ಜೆಹ್ ಖಾನ್ ಫೋಟೋ ಸಿಗೋದು ಭಾರೀ ಕಮ್ಮಿ ಮಗನ ಮುಖ ಇಷ್ಟೊಂದು ಅಡಗಿಸ್ತಿರೋದ್ಯಾಕೆ ಕರೀನಾ ? ಬೇಬೋ ಕೊಟ್ಟ ಕಾರಣ ಇದು
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಈಗಾಗಲೇ ಜೆಹ್ ಖಾನ್‌ಗೆ 6 ತಿಂಗಳಾಯಿತು. ಆದರೆ ಸೈಫೀನಾ ಎರಡನೇ ಮಗುವಿನ ಫೋಟೋ ಯಾರಿಗೂ ಸಿಕ್ಕಿಲ್ಲ. ಇಷ್ಟು ದಿನ ಮಗನ ಫೋಟೋ ಶೇರ್ ಮಾಡಿಲ್ಲ ಬಾಲಿವುಡ್‌ನ ಈ ಜೋಡಿ. ಗರ್ಭಿಣಿಯಾಗಿದ್ದಾಗ ಸಾಕಷ್ಟು ಫೋಟೋ ಶೇರ್ ಮಾಡುತ್ತಿದ್ದ ಕರೀನಾ ಹೆರಿಗೆ ನಂತರ ಮಗುವಿನ ಫೋಟೋ ತೋರಿಸಿಲ್ಲ. ಮಾಧ್ಯಮಗಳಿಗೂ ಕಂದನ ಫೋಟೋ ಸಿಕ್ಕಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಜೆಹ್‌ನ ಚಿಕ್ಕದೊಂದು ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಮಗುವಿನ ಮುಖ ಕಾಣಿಸಿದೆ. ಅಷ್ಟಕ್ಕೂ ನಟಿ ಮಗನ ಮುಖ ಅಡಗಿಸಿದ್ಯಾಕೆ ?
ತೈಮೂರ್ ಹುಟ್ಟಿದಾಗ ಮಗನ ಹೆಸರೂ, ಫೋಟೋವನ್ನು ತೋರಿಸುವಲ್ಲಿ ಯಾವುದೇ ಹಿಂಜರಿಕೆ ಮಾಡಿರಲಿಲ್ಲ ಕರೀನಾ. ಆದರೆ ಎರಡನೇ ಮಗನ ವಿಚಾರದಲ್ಲಿ ಸ್ವಲ್ಪ ಬದಲಾಗಿದ್ದಾರೆ. ತಮ್ಮ ಪುಸ್ತಕ ಪ್ರೆಗ್ನೆನ್ಸಿ ಬೈಬಲ್‌ನಲ್ಲಿ ಮಗನ ಫೋಟೋ ರಿಲೀಸ್ ಮಾಡಿದ್ದಾರೆ. ಮಗನ ಪೂರ್ತಿ ಹೆಸರನ್ನೂ ಇದೇ ಪುಸ್ತಕದಲ್ಲಿ ತಿಳಿಸಿದ್ದಾರೆ. ಆದರೆ ಯಾವುದನ್ನೂ ನೇರವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿಲ್ಲ. ಇದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ಮಕ್ಕಳು ಸಿನಿಮಾ ಸ್ಟಾರ್‌ಗಳಾಗೋದು ಬೇಡ ಎಂದ ಬೇಬೋ: ಮತ್ತೇನಾಗ್ಬೇಕು ?
ಪ್ರದರ್ಶನ ವ್ಯವಹಾರದಲ್ಲಿರುವುದರಿಂದ, ಬೆಳಕಿನಿಂದ ದೂರವಿರುವುದು ತುಂಬಾ ಕಷ್ಟ. ಮತ್ತು ವಿಶೇಷವಾಗಿ ನೀವು ಬಾಲಿವುಡ್‌ನ ಇಬ್ಬರು ದೊಡ್ಡ ತಾರೆಯರ ಮಗುವಾಗಿದ್ದಾಗ, ಶಟರ್‌ಬಗ್‌ಗಳಿಂದ ದೂರವಿರುವುದು ನಿಜವಾಗಿಯೂ ಕಷ್ಟ. ತೈಮೂರ್ ಮತ್ತು ಜೆಹ್ ಇದಕ್ಕೆ ಸೂಕ್ತ ಉದಾಹರಣೆಗಳಾಗಿವೆ. ಬೆಹ್ ಇತ್ತೀಚೆಗೆ ಜೆಹ್ ಅವರನ್ನು ಮಾಧ್ಯಮದಿಂದ ದೂರವಿರಿಸಲು ಹೇಗೆ ಯೋಜಿಸುತ್ತಾಳೆ ಎಂಬುದನ್ನು ಬಹಿರಂಗಪಡಿಸಿದರು.

ಕರೀನಾ ಕಪೂರ್ ಖಾನ್ ನೀಡಿದ ಸಂದರ್ಶನದಲ್ಲಿ ಸೈಫ್ ಅಲಿ ಖಾನ್ ಮತ್ತು ತಾನು ಜೆಹ್ ಜೊತೆ ಹೇಗೆ ವಿಭಿನ್ನವಾಗಿ ಸಂಭ್ರಮಿಸುತ್ತಿದ್ದಾರೆ ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ಇದು ತೈಮೂರ್‌ನ ವಿಚಾರದಲ್ಲಿ ತಿಳಿಯಿತು. ತೈಮೂರ್ ವಿಚಾರವಾಗಿ ತುಂಬಾ ಹರಟೆಯಿತ್ತು: ಏನಾಗುತ್ತಿದೆ, ಅವರು ಅವನಿಗೆ ಏನು ಹೆಸರಿಟ್ಟರು, ತೈಮೂರ್ ಎಲ್ಲಿಗೆ ಹೋಗಿದ್ದಾರೆ. ಟಿಮ್ ಅದನ್ನು ಮಾಡುತ್ತಿದ್ದಾನೆ ಹೀಗೆ ಹತ್ತು ಹಲವು ಸುದ್ದಿಗಳು. ಸೈಫ್ ಮತ್ತು ನನಗಂತೂ ಈ ಬಾರಿ ನಾವು ಸ್ವಲ್ಪ ಕೂಲಾಗಿರಬೇಕು ಎಂದು ಅನಿಸಿತು. ಅವರೇನಿದ್ದರೂ ಮಕ್ಕಳು. ಹಾಗಾಗಿ ಟಿಮ್ ಸಂತೋಷದಿಂದ ಕ್ಯಾಮೆರಾಗೆ ಪೋಸ್ ಕೊಟ್ಟರೂ ನಾವು ಜೆಹ್‌ನ ಯಾವುದೇ ಫೋಟೋ ಇನ್ನೂ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು
ಕರೀನಾ ಕಪೂರ್ ಖಾನ್ ಪಾಪರಾಜಿಗಾಗಿ ಪೋಸ್ ನೀಡಿದಾಗ ಅವರನ್ನು ಸೈಫ್ ಅಲಿ ಖಾನ್ ಹೆಚ್ಚಾಗಿ ಗೇಲಿ ಮಾಡುತ್ತಿದ್ದರು ಎಂದು ನಟಿ ಹೇಳಿದ್ದಾರೆ. ಸೈಫ್ ನಿರಂತರವಾಗಿ ನನ್ನನ್ನು ಚುಡಾಯಿಸುತ್ತಾರೆ. ತಾಯಿಯು ಸಂತೋಷದಿಂದ ಪೋಸ್ ಕೊಡುವಾಗ ಮಕ್ಕಳು ತಮ್ಮ ಅಮ್ಮನ ಪೋಸ್ ಅನ್ನು ನೋಡುತ್ತಾರೆ. ಅಮ್ಮನ ಹೆಜ್ಜೆಗಳನ್ನು ಅವರೂ ಅನುಸರಿಸುತ್ತಾರೆ ಎಂದು ಹೇಳುತ್ತಾರೆ. ಸೈಫ್ ತನ್ನ ಪೈಜಾಮಾದಲ್ಲಿ ಹೋಗುತ್ತಾನೆ. ವಿಮಾನದಲ್ಲಿ ಹಾಯಾಗಿರುತ್ತಾನೆ. ನಾನು ಜೆಹ್‌ನನ್ನು ಇದರಿಂದ ದೂರವಿರಿಸಲು ಪ್ರಯತ್ನಿಸುತ್ತಿದ್ದೇನೆ, ಅದು ಎಷ್ಟು ಕಾಲ ಉಳಿಯುತ್ತದೆ ಎಂದು ನೋಡೋಣ ಎಂದಿದ್ದಾರೆ ಹಾಸ್ಯವಾಗಿ.
ಕರೀನಾ ಕಪೂರ್ ಅವರ ಮಗ ಜೆಹ್ ಅವರು ಹುಟ್ಟಿದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಜೆಹ್ ಅವರ ಮೊದಲ ನೋಟದ ವಿಡಿಯೋ ಈ ದಿನಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜೆಹ್ ನೇರವಾಗಿ ಕ್ಯಾಮರಾವನ್ನು ನೋಡುತ್ತಿರುವುದನ್ನು ಕಾಣಬಹುದು. ಜಹಾಂಗೀರ್ ಅಲಿ ಖಾನ್ ಈಗಾಗಲೇ ಪಾಪರಾಜಿಗಳನ್ನು ಎದುರಿಸಲು ಸಿದ್ಧರಾಗಿರುವಂತಿತ್ತು ವಿಡಿಯೋದಲ್ಲಿನ ನೋಟ.
