ಕನ್ನಡದ ನಟಿ ಶ್ರೀಲೀಲಾ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಪ್ರೇಮದಲ್ಲಿದ್ದಾರೆ ಎಂಬ ವದಂತಿಗಳಿವೆ. ಇತ್ತೀಚೆಗೆ, ಕಾರ್ತಿಕ್ ತಾಯಿ, "ನಮ್ಮ ಮನೆಗೆ ವೈದ್ಯೆ ಸೊಸೆಯಾಗಲಿದ್ದಾಳೆ" ಎಂದು ಹೇಳುವ ಮೂಲಕ ಈ ಸಂಬಂಧವನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ. ಶ್ರೀಲೀಲಾ ವೈದ್ಯಕೀಯ ಪದವಿ ಓದುತ್ತಿದ್ದು, ಆಕೆ ಕಾರ್ತಿಕ್ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ವದಂತಿಗಳಿಗೆ ಪುಷ್ಠಿ ನೀಡಿದೆ.
ಮುಂಬೈ (ಮಾ.11): ಕನ್ನಡದ ಹಲವು ನಟಿಯರು ಈಗಾಗಲೇ ಬಾಲಿವುಡ್‌ನ ನಟರು ಹಾಗೂ ಉದಗ್ಯಮಿಗಳನ್ನು ವರಿಸಿದ್ದಾರೆ. ಅದೇ ಸಾಲಿಗೆ ಇದೀಗ ಮತ್ತೊಬ್ಬ ನಟಿ ಸೇರಲಿದ್ದಾರೆ. ಈಗಾಗಲೇ ಕನ್ನಡತಿ ನಟಿ ಶ್ರೀಲೀಲಾ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೀಗ ಸ್ವತಃ ಕಾರ್ತಿಕ್ ಅವರ ತಾಯಿಯೇ ನಮ್ಮನೆಗೆ ಡಾಕ್ಟರ್ ಸೊಸೆ ಆಗಲಿದ್ದಾಳೆ ಎಂದು ಹೇಳುವ ಮೂಲಕ ಅವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
2025ರ ಐಫಾ (iifa) ಅವಾರ್ಡ್ ಕಾರ್ಯಕ್ರಮದಲ್ಲಿ ನಟ ಕಾರ್ತಿಕ್ ಕಾರ್ಯನ್ ಅವರ ತಾಯಿಗೆ ಭಾವಿ ಸೊಸೆಯ ಬಗ್ಗೆ ಕೇಳಿದಾಗ, ಅವರು 'ಕುಟುಂಬದ ಬೇಡಿಕೆ ಒಳ್ಳೆಯ ವೈದ್ಯೆ ಆಗಿದೆ' ಎಂದು ಹೇಳಿದ್ದಾರೆ. ಈ ಮೂಲಕ ಎಂಬಿಬಿಎಸ್ ಓದುತ್ತಿರುವ ನಟಿ ಶ್ರೀಲೀಲಾ ಅವರೇ ನಮ್ಮನೆ ಸೊಸೆ ಆಗಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಈಗಾಗಲೇ ಕಾರ್ತಿಕ್ ಆರ್ಯನ್ ಶ್ರೀಲೀಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದು, ಅವರ ತಾಯಿ ಅವರ ಸಂಬಂಧವನ್ನು ದೃಢಪಡಿಸಿದ್ದಾರೆ.
ಕಾರ್ತಿಕ್ ಅವರ ಆಶಿಕಿ-3 ಸಹನಟಿ ಶ್ರೀಲೀಲಾ ವೈದ್ಯಕೀಯ ಪದವಿ ಅಭ್ಯಾಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ನಡುವೆ ಸಂಬಂಧಗಳು ಇವೆಯೇ ಎಂಬ ವದಂತಿಗೆ ಸ್ಪಷ್ಟನೆ ಸಿಕ್ಕಂತಾಗಿದೆ. ಶ್ರೀಲೀಲಾ ಇತ್ತೀಚೆಗೆ ಕಾರ್ತಿಕ್ ಜೊತೆ ಆಪ್ತ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಇದು ಅವರ ಪ್ರೀತಿ-ಪ್ರೇಮ ಪ್ರಣಯದ ದೃಢೀಕರಣ ಆಗಿದೆಯೇ ಎಂಬ ಪ್ರಶ್ನೆ ಶುರುವಾಗಿದೆ.
ಇದನ್ನೂ ಓದಿ: 23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್ ನಟ Kartik Aaryan? ವೈರಲ್ ವಿಡಿಯೋದಲ್ಲಿ ಇದ್ದವರಾರು?
ಇತ್ತೀಚೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಪಾರ್ಟಿ ಮಾಡಲಾಗಿತ್ತು. ಕಾರ್ತಿಕ್ ಅರ್ಯನ್ ಸಹೋದರಿ ಕೃತಿಕಾ ಮೆಡಿಕಲ್ ರಂಗದಲ್ಲಿ ಮಾಡಿದ ಸಾಧನೆ ಸಲುವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಯಲ್ಲಿ ಕಾರ್ತಿಕ್ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಅವರು ʼಆಶಿಕಿ 3ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಾರಣದಿಂದ ಪಾರ್ಟಿಗೆ ಬಂದಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಈಗ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಈ ʼಕಿಸ್ʼ ಸಿನಿಮಾ ಬೆಡಗಿ ʼಪುಷ್ಪ 2ʼ ಚಿತ್ರದಲ್ಲಿಯೂ ಡ್ಯಾನ್ಸ್ ಮಾಡಿದ್ದರು. ಶ್ರೀಲೀಲಾ ಅವರ ಕೈಯಲ್ಲಿ ಮೂರು ತೆಲುಗು ಸಿನಿಮಾಗಳು, ಒಂದು ಹಿಂದಿ, ಒಂದು ತಮಿಳು ಸಿನಿಮಾ ಇವೆ.
