ಮಾಜಿ ಪ್ರೇಮಿಗಳಾದ ಕರೀನಾ ಕಪೂರ್ ಖಾನ್ ಹಾಗೂ ಶಾಹೀದ್ ಕಪೂರ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರ ಫೋಟೋ ನೋಡಿದ ಫ್ಯಾನ್ಸ್, ಹಳೆ ಸಿನಿಮಾ ಬಗ್ಗೆ ಮಾತನಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ರೆ ಎಷ್ಟು ಚೆನ್ನಾಗಿತ್ತು ಎನ್ನುತ್ತಿರುವ ಫ್ಯಾನ್ಸ್, ಮದುವೆಯಾಗಿದ್ರೆ ಇವರದ್ದು ಸೂಪರ್ ಜೋಡಿಯಾಗಿರುತ್ತಿತ್ತು ಎಂದಿದ್ದಾರೆ.
ಒಂದೇ ಫ್ರೇಮ್ (Frame) ನಲ್ಲಿ ಹಳೆ ಲವರ್ (old lover) ನೋಡಿದಾಗ ಫ್ಯಾನ್ಸ್ ಕಣ್ಣು ದೊಡ್ಡದಾಗುತ್ತೆ. ಈಗ ಅವರಿಬ್ಬರ ಸಂಬಂಧ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತೆ. ಅದ್ರಲ್ಲೂ ಸೆಲೆಬ್ರಿಟಿ ಮಾಜಿ ಪ್ರೇಮಿಗಳು ಮುಖಾಮುಖಿಯಾದಾಗ ಮುಂದೇನಾಗುತ್ತೆ ಎಂಬ ಪ್ರಶ್ನೆ ಇದ್ದೇ ಇರುತ್ತೆ. ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ (Bollywood Bebo Kareena Kapoor Khan) ಹಾಗೂ ಬಾಲಿವುಡ್ ನಟ ಶಾಹಿದ್ ಕಪೂರ್ (Bollywood Actor Shahid Kapoor) ಕೂಡ ಹಳೆ ಪ್ರೇಮಿಗಳು. ಅವರಿಬ್ಬರನ್ನು ಈಗ ಒಂದೇ ಫ್ರೇಮ್ ನಲ್ಲಿ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಕ್ಕಿದೆ. ಇಬ್ಬರು ತಮ್ಮ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಖಾನ್ ಮುಂದಿನ ಸೀಟಿನಲ್ಲಿ ಕುಳಿತಿದ್ರೆ ಅವರ ಹಿಂದಿನ ಸೀಟಿನಲ್ಲಿ ಶಾಹಿದ್ ಕಪೂರ್ ಕುಳಿತಿದ್ರು. ಇಬ್ಬರೂ ಪರಸ್ಪರ ಮಕ್ಕಳ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ರಾ, ಚಿಯರ್ ಮಾಡಿದ್ರಾ? ಅದಕ್ಕೆ ಉತ್ತರ ಇಲ್ಲಿದೆ.
ಬಾಲಿವುಡ್ ಕಲಾವಿದರು ಹಾಗೂ ಸೆಲೆಬ್ರಿಟಿಗಳ ಬಹುತೇಕ ಕಿಡ್ಸ್, ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ (Ambani International School)ನಲ್ಲಿ ಓದುತ್ತಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆಯ ಮೊದಲು ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಅದ್ಧೂರಿ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಕಾರ್ಯಕ್ರಮ ನೋಡಲು ಸ್ಕೂಲ್ ಗೆ ಬಂದಿದ್ರು. ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಕೂಡ ಕಾರ್ಯಕ್ರಮ ವೀಕ್ಷಣೆಗೆ ಬಂದು ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಇಬ್ಬರ ಮಕ್ಕಳು ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಸೀಟ್ ಪರಸ್ಪರ ಹತ್ತಿರದಲ್ಲಿಯೇ ಇದ್ದ ಕಾರಣ ಇಬ್ಬರು ಒಂದೇ ಫ್ರೇಮ್ ನಲ್ಲಿ ಫೋಟೋಕ್ಕೆ ಸೆರೆಯಾಗಿದ್ದಾರೆ. ಬೆಬೋ ಕಾರ್ಯಕ್ರಮವನ್ನು ಫುಲ್ ಎಂಜಾಯ್ ಮಾಡಿದ್ದಾರೆ. ತಮ್ಮ ಮಕ್ಕಳನ್ನು ಅವರು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಶಾಹಿದ್ ಕೂಡ ಚಪ್ಪಾಳೆ ತಟ್ಟಿ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇಬ್ಬರನ್ನು ಒಂದೇ ಫೋಟೋದಲ್ಲಿ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವರ ಹಳೆ ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ. ಇಬ್ಬರು ಈಗ್ಲೂ ಸೂಪರ್ ಜೋಡಿ, ಮದುವೆ ಆಗ್ಬೇಕಿತ್ತು, ಮತ್ತೊಂದು ಸಿನಿಮಾ ಮಾಡ್ಬೇಕಿತ್ತು ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ.
ನೀವು ಬುದ್ಧಿವಂತರಾಗಿದ್ರೆ ಚಿತ್ರಮಂದಿರದಿಂದ ಈಗಲೇ ಎದ್ದೋಗಿ; ದಡ್ಡರಾಗಿದ್ದರೆ?
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ 2007 ರಲ್ಲಿ ಜಬ್ ವಿ ಮೆಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಶುರು ಮಾಡಿದ್ರು. ರೀಲ್ ಮತ್ತು ರಿಯಲ್ ಎರಡರಲ್ಲೂ ಈ ಜೋಡಿಯನ್ನು ಫ್ಯಾನ್ಸ್ ಇಷ್ಟಪಟ್ಟಿದ್ದರು. ಆದ್ರೆ ಸಿನಿಮಾ ತೆರೆಗೆ ಬರುವ ಮುನ್ನವೇ ಈ ಜೋಡಿ ಮಧ್ಯೆ ಬ್ರೇಕ್ ಅಪ್ ಆಗಿತ್ತು. ಆ ನಂತ್ರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಹಾಗೂ ಶಾಹಿದ್ ಇದ್ರೂ ಒಂದೇ ಫ್ರೇಮ್ ನಲ್ಲಿ ಇಬ್ಬರು ಕಾಣಿಸಿಕೊಂಡಿಲ್ಲ. ನಂತ್ರ ಕರೀನಾ ಕಪೂರ್, ಸೈಫ್ ಅಲಿ ಖಾನ್ ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಶಾಹಿದ್ ಕಪೂರ್ ಕೂಡ ಮೀರಾ ರಜಪೂತ್ ಮದುವೆಯಾಗಿದ್ದು, ಪತ್ನಿ ಹಾಗೂ ಮಕ್ಕಳ ಜೊತೆ ಖುಷಿಯಾಗಿದ್ದಾರೆ. ಇಬ್ಬರ ದಾರಿ ಈಗ ಸಂಪೂರ್ಣ ಬೇರೆಯಾಗಿದೆ. ಅಂಬಾನಿ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಶಾರುಖ್ ಖಾನ್, ಶಾಹಿದ್ ಕಪೂರ್ ಮುಂತಾದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
