ಎಲ್ಲರು ಎಲ್ಲಾ ಕಾಲಕ್ಕೂ ದೊಡ್ಡ ದೊಡ್ಡ ಸ್ಟಾರ್‌ಗಳಾಗಿ ಮಿಂಚಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಎವರ್‌ಗ್ರೀನ್‌ ಎನ್ನಿಸಿಕೊಂಡ ನಟ, ನಟಿಯರ ಸಂಖ್ಯೆ ಕಡಿಮೆ.

ಹುಡುಕಿದರೆ ಒಂದಷ್ಟುನಟರು ಸಿಕ್ಕಬಹುದು. ಆದರೆ ನಟಿಯರು ಸಿಗುವುದು ಕಡಿಮೆ. ಇದಕ್ಕೆ ಮುಖ್ಯ ಕಾರಣ ಬಹುತೇಕ ನಟಿಯರು ಮದುವೆಯ ನಂತರ ನಾಪತ್ತೆಯಾಗುವುದು. ಅಥವಾ ಅವರಿಗೆ ಅವಕಾಶಗಳು ಸಿಗದೇ ಹೋಗುವುದು, ಸಿಕ್ಕರೂ ಪೋಷಕ ಪಾತ್ರಗಳು. ಅದೇ ಕಾರಣಕ್ಕೆ ಬಾಲಿವುಡ್‌ ಸೇರಿದಂತೆ ಬಹುತೇಕ ಚಿತ್ರರಂಗಳಲು ಮದುವೆಯಾದ ನಟಿಯರಿಗೆ ಹೆಚ್ಚು ಅವಕಾಶ ಕೊಡುವುದಿಲ್ಲ ಎನ್ನುವ ಮಾತಿದೆ.

Add Asianetnews Kannada as a Preferred SourcegooglePreferred

ಇದ್ದರೆ ಅಮ್ಮ- ಮಗಳು ಕರೀನಾ- ಸಾರಾ ರೀತಿ ಇರಬೇಕಪ್ಪ!

ಆದರೆ ಇದು ಶುದ್ಧ ಕಲ್ಪನೆ. ಪ್ರತಿಭೆ, ನಮ್ಮಲ್ಲಿ ಉತ್ಸಾಹ ಇದ್ದರೆ ಖಂಡಿತ ಅವಕಾಶಗಳು ಸಿಗುತ್ತವೆ ಎಂದು ಕರೀನಾ ಕಪೂರ್‌ ಖಾನ್‌ ಹೇಳುವ ಮೂಲಕ ಬಾಲಿವುಡ್‌ನ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ‘ನಾನು ಮದುವೆಯಾದ ನಂತರವೂ ದೊಡ್ಡ ಸ್ಟಾರ್‌ ನಟರೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದೇನೆ.

ಫಿಟ್ ನಟಿ ಕರೀನಾಳ 8 ಮೀಲ್ ಡಯಟ್ ಪ್ಲ್ಯಾನ್ ಇದು!

ಲೀಡ್‌ ರೋಲ್‌ ಮಾಡಿದ್ದೇನೆ. ವಿದ್ಯಾಬಾಲನ್‌ ಈಗಲೂ ತಮ್ಮ ಸ್ಟಾರ್‌ಡಮ್‌ ಉಳಿಸಿಕೊಂಡಿದ್ದಾರೆ. ಇನ್ನು ಹಲವಾರು ನಟಿಯರು ಮದುವೆಯ ನಂತರವೂ ನಟಿಸುತ್ತಿದ್ದಾರೆ. ಹಾಗಾಗಿ ಬಾಲಿವುಡ್‌ ಅವಿವಾಹಿತ ನಟಿಯರಿಗಷ್ಟೇ ಅವಕಾಶ ನೀಡುತ್ತಿದೆ ಎನ್ನುವುದು ಕೇವಲ ಕಲ್ಪನೆ’ ಎಂದು ಹೇಳಿದ್ದಾರೆ. ಆ ಮೂಲಕ ಇಂದು ಬಾಲಿವುಡ್‌ನಲ್ಲಿ ಹಿಂದೆ ಇದ್ದ ಪರಿಸ್ಥಿತಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.