ಸಲ್ಮಾನ್ ಖಾನ್ ಜೊತೆ ಹಲವು ಚಿತ್ರದಲ್ಲಿ ನಾಯಕಿಯಾದ ಈ ಮುದ್ದು ಮೊಗದ ಪುಟಾಣಿ ಯಾರು?
ನಟ ಸಲ್ಮಾನ್ ಖಾನ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಈ ಬಾಲಿವುಡ್ ಚೆಲುವೆ ಯಾರು? ಬಾಲ್ಯದ ಫೋಟೋ ನೋಡಿ ಉತ್ತರ ಹೇಳುವಿರಾ?

ಹಿಂದಿ ಚಿತ್ರರಂಗದ ಚಲನಚಿತ್ರ ತಾರೆಯರ ಬಾಲ್ಯದ ಫೋಟೋಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಕಂಡುಬರುತ್ತದೆ. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಕಲಾವಿದರ ಬಾಲ್ಯದ ಫೋಟೋ (childhood photo) ಬಗ್ಗೆ ಸಾಕಷ್ಟು ಉತ್ಸಾಹವನ್ನು ತೋರಿಸುತ್ತಾರೆ. ಇದರಿಂದಾಗಿ ಈ ಸೆಲೆಬ್ರಿಟಿಗಳ (Celebrity) ಬಾಲ್ಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗುತ್ತಲೇ ಇರುತ್ತವೆ. ಚರ್ಚೆ ಆಗಲಿ ಎನ್ನುವ ಕಾರಣಕ್ಕಾಗಿಯೇ ಹೆಚ್ಚಿನ ತಾರೆಯರು ತಮ್ಮ ಬಾಲ್ಯದ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಈಗ ಅಂಥದ್ದೇ ಒಂದು ಫೋಟೋ ವೈರಲ್ ಆಗಿದ್ದು, ಚಿತ್ರ ರಸಿಕರ ತಲೆಗೆ ಹುಳ ಬಿಡಲಾಗಿದೆ.
ಬಾಲಿವುಡ್ನ ಖ್ಯಾತ ನಟಿಯೊಬ್ಬರು ಬಾಲ್ಯದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (social media)ಹಂಚಿಕೊಂಡಿದ್ದು, ಅದೀಗ ವೈರಲ್ ಆಗುತ್ತಿದೆ. ಈ ನಟಿ ಯಾರು ಎಂಬ ಬಗ್ಗೆ ಹಲವಾರು ಸುಳಿವುಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಮಹತ್ವದ ಸುಳಿವು ಎಂದರೆ ಈ ನಟಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಒಂದಾಗಿದೆ.
ಹಾಗಿದ್ದರೆ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ? ಅಂದಹಾಗೆ, ಸಲ್ಮಾನ್ ಖಾನ್ ಅನೇಕ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಸಲ್ಮಾನ್ ಈ ನಟಿಯೊಂದಿಗೆ ದಶಕಗಳಿಂದ ಕೆಲಸ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಟಿ ಯಾರಿರಬಹುದು ಎಂದು ಸ್ವಲ್ಪ ಊಹಿಸಿ. ನಿಮ್ಮ ತಲೆಗೆ ಬಂದಿರುವ ನಟಿಯರ ಜೊತೆ ಈ ಬಾಲ್ಯದ ಫೋಟೋ ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನು ನೋಡಿ. ಅಷ್ಟಕ್ಕೂ ಈ ನಟಿ (actress) ಈಗ ಇರುವುದಕ್ಕೂ, ಈ ಬಾಲ್ಯದ ಫೋಟೋಗೂ ಸಾಕಷ್ಟು ವ್ಯತ್ಯಾಸವಿದೆ.
ಆಸ್ಕರ್ ರೇಸ್ನಲ್ಲಿ ದಿ ಕಾಶ್ಮೀರ್ ಫೈಲ್ಸ್: 'Propaganda' ಎಂದವರಿಗೆ ಕಪಾಳಮೋಕ್ಷ
ಇಷ್ಟೆಲ್ಲಾ ಹೇಳಿದ ಮೇಲೆ ಈ ನಟಿಯ ಹೆಸರು ತಿಳಿಯುವ ಉತ್ಸಾಹ ಹೆಚ್ಚಿದೆ ಅಲ್ಲವೆ? ಇಷ್ಟು ಹೇಳಿದ ಮೇಲೂ ನಿಮಗೆ ಗೊತ್ತಾಗಲಿಲ್ಲ ಎಂದರೆ ತೀರಾ ಸುಲಭದ ಹಿಂಟ್ ಕೊಡುತ್ತಿದ್ದೇವೆ ಕೇಳಿ. ವಾಸ್ತವವಾಗಿ ಸಲ್ಮಾನ್ ಖಾನ್ ಮತ್ತು ಫೋಟೋದಲ್ಲಿ ಇರುವ ಈ ನಟಿ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 1991ರಲ್ಲಿ ‘ಜಾಗೃತಿ’ ಚಿತ್ರದ ಮೂಲಕ ಆರಂಭವಾಯಿತು. ಇದರ ನಂತರ, ಸಲ್ಮಾನ್ ಮತ್ತು ಕರಿಷ್ಮಾ (Karishma Kapoor) ಅವರು 'ಅಂದಾಜ್ ಅಪ್ನಾ ಅಪ್ನಾ, ಜುಡ್ವಾ, ಜೀತ್, ನಿಶ್ಚಯ್, ಬಿವಿ ನಂಬರ್ ಒನ್, ಹಮ್ ಸಾಥ್ ಸಾಥ್ ಹೇ, ಚಲ್ ಮೇರೆ ಭಾಯ್ ಮತ್ತು ದುಲ್ಹನ್ ಹಮ್ ಲೇ ಜಾಯೇಂಗೆ' ನಂತಹ ಅನೇಕ ಉತ್ತಮ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ನಟಿ ಶೀಘ್ರದಲ್ಲಿಯೇ 'ಬ್ರೌನ್' ವೆಬ್ ಸರಣಿಯೊಂದಿಗೆ ಪುನರಾಗಮನ ಮಾಡಲಿದ್ದಾರೆ.
ಇಷ್ಟೆಲ್ಲಾ ಹೇಳಿದ ಮೇಲೆ ಈಕೆ ಯಾರು ಎಂದು ಹೇಳುವ ಅವಶ್ಯಕತೆಯೇ ಇಲ್ಲ ಎನ್ನಬಹುದೇನೋ. ನಿಜ ನೀವು ಅಂದುಕೊಂಡಂತೆ ಈ ಫೋಟೋ ಹಿಂದಿ ಚಿತ್ರರಂಗದ ಖ್ಯಾತ ನಟಿ ಕರಿಷ್ಮಾ ಕಪೂರ್ ಅವರ ಬಾಲ್ಯದ್ದು. ಬಹಳ ಹಿಂದೆಯೇ, ಕರಿಷ್ಮಾ ತಮ್ಮ ಬಾಲ್ಯದ ಈ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಶೇರ್ ಮಾಡಿಕೊಂಡಿದ್ದರು. ಕರಿಷ್ಮಾ ಕಪೂರ್ ಈಗಲೂ ಮುದ್ದಾಗಿಯೇ ಇದ್ದರೂ ಈ ಬಾಲ್ಯದ ಫೋಟೋದಲ್ಲಿ ಹೆಚ್ಚಿನ ರೀತಿಯಲ್ಲಿ ವಿಭಿನ್ನರಾಗಿ ಕಾಣಿಸುತ್ತಾರೆ.
'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್ನ ಭಯಾನಕ ಭವಿಷ್ಯ!
1991 ರಲ್ಲಿ 'ಪ್ರೇಮ್ ಕೈದಿ' ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಕರಿಷ್ಮಾ ಪದಾರ್ಪಣೆ ಮಾಡಿದ್ದರು. ರಾಜಾ ಹಿಂದೂಸ್ತಾನಿ, 'ದಿಲ್ ತೋ ಪಾಗಲ್ ಹೈ' ಚಿತ್ರಗಳ ಮೂಲಕ ಭರ್ಜರಿ ಸದ್ದು ಮಾಡಿದ್ದ ನಟಿ ಇವರು. ಸದ್ಯ ಇವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಅಂದಹಾಗೆ ಕರಿಷ್ಮಾ ಅವರಿಗೆ ಈಗ 47 ವರ್ಷ ವಯಸ್ಸು. ಲೋಲೋ ಎಂದು ಮುದ್ದಿನಿಂದ ಕರೆಯಲ್ಪಡುವ ಈಕೆಯ ವರ್ಷ 47 ಆದರೂ ಸೌಂದರ್ಯ (beauty) ಕಡಿಮೆ ಏನೂ ಆಗಲಿಲ್ಲ. ಅವರ ಹೊಳೆಯುವ ಚರ್ಮವು ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಿದೆ.