ಬಾಲಿವುಡ್ ನಟಿ ಕರೀನಾ ಕಪೂರ್ ಮಗ ತೈಮೂರ್ ಅಲಿ ಖಾನ್ ಪಟೌಡಿ ಸಿಕ್ಕಾಪಟ್ಟೆ ಹೈಪ್ ಪಡೆದಿರೋ ಸ್ಟಾರ್ ಕಿಡ್. ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್‌ನ 4 ವರ್ಷದ ಮಗನಿಗೆ ಮಾಧ್ಯಮ ಕಂಡ್ರೆ ಸಿಕ್ಕಾಪಟ್ಟೆ ಕೋಪ. ಇದು ಇತ್ತೀಚಿನ ಹಲವು ಘಟನೆಯಲ್ಲಿ ಸಾಬೀತಾಗಿದೆ.

ತನ್ನ ಫೋಟೋ ತೆಗೆಯೋದಂದ್ರೆ ಇರಿಟೇಟ್ ಆಗೋ ತೈಮೂರ್ ನೋ ಫೊಟೋಸ್ ಎಂದು ಹಲವು ಬಾರಿ ಕಿರುಚಿದ್ದಾನೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಮತ್ತೆ ಸಿಟ್ಟಾಗಿದ್ದಾನೆ ತೈಮೂರ್.

ಕರೀನಾ ಮಗನಿಗೆ ಮೀಡಿಯಾ ಅಂದ್ರೆ ಕೋಪಾನಾ..? ಕ್ಯಾಮೆರಾ ನೋಡಿ ತೈಮೂರ್ ಹೇಳಿದ್ದೇನು

ಅಮ್ಮನ ಜೊತೆ ನಡೆದುಕೊಂಡು ಬರ್ತಿದ್ದ ತೈಮೂರ್ ಮೀಡಿಯಾ ನೋಡುತ್ತಿದ್ದಂತೆ ನಾಟ್ ಎಲೌಡ್ ಎಂದು ಕಿರುಚಿದ್ದಾನೆ. ಕರೀನಾ ಮುಂದೆ ಹೋದರೂ ಹಿಂದೆ ಉಳಿದು ತೈಮೂರ್ ನಾಟ್ ಎಲೌಡ್ ಎಂದು ಕ್ಯಾಮೆರಾ ಕಡೆ ನೋಡಿ ಕಿರುಚಿದ್ದಾನೆ. ನಂತರ ಕರೀನಾ ಬಲವಂತವಾಗಿ ತೈಮೂರ್ ಕೈಹಿಡಿದು ಒಳಗೆ ಕರೆದೊಯ್ದಿದ್ದಾರೆ.

ಅಂತೂ ತೈಮೂರ್‌ಗೆ ಫೋಟೋ, ಪಾಪ್ಪರಾಝಿ ಅಂದ್ರೆ ಇಷ್ಟವಾಗಲ್ಲ ಅನ್ನೋದು ಇತ್ತೀಚಿನ ಕೆಲವು ಘಟನೆಗಳಿಂದಲೇ ಗೊತ್ತಾಗಿದೆ. ಮಗನನ್ನು ಸುಮ್ಮನೆ ಸಂಭಾಳಿಸಿ ಕರೆದೊಯ್ತಾರೆ ಬೇಬೋ.