ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಡೆಲಿವರಿಯ ನಂತರ ಮೊದಲ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಏನ್ ಶೇರ್ ಮಾಡಿದ್ದಾರೆ..?

ಭಾನುವಾರ ತನ್ನ ಎರಡನೇ ಮಗುವಿನ ಹೆರಿಗೆ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಮಂಗಳವಾರ ನಟಿ ತನ್ನ ಪತಿ ಸೈಫ್ ಅಲಿ ಖಾನ್‌ಗಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಸಿನಿಮಾ ಭೂತ್ ಪೋಲಿಸ್ ಬಿಡುಗಡೆಯ ದಿನಾಂಕವನ್ನು ನಟಿ ಘೋಷಿಸಿದ್ದಾರೆ.

ಮತ್ತೊಂದು ಗಂಡು ಮಗುವಿಗೆ ತಾಯಿಯಾದ ಕರೀನಾ ಕಪೂರ್!

ನಟ ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಅಭಿನಯದ ಸಾಹಸ-ಭಯಾನಕ-ಹಾಸ್ಯ "ಭೂತ್ ಪೊಲೀಸ್" ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

"ಫೋಬಿಯಾ" ಮತ್ತು "ರಾಗಿಣಿ ಎಂಎಂಎಸ್" ಖ್ಯಾತಿಯ ಪವನ್ ಕೃಪಲಾನಿ ನಿರ್ದೇಶನದ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ.