಾಳೆ ಜೊತೆ ಗಿಫ್ಟ್ಸ್!

ಕಾರ್ತಿಕ್ ಸಂಭಾವನೆ: 

ಸರಣಿ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಸಿನಿಮಾ ಮೂಲಕ ಕೊಂಚ ಧೈರ್ಯ ತುಂಬಿದ್ದರು. ಸಾಲು ಸಾಲು ಸೋಲಿನ ಬಳಿಕ ಭೂಲ್ ಭುಲೈಯಾ-2 ಉತ್ತಮ ಕಲೆಕ್ಷನ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕಾರ್ತಿಕ್ ಆರ್ಯನ್ ಸಿನಿಮಾ 171.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ನಟ ಕಾರ್ತಿಕ್ ಆರ್ಯನ್ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ಸಿನಿಮಾ ಸಕ್ಸಸ್ ಆದ ಬಳಿಕ ಕಲಾವಿದರು ಸಂಭಾವನೆ ಏರಿಸಿಕೊಳ್ಳುವುದು ಸಹಜ. ಅದರಂತೆ ಕಾರ್ತಿಕ್ ಕೂಡ ದುಬಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕಾರ್ತಿಕ್ ಸಿನಿಮಾವೊಂದಕ್ಕೆ 35ರಿಂದ 40 ಕೋಟಿ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 
 

Follow Us:
Download App:
  • android
  • ios