ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಮ್ಯಾಕ್ಸ್ ಚಿತ್ರದ ಮೂಲಕ ಧಮಾಲ್ ಮಾಡಲು ಸಿದ್ಧವಾಗಿದ್ದಾರೆ. ಪ್ರಚಾರದಲ್ಲಿ ಬ್ಯುಸಿ ಇರುವ ಸುದೀಪ್,, ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ (Kiccha Sudeep) ಅಭಿನಯದ ಮ್ಯಾಕ್ಸ್ ಚಿತ್ರ (Max movie) ಎಲ್ಲೆಡೆ ಸದ್ದು ಮಾಡ್ತಿದೆ. ಸಿನಿಮಾ ಇದೇ ಡಿಸೆಂಬರ್ 25ರಂದು ತೆರೆಗೆ ಅಪ್ಪಳಿಸಲಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ (action thriller movie) ವೀಕ್ಷಿಸಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್, ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ ಜೊತೆ ಬಿಗ್ ಬಾಸ್ ಹೋಸ್ಟ್ ಮಾಡ್ತಿರುವ ಸುದೀಪ್, ಬಿಗ್ ಬಾಸ್ 11ರ ಸ್ಪರ್ಧಿಗಳ ಬಗ್ಗೆಯೂ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ಉಗ್ರಂ ಮಂಜು (Ugram Manju) ಕೂಡ ನಟಿಸಿದ್ದಾರೆ. ಉಗ್ರಂ ಮಂಜು ಸಿನಿಮಾದಲ್ಲಿ ಹೆಚ್ಚು ಅಬ್ಬರಿಸಿದ್ದಾರೆ ಎನ್ನುವ ಮಾತಿದೆ. ಸುದೀಪ್ ಗಿಂತ ಮಂಜು ಆರ್ಭಟ ಮ್ಯಾಕ್ಸ್ ನಲ್ಲಿ ಹೆಚ್ಚಿದೆ ಎಂಬ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ.
ಉಗ್ರಂ ಮಂಜು ಬಗ್ಗೆ ಸುದೀಪ್ ಹೇಳಿದ್ದೇನು? : ಉಗ್ರಂ ಮಂಜು ಸಿನಿಮಾದಲ್ಲಿ ಅಬ್ಬರಿಸಿದ್ದಾರೆ, ನಾನು ಒಳಗೆ ಇಳಿಸ್ತಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ನನ್ನ ಮುಂದೆ ಅಥವಾ ಪಾತ್ರದಲ್ಲಿ ಅಬ್ಬರಿಸ್ತಿದ್ದಾರೆ ಅಂದ್ರೆ ನಾನು ಅಬ್ಬರ ಕಡಿಮೆ ಮಾಡಿದ್ದೇನೆ ಅಂದಲ್ಲ, ಅವರಿಗೆ ಆರ್ಭಟಿಸಲು ಬಿಟ್ಟಿದ್ದೇನೆ ಎಂದರ್ಥ. ಸಿನಿಮಾಕ್ಕೆ ಇದ್ರ ಅವಶ್ಯಕತೆ ಇತ್ತು, ಹಾಗಾಗಿ ಅಬ್ಬರಿಸಲು ಬಿಟ್ಟಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ರಾಜಮನೆತನದ ಬಂಗಲೆಯಲ್ಲೇ ಸೈಫ್ ಅಲಿ ಖಾನ್ ವಾಸ: ನಟನ ಆಸ್ತಿ ಕೇಳಿದ್ರೆ ನೀವೇ ಶಾಕ್?
ವೈಯಕ್ತಿಕವಾಗಿ ಉಗ್ರಂ ಮಂಜು ಮುಂದೆ ಈ ಪ್ರಶ್ನೆ ಇಟ್ರೆ ಓಡೋಗ್ತಾರೆ. ಇಲ್ಲ ಸರ್, ಆತರ ಏನೂ ಇಲ್ಲ ಎನ್ನುತ್ತಾರೆ ಎಂದ ಸುದೀಪ್, ಉಗ್ರಂ ಮಂಜು ಅವರನ್ನು ಹೊಗಳಿದ್ದಾರೆ. ಅವರು ಅದ್ಭುತ ನಟ. ಹಾಗಾಗಿಯೇ ಅವರನ್ನು ಆ ಪಾತ್ರಕ್ಕೆ ಹಾಕಿಕೊಂಡಿದ್ದೇವೆ ಎಂದು ಸುದೀಪ್ ಹೇಳಿದ್ದಾರೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಏನು ಮಾಡ್ತಿದ್ದಾರೆ ಎಂದು ಸುದೀಪ್ ಪ್ರಶ್ನೆ ಕೂಡ ಮಾಡಿದ್ದಾರೆ. ಸಿನಿಮಾದಲ್ಲಿ ಉಗ್ರಂ ಅಬ್ಬರಿಸಿದ್ರು ನಿಜ ಆದ್ರೆ ಒಳಗೆ ಏನು ಮಾಡ್ತಿದ್ದಾರೆ, ಸೇವೆ ಮಾಡ್ಕೊಂಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.
ಉಗ್ರಂ ಮಂಜು, ಬಿಗ್ ಬಾಸ್ ಮನೆಯಲ್ಲಿ ಆರಂಭದ ವಾರಗಳಲ್ಲಿ ಅಧ್ಬುತ ಆಟ ಪ್ರದರ್ಶಿಸಿದ್ದರು. ಅವರ ಆಟಕ್ಕೆ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಹೋಗ್ತಾ ಹೋಗ್ತಾ ಗೌತಮಿ ಜೊತೆಯಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ಉಗ್ರಂ ಮಂಜು, ಎಲ್ಲೋ ಕಳೆದು ಹೋದ್ರೂ ಎನ್ನುವ ಮಾತುಗಳು ಕೇಳಿ ಬಂದಿವೆ. ಸುದೀಪ್ ಕೂಡ ಮೂರ್ನಾಲ್ಕು ಬಾರಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಗೌತಮಿ ಈಗಾಗಲೇ ತಮ್ಮನ್ನು ತಿದ್ದಿಕೊಂಡಿದ್ರೂ ಉಗ್ರಂ ಮಂಜು ಮಾತ್ರ ಸುಧಾರಿಸಿದಂತೆ ಕಾಣ್ತಿಲ್ಲ. ಆಟದಿಂದ ಹಿಡಿದು ಮನೆಯ ಪ್ರತಿಯೊಂದು ಕೆಲಸದಲ್ಲೂ ಮಂಜು ಗೌತಮಿಗೆ ಬೆಂಬಲ ನೀಡ್ತಿದ್ದಾರೆ. ತಮ್ಮ ತಪ್ಪುಗಳನ್ನು ಗೌತಮಿ ಸುಧಾರಿಸ್ತಾರೆ ಎಂಬುದೇ ಮಂಜು ವಾದ.
ತಂದೆ ಮನೆ ಬಿಟ್ಟು ಹೋದಾಗ ತಾಯಿಗೆ ಆಸರೆಯಾಗಿದ್ರು ಮಲೈಕಾ ಅರೋರಾ: ಬಾಲ್ಯದ
ಸುದೀಪ್ ಈ ಉತ್ತರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸುದೀಪ್ ಮುಂದೆ ಪ್ರಶ್ನೆ ಕೇಳುವಾಗ ನೂರು ಬಾರಿ ಯೋಚನೆ ಮಾಡ್ಬೇಕು ಅಂದಿದ್ದಾರೆ. ಸುದೀಪ್ ಮೀಸೆಯನ್ನು ಅನೇಕರು ಇಷ್ಟಪಟ್ಟಿದ್ದಾರೆ. ಸುದೀಪ್ ಮಾತನ್ನು ಒಪ್ಪಿಕೊಂಡಿರುವ ವೀಕ್ಷಕರು, ಮಂಜು ಹಾಗೂ ಗೌತಮಿ ಟಾಪ್ ಐದರಲ್ಲಿರ್ತಾರೆ ಎಂಬುದು ಸುಳ್ಳು ಎನ್ನುತ್ತಿದ್ದಾರೆ.
ಇತ್ತ ಇಯರ್ ಆಂಡ್ ನಲ್ಲಿ ಸುದೀಪ್ ವೀಕ್ಷಕರಿಗೆ ದೊಡ್ಡ ಗಿಫ್ಟ್ ನೀಡಲು ಸಿದ್ಧವಾಗಿದ್ದಾರೆ. ಸಿನಿಮಾ ಸೇರಿದಂತೆ ತಮ್ಮ ಫ್ಯಾಮಿಲಿ ವಿಷ್ಯಗಳನ್ನೂ ಅವರು ಸಂದರ್ಶನದಲ್ಲಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ನಂತ್ರ ಸುದೀಪ್ ಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡಿದ್ದು, ಟೀಸರ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಾತಿಕೇಯ ಚಿತ್ರವನ್ನು ನಿರ್ದೇಶಿಸಿದ್ದು, ಜನರಿಗೆ ಸಿನಿಮಾ ಎಂಟರ್ಟೈನ್ ಮೆಂಟ್ ನೀಡುತ್ತ ಕಾದು ನೋಡಬೇಕಿದೆ.