ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. "ಬುದ್ಧಿವಂತರಾದರೆ ಹೊರಡಿ, ದಡ್ಡರಾದರೆ ಉಳಿಯಿರಿ" ಎಂಬ ಪರದೆಯ ವಾಕ್ಯಗಳು ಗಮನ ಸೆಳೆದಿವೆ. ಒಂಬತ್ತು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನದ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆ-ನಿರ್ದೇಶನದ ಯುಐ (UI) ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎಲ್ಲಾ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಜಗತ್ತಿನ ಅತ್ಯಂತ ನಿರೀಕ್ಷೆ ಹೊಂದಿರುವ ಸಿನಿಮಾಗಳ ಪಟ್ಟಿಯಲ್ಲಿ ಕೂಡ ಉಪೇಂದ್ರ ಅವರ ಯುಐ ಸಿನಿಮಾ ಸ್ಥಾನ ಪಡೆದಿದೆ. ಭಾರೀ ನಿರೀಕ್ಷೆಯ ಸಿನಿಮಾವನ್ನು ಸಿನಿಪ್ರೇಮಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಇದೀಗ, ಸಿನಿಮಾ ಶುರುವಿಗಿಂತ ಮೊದಲು ಪರದೆಯಲ್ಲಿ ಮೂಡುವ ವಾಕ್ಯಗಳು ಎಲ್ಲರ ಗಮನ ಸೆಳೆದು ನಗು ಉಕ್ಕಿಸುತ್ತಿವೆ.
ಹೌದು, ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. 'ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಈಗಲೇ ಎದ್ದೋಗಿ, ದಡ್ಡರಾಗಿದ್ದರೆ ಪೂರ್ತಿ ಸಿನಿಮಾ ನೋಡಿ..' ಎಂದು ಸಿನಿಮಾ ಶುರುವಿಗಿಂತ ಮೊದಲು ಪರದೆಯಲ್ಲಿ ಮೂಡುವ ವಾಕ್ಯಗಳು ಎಲ್ಲರ ಗಮನ ಸೆಳೆದು ನಗು ಉಕ್ಕಿಸುತ್ತಿವೆ. ಅದನ್ನು ನೋಡಿದ ಮೇಲೆ ಕೂಡ ಯಾರೂ ಎದ್ದು ಹೋಗುತ್ತಿಲ್ಲ. ಅಂದರೆ, ಎಲ್ಲರೂ ದಡ್ಡರು ಎನ್ನಿಸಿಕೊಳ್ಳಲು ಸಿದ್ಧರಿದ್ದಾರೆ, ಆದರೆ ಎದ್ದು ಹೋಗಲಾರರು!
ಕಿಚ್ಚ ಸುದೀಪ್ ಬಿಗ್ ಬಾಸ್ ಶೋಗೆ 'ಟಾಟಾ ಬೈಬೈ' ಹೇಳಲು ಕಾರಣ ಇದು, ಮತ್ತೇನೂ ಇಲ್ಲ!
ಈ ಮೂಲಕ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ನಿರ್ದೇಶನದ ಈ ಯುಐ ಸಿನಿಮಾ ಕೂಡ ಎಂದಿನಂತೆ ಟಿಪಿಕಲ್ ಸ್ಟೈಲ್‌ನಲ್ಲಿ ಮೂಡಿ ಬಂದಿರುವ ಸಿನಿಮಾ ಎಂದು ಪ್ರೂವ್ ಮಾಡಿದ್ದಾರಾ? ಅದು ತಿಳಿಯಲು ಸಂಪೂರ್ಣ ಸಿನಿಮಾ ನೋಡಲೇಬೇಕು, ಅಥವಾ ನೋಡಿದವರು ಹೇಳಬೇಕು. ಅಷ್ಟೇ ಅಲ್ಲ, ಕ್ಯಾಮೆರಾ ಮೇಲೆ ನಿರ್ದೇಶಕರ ಟೋಪಿ ಇಟ್ಟು, ನಿರ್ದೇಶನ ಉಪೇಂದ್ರ ಎಂಬ ಟೈಟಲ್ ಕಾರ್ಡ್ ಬರುವಂತೆ ನೋಡಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಹುಳವನ್ನೇ ಇಲ್ಲಿ ಬಿಟ್ಟಿದ್ದಾರೆ ಉಪೇಂದ್ರ. ಸಿನಿಮಾವನ್ನು ಜನರು ಎಷ್ಟರಮಟ್ಟಿಗೆ ಇಷ್ಟಪಟ್ಟು ಗೆಲ್ಲಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
'ಉಪ್ಪಿ-2' ಸಿನಿಮಾ ನಂತರ ಉಪೇಂದ್ರ ಆಕ್ಷನ್ ಕಟ್ ಹೇಳಿರೋ ಸಿನಿಮಾ ಯುಐ. ಬರೋಬ್ಬರಿ 9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡಿರೋ ಸಿನಿಮಾ ಯುಐ. ಇದು ಐದು ಭಾಷೆಯಲ್ಲಿ ತೆರೆಗಪ್ಪಳಿಸಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಯುಐ ಅಬ್ಬರ ಪ್ರಾರಂಭವಾಗಿದೆ. ಕೆನಡಾ, ಅಮೆರಿಕಾ,ದುಬೈ ಮುಂತಾದ ಕಡೆಗಳಲ್ಲಿ ಕೂಡ ಯುಐ ಕ್ರೇಜ್ ಹೆಚ್ಚಾಗಿದೆ. ರೀಷ್ಮಾ ನಾಣಯ್ಯ ಅವರು ಉಪ್ಪಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಭಾರತದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಸಕ್ಸಸ್ ಹಿಂದಿನ ಗುಟ್ಟು ರಿವೀಲ್ ಆಯ್ತು!
ಇಂದು ಬೆಳಗ್ಗೆ 6.30ರಿಂದಲೇ ಹಲವು ಥಿಯೇಟರ್ ಗಳಲ್ಲಿ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ಸಂತೋಷ್ ಥಿಯೇಟರ್‌ನಲ್ಲಿ ಬೆಳಗಿನ 6.30ರಿಂದ ಶೋ ಪ್ರಾರಂಭವಾಗಿದೆ. ವಿಶ್ವದಾದ್ಯಂತ 2000 ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ನಗರದ ವೀರೇಶ್ ಥಿಯೇಟರ್‌ನಲ್ಲಿ 6.30ಕ್ಕೆ ಪ್ರದರ್ಶನ ಆರಂಭವಾಗಿದೆ. ವೀರೇಶ್ ಥಿಯೇಟರ್‌ನಲ್ಲಿ ಬೆಳಗಿನ 6.30ರ ಶೋ ಹಾಗೂ 10 ಗಂಟೆ ಮಾರ್ನಿಂಗ್ ಶೋ ಹೌಸ್ ಫುಲ್ ಆಗಿವೆ. ಮುಂದೇನು, ಯಾವೆಲ್ಲ ದಾಖಲೆಗಳು ಮೂಲೆಗುಂಪಾಗಲಿದೆ ಎಂಬುದನ್ನು ಕಾಲ ನಿರ್ಧರಿಸಲಿದೆ.
